ಈ ಪೋಷಕಾಂಶದ ಕೊರತೆಯಿಂದಾಗಿ ಕೂದಲು ಉದುರುತ್ತದೆ.! ದಟ್ಟ ಕೂದಲು ಬೇಕಾದರೆ ಏನು ಮಾಡಬೇಕು ?

ಧೂಳು, ಸೂರ್ಯನ ಬೆಳಕು ಮತ್ತು ಮಾಲಿನ್ಯ ಕೂದಲಿನ ಸಮಸ್ಯೆಯ ಮುಖ್ಯ ಕಾರಣವಾಗಿದೆ. ಇದರ ಜೊತೆ ಆಹಾರಗಳಲ್ಲಿನ ಏರು ಪೇರು ಕೂಡಾ  ಕೂದಲು ಉದುರುವುದಕ್ಕೆ ಕಾರಣವಾಗಿದೆ. 

Written by - Ranjitha R K | Last Updated : Dec 30, 2022, 11:25 AM IST
  • ಕೂದಲಿನ ಸೌಂದರ್ಯ ಮುಖದ ಸೌಂದರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
  • ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಎದುರಿಸುವ ಸಮಸ್ಯೆಯಾಗಿದೆ.
  • ಆಹಾರಗಳಲ್ಲಿನ ಏರು ಪೇರು ಕೂಡಾ ಕೂದಲು ಉದುರುವುದಕ್ಕೆ ಕಾರಣವಾಗಿದೆ
ಈ ಪೋಷಕಾಂಶದ ಕೊರತೆಯಿಂದಾಗಿ ಕೂದಲು ಉದುರುತ್ತದೆ.! ದಟ್ಟ ಕೂದಲು ಬೇಕಾದರೆ ಏನು ಮಾಡಬೇಕು ?   title=
Protein Deficiency May Cause Hair Fall

ಬೆಂಗಳೂರು : ಕಪ್ಪು, ದಟ್ಟ ಸುಂದರವಾದ ಕೂದಲು ಹೊಂದುವುದು ಪ್ರತಿ ಹೆಣ್ಣಿನ ಬಯಕೆಯಾಗಿರುತ್ತದೆ. ಕೂದಲಿನ ಸೌಂದರ್ಯ ಮುಖದ ಸೌಂದರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದಕ್ಕಾಗಿಯೇ ಯುವತಿಯರು ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆಯಾಗಿದೆ.  ಅದರಲ್ಲೂ ವಿಶೇಷವಾಗಿ ಯುವ ಜನರು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಧೂಳು, ಸೂರ್ಯನ ಬೆಳಕು ಮತ್ತು ಮಾಲಿನ್ಯ ಕೂದಲಿನ ಸಮಸ್ಯೆಯ ಮುಖ್ಯ ಕಾರಣವಾಗಿದೆ. ಇದರ ಜೊತೆ ಆಹಾರಗಳಲ್ಲಿನ ಏರು ಪೇರು ಕೂಡಾ  ಕೂದಲು ಉದುರುವುದಕ್ಕೆ ಕಾರಣವಾಗಿದೆ. 

ಪ್ರೋಟೀನ್ ಕೊರತೆಯಿಂದಲೂ ಉದುರುತ್ತದೆ ಕೂದಲು :
ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ, ಅದು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಪ್ರೋಟೀನ್ ಕೊರತೆಯಿದ್ದರೆ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ ಎನ್ನುವುದು ಆರೋಗ್ಯ ತಜ್ಞರ ಮಾತು.   ಕೂದಲಿಗೆ ಎಣ್ಣೆ, ಶಾಂಪೂ ಹಚ್ಚುವ ಜೊತೆಗೆ ಆಂತರಿಕ ಪೋಷಣೆ ನೀಡುವುದು ಕೂಡಾ ಬಹಳ ಮುಖ್ಯ.  

ಇದನ್ನೂ ಓದಿ : ಮಧುಮೇಹಿಗಳ ಶುಗರ್ ಲೆವೆಲ್ ಹೆಚ್ಚಿಸುತ್ತದೆ ಈ ಹಿಟ್ಟಿನಿಂದ ತಯಾರಿಸಿದ ಚಪಾತಿ.! ನೀವು ಬಳಸುವ ಹಿಟ್ಟು ಯಾವುದು ?

ಪ್ರೋಟೀನ್ ಏಕೆ ಮುಖ್ಯ? :
ಸಾಮಾನ್ಯವಾಗಿ ಸ್ನಾಯುಗಳು ಮತ್ತು ಮೂಳೆಗಳ ಬಲಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಲಾಗುತ್ತದೆ. ಆದರೆ ಈ ಪೋಷಕಾಂಶದ ಕೊರತೆಯು ನಮ್ಮ ಕೂದಲಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.  

ಪ್ರೋಟೀನ್ ಕೊರತೆಯ ಲಕ್ಷಣಗಳು :
ಸರಿಯಾದ ಸಮಯದಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಗುರುತಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಪ್ರೋಟೀನ್ ಕೊರತೆಯಾದರೆ ಕೂದಲು ಇದ್ದಕ್ಕಿದ್ದಂತೆ ಬೆಳೆಯುವುದನ್ನು ನಿಲ್ಲಿಸುತ್ತದೆ. ಉಗುರುಗಳು ಕೂಡಾ ದುರ್ಬಲವಾಗಿ ಬಹಳ ಬೇಗ ಮುರಿಯುತ್ತವೆ. ಪ್ರೋಟೀನ್ ಕೊರತೆಯು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೇಹದಲ್ಲಿ ಪ್ರೋಟೀನ್ ಕೊರತೆ ಕಂಡು ಬಂದರೆ ದೇಹದ ಅಲ್ಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಾದಾಗ  ಪ್ರೋಟೀನ್ ಭರಿತ ಆಹಾರದ ಸೇವನೆಯನ್ನು ಹೆಚ್ಚಿಸುವುದು ಅಗತ್ಯ. 

ಇದನ್ನೂ ಓದಿ : Eating Banana: ಮಾರುಕಟ್ಟೆಯಲ್ಲಿ ಸಿಗುವ ಈ ರೀತಿಯ ಬಾಳಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಹಾನಿಯೇ ಜಾಸ್ತಿ

ಪ್ರೋಟೀನ್ ಕೊರತೆ ನೀಗಿಸಲು ಈ ಆಹಾರಗಳನ್ನು ಸೇವಿಸಿ :
1. ಬೇಳೆಕಾಳುಗಳು
2. ಮೊಟ್ಟೆ
3. ಡ್ರೈ ಫ್ರುಟ್ಸ್ 
4. ಕಡಲೆಕಾಯಿ
5. ಮೀನು
6. ಹಾಲು
7. ಸೋಯಾಬೀನ್
8. ಪನೀರ್
9. ಚಿಕನ್
10. ಮಾಂಸ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News