ನವದೆಹಲಿ : ಪ್ರತಿ ಮನೆಯಲ್ಲೂ ಈರುಳ್ಳಿಯ ಬಳಕೆ ಇದ್ದೇ ಇರುತ್ತದೆ (Benefits of Onion). ಈರುಳ್ಳಿಯನ್ನು ಸಲಾಡ್, ತರಕಾರಿಗಳು ಮತ್ತು ಇತರ ವಸ್ತುಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ಉತ್ತಮ ಔಷಧಿಯಾಗಿದೆ. ಅಜೀರ್ಣ ಮತ್ತು ಲೂಸ್ ಮೋಶನ್ ಸಂದರ್ಭದಲ್ಲಿ ಈರುಳ್ಳಿ ಪ್ರಯೋಜನಕಾರಿಯಾಗಿದೆ (Benefits of onion in summer). ಇದು ಬ್ಯಾಕ್ಟೀರಿಯಾ ವಿರೋಧಿ, ನೋವು ನಿವಾರಕ, ಮಧುಮೇಹ ವಿರೋಧಿ, ಮತ್ತು ಸಂಧಿವಾತ ವಿರೋಧಿಯಾಗಿದೆ. ಈರುಳ್ಳಿಯಲ್ಲಿ ಆ್ಯಂಟಿ ಒಕ್ಸಿಡೆಂಟ್ ಅಂಶಗಳಿದ್ದು, ಇದು ದೇಹಕ್ಕೆ ಶಾಖದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ವಿಟಮಿನ್ ಎ, ಬಿ6, ಬಿ-ಕಾಂಪ್ಲೆಕ್ಸ್ ಮತ್ತು ಸಿ ಕೂಡ ಈರುಳ್ಳಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಈರುಳ್ಳಿ ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳಿಂದ ಸಮೃದ್ಧವಾಗಿದೆ.
ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ 4 ಪ್ರಯೋಜನಗಳು :
1. ಹೀಟ್ ಸ್ಟ್ರೋಕ್ ತಡೆಯುವುದು :
ಪ್ರತಿ ವರ್ಷ ಬೇಸಿಗೆಯಲ್ಲಿ ಅನೇಕ ಜನರು ಹೀಟ್ ಸ್ಟ್ರೋಕ್ ಗೆ (Heat Stroke) ಬಲಿಯಾಗುತ್ತಾರೆ. ಈರುಳ್ಳಿಯನ್ನು ಸೇವಿಸುವುದರಿಂದ ಹೀಟ್ ಸ್ಟ್ರೋಕ್ ಸಮಸ್ಯೆಯನ್ನು ದೂರವಿಡುವುದು ಸಾಧ್ಯವಾಗುತ್ತದೆ. ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ನೀರಿನ ಅಂಶ ಇರುತ್ತದೆ (Benefits of onion). ಇದು ದೇಹಕ್ಕೆ ಅಗತ್ಯವಿರುವ ನೀರಿನ ಅಂಶವನ್ನು ಪೂರೈಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸಬೇಕು.
ಇದನ್ನೂ ಓದಿ : Dry Fig With Milk: ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಈ ಡ್ರೈಫ್ರೂಟ್ ಸೇವಿಸಿ, ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿರುತ್ತದೆ
2. ತಲೆ ಸುತ್ತುವುದನ್ನು ತಡೆಯುತ್ತದೆ :
ಅತಿಯಾದ ಬಿಸಿಲಿನಿಂದ ಅಥವಾ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಡೆಯುವುದರಿಂದ ಪ್ರತಿಯೊಬ್ಬರಿಗೂ ತಲೆಸುತ್ತು ಬರುವುದು ಸಾಮಾನ್ಯ. ಆದರೆ ಮನೆಯಿಂದ ಹೊರಡುವಾಗ ಈರುಳ್ಳಿ ರಸವನ್ನು ಕುಡಿದರೆ ಬಿಸಿಲಿನ ಕಾರಣದಿಂದ ಉಂಟಾಗುವ ತಲೆಸುತ್ತು ದೂರವಾಗುತ್ತದೆ (Onion benefits in summer). ಅದರ ರುಚಿಯನ್ನು ಹೆಚ್ಚಿಸಲು ಈರುಳ್ಳಿ ರಸಕ್ಕೆ ನಿಂಬೆ ಮತ್ತು ಪುದೀನಾವನ್ನು ಸೇರಿಸಬಹುದು.
3. ಮೂಗಿನ ರಕ್ತಸ್ರಾವ :
ಕೆಲವರಿಗೆ ಬೇಸಿಗೆಯಲ್ಲಿ ಬಿಸಿಲಿನಿಂದಾಗಿ ಅಥವಾ ಅತಿಯಾದ ಶಾಖದಿಂದ ಮೂಗಿನಿಂದ ರಕ್ತಸ್ರಾವವಾಗುತ್ತದೆ (Nose bleeding). ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದರೆ ಹಸಿ ಈರುಳ್ಳಿಯನ್ನು ಅರೆದು ಅದರ ವಾಸನೆ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಬೇಸಿಗೆ ದಿನಗಳಲ್ಲಿ ಹೊರಗೆ ಹೋಗುವಾಗ ಈರುಳ್ಳಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ : Diabetes : ಸಕ್ಕರೆ ಕಾಯಿಲೆ ಇರುವವರು ಮಿಸ್ ಮಾಡದೆ ಸೇವಿಸಿ ಈ ಆಹಾರ!
4. ಮೂತ್ರ ವಿಸರ್ಜನೆಯ ವೇಳೆ ಉರಿ :
ಬೇಸಿಗೆಯ ದಿನಗಳಲ್ಲಿ ಜನರು ಉರಿ ಮೂತ್ರದ ಸಮಸ್ಯೆಯನ್ನು ಎದುರಿಸುತ್ತಾರೆ. ಈರುಳ್ಳಿ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.