ಅಕಾಲಿಕ ಬಿಳಿ ಕೂದಲಿಗೆ ಚಹಾ ಎಲೆಗಳು: ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಅವನ ದೇಹವು ಬದಲಾಗಲು ಪ್ರಾರಂಭಿಸುತ್ತದೆ. ಹಿಂದೆಲ್ಲಾ ಸಾಮಾನ್ಯವಾಗಿ 35 ರಿಂದ 40 ವರ್ಷಗಳು ದಾಟಿದ ನಂತರ, ಜನರ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತಿತ್ತು. ಆದರೆ ಇತ್ತೀಚಿನ ಜೀವನಶೈಲಿಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಲವರಿಗೆ ಕೂದಲು ಬಿಳಿ ಆಗುತ್ತದೆ. ಅಕಾಲಿಕ ಬಿಳಿ ಕೂದಲಿನಿಂದಾಗಿ ಕೆಲವು ಮುಜುಗರದ ಭಾವನೆ ಅನ್ನು ಅನುಭವಿಸುತ್ತಾರೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಒಂದು ವಸ್ತು ಈ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ?
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುತ್ತೆ ಅಡುಗೆ ಮನೆಯಲ್ಲಿರುವ ಈ ವಸ್ತು :
ಅನೇಕ ಜನರು ಬಿಳಿ ಕೂದಲು ಮರೆಮಾಚಲು ರಾಸಾಯನಿಕ ಆಧಾರಿತ ಹೇರ್ ಡೈ ಬಳಸುತ್ತಾರೆ, ಆದರೆ ಇದು ಕೂದಲು ಡ್ರೈ ಆಗಲು ಕಾರಣವಾಗಬಹುದು, ಆದ್ದರಿಂದ ನಾವು ಕಪ್ಪು ಕೂದಲು ಪಡೆಯಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಉತ್ತಮ. ವಾಸ್ತವವಾಗಿ, ಅಡುಗೆ ಮನೆಯಲ್ಲಿ ಬಳಸುವ ಒಂದು ವಸ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ. ಅಡುಗೆಮನೆಯಲ್ಲಿ ಇರಿಸಲಾಗಿರುವ ಚಹಾ ಎಲೆಗಳ ಸಹಾಯದಿಂದ ನಿಮ್ಮ ಕೂದಲನ್ನು ಮತ್ತೆ ಕಪ್ಪು ಮಾಡಬಹುದು ಎಂದು ಅನೇಕ ತಜ್ಞರು ನಂಬುತ್ತಾರೆ. ಇದು ನಮ್ಮ ಹಿರಿಯರ ಕಾಲದಿಂದಲೂ ಸಾಮಾನ್ಯವಾಗಿ ಬಳಸುವ ಮನೆಮದ್ದು.
ಇದನ್ನೂ ಓದಿ- White Hair:ಈ ವಿಟಮಿನ್ ಕೊರತೆಯಿಂದ ಕೂದಲು ಬೆಳ್ಳಗಾಗುತ್ತೆ
ಚಹಾ ಎಲೆಗಳ ಸಹಾಯದಿಂದ ಕೂದಲನ್ನು ಕಪ್ಪಾಗಿಸಿ:
ಚಹಾ ಎಲೆಗಳನ್ನು ನೈಸರ್ಗಿಕ ಕೂದಲು ಬಣ್ಣವೆಂದು ಪರಿಗಣಿಸಲಾಗುತ್ತದೆ. ಇದನ್ನು ಬಳಸಲು, ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ನಂತರ ಅದರಲ್ಲಿ ಸುಮಾರು 5 ಟೀ ಚಮಚ ಅಥವಾ 6 ಟೀ ಬ್ಯಾಗ್ಗಳನ್ನು ಹಾಕಿ, ಅದನ್ನು ಸಂಪೂರ್ಣವಾಗಿ ಕುದಿಸಿ ಮತ್ತು ನಂತರ ಅದನ್ನು ತಣ್ಣಗಾಗಲು ಬಿಡಿ. ಇದನ್ನು ನೆತ್ತಿಯ ಮೇಲೆ ಹಚ್ಚಿ ಸುಮಾರು 45 ನಿಮಿಷಗಳ ಕಾಲ ಒಣಗಲು ಬಿಡಿ. ಅಂತಿಮವಾಗಿ, ಉಗುರು ಬೆಚ್ಚಗಿನ ನೀರಿನಿಂದ ತಲೆಯನ್ನು ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಗಳಿಗಾಗಿ ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಅನುಸರಿಸಿ.
ಇದನ್ನೂ ಓದಿ- White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೇಹಣ್ಣನ್ನು ಈ ರೀತಿ ಬಳಸಿ
ಈ ಮನೆಮದ್ದಿನ ಪರಿಣಾಮವು ಇನ್ನೂ ಹೆಚ್ಚು ಪರಿಣಾಮಕಾರಿ ಆಗಬೇಕೆಂದು ನೀವು ಬಯಸಿದರೆ, ಚಹಾ ಎಲೆಗಳಿಗೆ 2 ರಿಂದ 3 ಚಮಚ ಕಾಫಿ ಪುಡಿಯನ್ನು ಸೇರಿಸಿ ಮತ್ತು ಸುಮಾರು 15 ನಿಮಿಷಗಳ ಕಾಲ ಗ್ಯಾಸ್ ಮೇಲೆ ಕುದಿಸಿ. ನಂತರ ತಣ್ಣಗಾದ ನಂತರ ಅದನ್ನು ಕೂದಲ ಬುಡದಿಂದ ಹಚ್ಚಿ 30 ನಿಮಿಷಗಳ ಕಾಲ ಒಣಗಲು ಬಿಡಿ. ಇದರಿಂದ ಕೂದಲು ಕಪ್ಪಾಗುತ್ತದೆ. ಆದರೆ ನೆನಪಿಡಿ ಟೀ ಎಲೆಯ ನೀರನ್ನು ಕೂದಲಿಗೆ ಹಚ್ಚಿದ ನಂತರ, ಶಾಂಪೂ ಬಳಸಬೇಡಿ, ಅದು ಕೂದಲಿನ ಬಣ್ಣವನ್ನು ಹಗುರಗೊಳಿಸುತ್ತದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.