ನವದೆಹಲಿ: ನಾವು ಸಾಮಾನ್ಯವಾಗಿ ವೀಳ್ಯದೆಲೆಯನ್ನು ವಿವಿಧ ರೀತಿಯಲ್ಲಿ ಬಳಸುತ್ತೇವೆ. ದೇವಸ್ಥಾನದಲ್ಲಿ ಪೂಜೆ ಮಾಡುವುದಿರಲಿ ಅಥವಾ ಸಿಹಿ ಪಾನ ಮಾಡುವುದಿರಲಿ ವೀಳ್ಯದೆಲೆ ಬಳಸುವುದು ಸಾಮಾನ್ಯ ಅಭ್ಯಾಸ. ವೀಳ್ಯದೆಲೆಯನ್ನು ಜಗಿದು ತಿಂದರೆ ಆರೋಗ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಅನ್ನೋದು ಕೆಲವೇ ಜನರಿಗೆ ತಿಳಿದಿದೆ. ಇದರ ಆರೋಗ್ಯಕಾರಿ ಗುಣಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಇದನ್ನೂ ಓದಿ: ನಿಂಬೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆಯೇ? ಏನಿದರ ಹಿಂದಿನ ಸತ್ಯ
ವೀಳ್ಯದೆಲೆ ಜಗಿಯುವುದರಿಂದಾಗುವ ಪ್ರಯೋಜನಗಳು
- ಆ್ಯಂಟಿಆಕ್ಸಿಡೆಂಟ್, ಆ್ಯಂಟಿಮೈಕ್ರೊಬಿಯಲ್ ಗುಣಗಳು ವೀಳ್ಯದೆಲೆಯೊಳಗೆ ಇರುತ್ತವೆ. ಇದರ ಸೇವನೆಯಿಂದ ಕೆಮ್ಮಿನ ಸಮಸ್ಯೆಯನ್ನು ಸಹ ನಿವಾರಿಸಿಕೊಳ್ಳಬಹುದು. ಅಲ್ಲದೆ ಗಂಟಲನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
- ವೀಳ್ಯದೆಲೆ ಹೊಟ್ಟೆಯ ಫಿಟ್‍ನೆಸ್‍ಗೆ ತುಂಬಾ ಒಳ್ಳೆಯದು. ಇದರ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಬಹುದು. ವೀಳ್ಯದೆಲೆ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.
- ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದರ ಎಲೆಗಳನ್ನು ಜಗಿದು ತಯಾರಿಸಿದ ರಸವು ಬಾಯಿಯಲ್ಲಿ ಅಡಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದರಿಂದ ನೀವು ವಾಸನೆಯ ಬಗ್ಗೆ ಚಿಂತಿಸದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬಹುದು.
- ವೀಳ್ಯದೆಲೆಯು ಒಸಡುಗಳಲ್ಲಿನ ನೋವು ಅಥವಾ ಊತವನ್ನು ತೆಗೆದುಹಾಕಲು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೆಂದರೆ ಅದರೊಳಗೆ ಇಂತಹ ಅನೇಕ ಗುಣಗಳು ಕಂಡುಬರುತ್ತವೆ, ಇದು ವಸಡುಗಳಲ್ಲಿ ಉರಿಯೂತವನ್ನು ತಡೆಯಲು ಕೆಲಸ ಮಾಡುತ್ತದೆ.
ಇದನ್ನೂ ಓದಿ: Male Fertility : ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಕಮಲದ ಹೂವಿನ ಬೀಜಗಳನ್ನು!
ಬೇಸಿಗೆಯಲ್ಲಿ ವೀಳ್ಯದೆಲೆ ತಿನ್ನಬಹುದೇ..?
ವೀಳ್ಯದೆಲೆಯನ್ನು ಚಳಿಗಾಲದಲ್ಲಿ ತಿನ್ನುವುದು ಉತ್ತಮ. ಆದರೆ, ನೀವು ಇದನ್ನು ಸೀಮಿತ ಪ್ರಮಾಣದಲ್ಲಿ ಬೇಸಿಗೆಯಲ್ಲಿ ಸೇವಿಸಬೇಕು. ತಿನ್ನುವ ಮೊದಲು ಎಲೆಯನ್ನು ಚೆನ್ನಾಗಿ ತೊಳೆಯಿರಿ, ಇದರಿಂದ ಅದರೊಳಗಿನ ಧೂಳು ಮತ್ತು ಕೊಳಕು ನಿವಾರಣೆಯಾಗುತ್ತದೆ. ನಿಯಮಿತ ಪ್ರಮಾಣದಲ್ಲಿ ವೀಳ್ಯದೆಲೆ ಸೇವಿಸುವುದರಿಂದ ನಿಮಗೆ ಅನೇಕ ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.