ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ

Elusuttina Kote: ಪಟ್ಟಣದ  ಅಂಚೆ ಕಚೇರಿ ಸಮೀಪದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. 

Written by - Yashaswini V | Last Updated : Aug 19, 2024, 12:28 PM IST
  • ಗಡಿ ತಾಲೂಕಿನಲ್ಲಿ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ
  • ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಐತಿಹಾಸಿಕ ಏಳು ಸುತ್ತಿನ ಕೋಟೆ
  • ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿತ
ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ title=

Elusuttina Kote Wall Collapse: ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತುಮಕೂರು ಜಿಲ್ಲೆ ಪಾವಗಡ ತಾಲೂಕು ಐತಿಹಾಸಿಕ ಕೋಟೆಕೊತ್ತಲಗಳ ನಾಡು. ಆದರೆ ಇದೀಗ ಪಾವಗಡ ಪಟ್ಟಣದ ಹೃದಯ ಭಾಗದಲ್ಲಿರುವ ಕೋಟೆ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. 

ಪಟ್ಟಣದ  ಅಂಚೆ ಕಚೇರಿ ಸಮೀಪದ ಐತಿಹಾಸಿಕ ಏಳು ಸುತ್ತಿನ ಕೋಟೆಯ (Elusuttina Kote) ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಇದಕ್ಕೆಲ್ಲ ಪಾವಗಡ ಪಟ್ಟಣದಲ್ಲಿ ಪ್ರಭಾವಿಗಳು ಕೋಟೆ ಪರಿಸರವನ್ನು ಅತಿಕ್ರಮಣ ಮಾಡಿದ್ದರ ಪರಿಣಾಮ ಐತಿಹಾಸಿಕ ಕೋಟೆ ಅವಸಾನದ ಅಂಚಿಗೆ ಬಂದಿದೆ. 

ಇದನ್ನೂ ಓದಿ- ವಿಶ್ವ ದರ್ಜೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಪ್ರವಾಸಿ ತಾಣಗಳಿಗೆ ವೋಟ್ ಮಾಡಲು ಆಹ್ವಾನ

ಕೈಕಟ್ಟಿ ಕುಳಿತ ಅಧಿಕಾರಿಗಳ ವರ್ಗ: 
ಇಂತಹವುಗಳನ್ನು ಉಳಿಸಬೇಕಾದಂತಹ ಅಧಿಕಾರಿಗಳ ವರ್ಗ ಮೌನ ವಹಿಸಿದ್ದು, ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಕೋಟೆಯ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಂಡು ಮನೆ, ಕಾಂಪ್ಲೆಕ್ಸ್ ಸೇರಿದಂತೆ ಕಟ್ಟಡಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಸದ್ಯ ಕೋಟೆ ಬಿದ್ದಿರುವ ಸ್ಥಳದಲ್ಲಿನ ಪಕ್ಕದಲ್ಲಿಯೇ ಬೃಹತ್ ಕಟ್ಟಡದ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದೆ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. 

ಇದನ್ನೂ ಓದಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸದ್ಯ ಏಕಾಏಕಿ ಕೋಟೆ ಗೋಡೆಯ ಸಮೀಪ ಬೃಹತ್ ಕಟ್ಟಡಗಳ ಕಾಮಾಗಾರಿಗಳು ನಡೆಯುತ್ತಿರುವುದರಿಂದ ಕೋಟೆಯ ಕೆಳಭಾಗದಲ್ಲಿ ಮಣ್ಣು ಸಡಿಲಗೊಂಡು ಕೋಟೆಯ ಬೃಹತ್ ಕಲ್ಲುಗಳು ಜಾರಿ ಬಿದ್ದಿವೆ ಎನ್ನಲಾಗಿದೆ. ಇನ್ನಾದರೂ ತುಮಕೂರು ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಎಚ್ಚೆತ್ತು, ಐತಿಹಾಸಿಕ ಕೋಟೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News