Health Benefits of Guava: ಚಳಿಗಾಲದಲ್ಲಿ ಸೀಬೆಹಣ್ಣನ್ನು ಸೇವಿಸಿ ಈ ರೋಗಗಳಿಂದ ದೂರವಿರಿ

ಹಲವರಿಗೆ ಸೀಬೆಹಣ್ಣು ಬಹಳ ಇಷ್ಟ, ಇನ್ನೂ ಕೆಲವರಿಗೆ ಸೀಬೆಹಣ್ಣು ಎಂದರೇ ಆಗುವುದಿಲ್ಲ. ಆದರೆ ಅದರ ಔಷಧೀಯ ಗುಣಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಸೀಬೆಹಣ್ಣಿನ ಪ್ರಾಚೀನ ಹೆಸರು ಅಮೃತ್ ಅಥವಾ ಅಮೃತ ಹಣ್ಣು. ಅನೇಕ ರೋಗಗಳನ್ನು ಗುಣಪಡಿಸಲು ಸೀಬೆಹಣ್ಣನ್ನು ಬಳಸಲಾಗುತ್ತದೆ.

Last Updated : Dec 11, 2020, 12:50 PM IST
  • ಸೀಬೆಹಣ್ಣಿನ ಪ್ರಾಚೀನ ಹೆಸರು ಅಮೃತ್ ಅಥವಾ ಅಮೃತ ಹಣ್ಣು
  • ಗುವಾ/ಸೀಬೆಹಣ್ಣು ಹಲವು ರೋಗಗಳಿಗೆ ರಾಮಬಾಣವಿದ್ದಂತೆ
  • ಸೀಬೆಹಣ್ಣಿ10 ಪ್ರಯೋಜನಗಳನ್ನು ತಿಳಿಯಿರಿ
Health Benefits of Guava: ಚಳಿಗಾಲದಲ್ಲಿ ಸೀಬೆಹಣ್ಣನ್ನು ಸೇವಿಸಿ ಈ ರೋಗಗಳಿಂದ ದೂರವಿರಿ title=
Image courtesy: Getty

ನವದೆಹಲಿ: ಪ್ರಕೃತಿ ನಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೈಸರ್ಗಿಕ ಔಷಧವು ಪ್ರತಿಯೊಬ್ಬರ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅಂದರೆ ದೇಹವನ್ನು ಆರೋಗ್ಯವಾಗಿಡಲು ಬಳಸಬಹುದಾದ ಹಣ್ಣು, ತರಕಾರಿಗಳು, ಸೊಪ್ಪುಗಳು.... ಆದ್ದರಿಂದ ಇಂದು ನಾವು ಸೀಬೆಹಣ್ಣಿನ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಗುವಾ/ಸೀಬೆಹಣ್ಣು ಮಲಬದ್ಧತೆ, ಸಂಧಿವಾತ, ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು, ಚರ್ಮ ರೋಗಗಳು ಮತ್ತು ಮಧುಮೇಹ ಸೇರಿದಂತೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಸೀಬೆಹಣ್ಣಿ10 ಪ್ರಯೋಜನಗಳನ್ನು ತಿಳಿಯಿರಿ.
(ಈ ಎಲ್ಲಾ ಫೋಟೋಗಳ ಕೃಪೆ: Getty Images)

* ಸೀಬೆಹಣ್ಣು ತಲೆನೋವನ್ನು ನಿವಾರಿಸುತ್ತದೆ:
Health benefits of Guava Guava relieves old headaches
ಸೀಬೆಹಣ್ಣಿನ ಸೇವನೆಯಿಂದ ತಲೆ ನೋವು ನಿವಾರಣೆಯಾಗುತ್ತದೆ. ಇದಲ್ಲದೆ ಸೀಬೆಹಣ್ಣನ್ನು ಪೇಸ್ಟ್ ಮಾಡಿ ತಲೆಯ ಮೇಲೆ ಹಚ್ಚುವುದರಿಂದಲೂ ದೀರ್ಘಕಾಲದ ತಲೆನೋವಿನಿಂದ ಮುಕ್ತಿ ಪಡೆಯಬಹುದು.

* ಶೀತದಿಂದ ಪರಿಹಾರ:
Health benefits of Guava Guava relieves cold
ಚಳಿಗಾಲದಲ್ಲಿ (Winter) ಸೀಬೆಹಣ್ಣನ್ನು ಸೇವಿಸುವುದರಿಂದ ಶೀತ ಗುಣವಾಗುತ್ತದೆ.

* ಹಲ್ಲು ನೋವಿನ ನಿವಾರಣೆ:
Health benefits of Guava Guava relieves toothache
ಹಲ್ಲು ನೋವಿನ ನಿವಾರಣೆಗೆ ಸೀಬೆಹಣ್ಣು ಪ್ರಯೋಜನಕಾರಿಯಾಗಿದೆ. ಸೀಬೆಹಣ್ಣಿನ ಎಲೆಗಳನ್ನು ಅಗಿಯುವುದರಿಂದ ಹಲ್ಲುನೋವಿನಿಂದ ಪರಿಹಾರ ಸಿಗುತ್ತದೆ.

DRY SKIN ಇರುವವರು ಚಳಿಗಾಲದಲ್ಲಿ ಇವುಗಳನ್ನು ತಪ್ಪದೇ ಅನುಸರಿಸಿ

* ಬಾಯಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರಯೋಜನಕಾರಿ:
Health benefits of Guava Guava is beneficial in oral diseases
ಸೀಬೆಹಣ್ಣು ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಸೀಬೆಹಣ್ಣಿನ ಎಲೆಗಳಿಂದ ಕಷಾಯ ತಯಾರಿಸಿ ಬಾಯಿ ತೊಳೆಯುವುದರಿಂದ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು.

* ಸಂಧಿವಾತಕ್ಕೆ ಪ್ರಯೋಜನಕಾರಿ:
 Health benefits of Guava Guava is beneficial in arthritis
ಸಂಧಿವಾತ ಸಮಸ್ಯೆ ಇರುವವರಿಗೆ ಸೀಬೆ (Guava) ಎಲೆಗಳು ಪ್ರಯೋಜನಕಾರಿಯಾಗಿದೆ. ಸೀಬೆ ಎಲೆಗಳ ಪೇಸ್ಟ್ ಅನ್ನು ಹಚ್ಚುವುದರಿಂದ ಸಂಧಿವಾತವನ್ನು ಗುಣಪಡಿಸುತ್ತದೆ.

* ಮಧುಮೇಹವನ್ನು ನಿಯಂತ್ರಿಸಲು ಸೀಬೆ ಸಹಾಯಕ:
Health benefits of Guava Guava helps in controlling diabetesಸೀಬೆಹಣ್ಣಿನಲ್ಲಿ ನಾರಿನಂಶವಿದೆ. ಸೀಬೆ ಹಣ್ಣನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ಮಧುಮೇಹ ನಿಯಂತ್ರಣದಲ್ಲಿಡುವ ಈ ತಿನಿಸುಗಳ ಬಗ್ಗೆ ನಿಮಗೆ ತಿಳಿದಿದೆಯೇ!

* ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ:
Health benefits of Guava Guava relieves cold and cough
ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಿಸಲು ಸೀಬೆ ಪ್ರಯೋಜನಕಾರಿಯಾಗಿದೆ. ಬೆಂಕಿಯಲ್ಲಿ ಹುರಿದ ಸೀಬೆಹಣ್ಣು ತಿನ್ನುವುದರಿಂದ ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತದೆ.

*ಮಲಬದ್ದತೆ ನಿವಾರಣೆ:
Health benefits of Guava Eating guava ends constipation
ಸೀಬೆಹಣ್ಣಿನ ಸೇವನೆಯು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದಲ್ಲದೆ ಸೀಬೆ ಎಲೆಗಳ ಕಷಾಯವು ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.

* ಮುಖದ ಕಾಂತಿ ಹೆಚ್ಚುತ್ತದೆ:
Health benefits of Guava Eating guava brings glow on the face
ಸೀಬೆಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಇರುತ್ತದೆ. ಇದು ಚರ್ಮ ರೋಗಗಳನ್ನು ಗುಣಪಡಿಸುತ್ತದೆ. ಸೀಬೆಹಣ್ಣನ್ನು ತಿನ್ನುವುದರಿಂದ ಮುಖ ಕಾಂತಿ ಹೆಚ್ಚುತ್ತದೆ.

ಚಳಿಗಾಲದಲ್ಲಿ ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ, ಪಡೆಯಿರಿ ಈ ಆರೋಗ್ಯಕರ ಪ್ರಯೋಜನ

* ರಕ್ತಹೀನತೆಯನ್ನು ನಿವಾರಿಸುತ್ತದೆ:
Health benefits of Guava Eating guava increases homoglobin
ಸೀಬೆಹಣ್ಣು ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸುತ್ತದೆ. ಪ್ರತಿದಿನ ಸೀಬೆಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ.

Trending News