ಈ ಕೆಟ್ಟ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ, ಇಲ್ಲದಿದ್ದರೆ ಮೂಳೆಗಳು ದುರ್ಬಲವಾಗುತ್ತವೆ..!

ಮೂಳೆಗಳಲ್ಲಿ ದೌರ್ಬಲ್ಯ ಮತ್ತು ಕೀಲು ನೋವಿನ ಸಮಸ್ಯೆ ವೃದ್ಧಾಪ್ಯದಲ್ಲಿ ಮಾತ್ರ ಕಾಣಿಸುತ್ತದೆ ಎಂದು ಬಹುತೇಕ ಜನರು ನಂಬಿರುತ್ತಾರೆ.

Written by - Puttaraj K Alur | Last Updated : Oct 10, 2021, 10:07 AM IST
  • ಮೂಳೆಗಳ ಬಲವು ನಮ್ಮ ದಿನಿನಿತ್ಯದ ಜೀವನಶೈಲಿಯನ್ನು ಅವಲಂಬಿಸಿರುತ್ತದೆ
  • ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ
  • ಧೂಮಪಾನ, ಮದ್ಯಪಾನ & ವ್ಯಾಯಾಮ ಮಾಡದಿರುವಿಕೆ ಮೂಳೆ ಸವತಕ್ಕೆ ಕಾರಣವಾಗಬಹುದು
ಈ ಕೆಟ್ಟ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ, ಇಲ್ಲದಿದ್ದರೆ ಮೂಳೆಗಳು ದುರ್ಬಲವಾಗುತ್ತವೆ..!  title=
ಮೂಳೆಗಳಲ್ಲಿ ದೌರ್ಬಲ್ಯ ಮತ್ತು ಕೀಲು ನೋವಿನ ಸಮಸ್ಯೆ

ನವದೆಹಲಿ: ಮೂಳೆಗಳಲ್ಲಿ ದೌರ್ಬಲ್ಯ ಮತ್ತು ಕೀಲು ನೋವಿನ ಸಮಸ್ಯೆ(Joint Pain) ವೃದ್ಧಾಪ್ಯದಲ್ಲಿ ಮಾತ್ರ ಕಾಣಿಸುತ್ತದೆ ಎಂದು ಬಹುತೇಕ ಜನರು ನಂಬಿರುತ್ತಾರೆ. ಆದರೆ ವಯಸ್ಸಾದವರಲ್ಲಿಯೂ ಈ ರೀತಿಯ ಯಾವುದೇ ಸಮಸ್ಯೆ ಇಲ್ಲದವರನ್ನು ನೀವು ನೋಡಿರಬೇಕು. ವಾಸ್ತವವಾಗಿ ಮೂಳೆಗಳ ಬಲವು ನಮ್ಮ ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ನಾವು ಅದನ್ನು ನಿಯಂತ್ರಿಸಬಹುದು. ನಮ್ಮ ದಿನನಿತ್ಯದ ಅಭ್ಯಾಸಗಳನ್ನು ಸುಧಾರಿಸಿಕೊಂಡರೆ ನಾವು ಮೂಳೆಗಳನ್ನು ಬಲಿಷ್ಠವಾಗಿಡಬಹುದು. ನಮ್ಮ ಕೆಲವು ಅಭ್ಯಾಸಗಳು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಧೂಮಪಾನ

ತಜ್ಞರ ಪ್ರಕಾರ ತಂಬಾಕು ನಮ್ಮ ದೇಹದ ಅಂಗಾಂಶಗಳಲ್ಲಿ ಒಂದು ರೀತಿಯ ನ್ಯೂಕ್ಲಿಯಸ್ ಅನ್ನು ಉತ್ಪಾದಿಸುತ್ತದೆ. ಇದನ್ನು ಫ್ರೀ ರಾಡಿಕಲ್ ಎಂದು ಕರೆಯಲಾಗುತ್ತದೆ. ಇದು ಶ್ವಾಸಕೋಶ ಸೇರಿದಂತೆ ನಮ್ಮ ಮೂಳೆಗಳನ್ನು ಹಾನಿಗೊಳಿಸುತ್ತದೆ. ತಂಬಾಕು ಸೇವಿಸುವವರ ದೇಹದಲ್ಲಿ ಮೂಳೆಯ ಸಾಂದ್ರತೆ ಕಡಿಮೆ ಇರುತ್ತದೆ. ವಾಸ್ತವವಾಗಿ ಸ್ವತಂತ್ರ ರಾಡಿಕಲ್‌(Free Radicals)ಗಳು ನಿಮ್ಮ ಮೂಳೆಗಳನ್ನು ರೂಪಿಸುವ ಕೋಶಗಳನ್ನು ಕೊಲ್ಲುತ್ತವೆ. ಇದಲ್ಲದೇ ಧೂಮಪಾನದ ಕಾರಣದಿಂದಾಗಿ ನಮ್ಮ ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಉತ್ಪಾದನೆಯು ಹೆಚ್ಚಾಗುತ್ತದೆ. ಕಾರ್ಟಿಸೋಲ್ ನಮ್ಮ ಮೂಳೆ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಮೂಳೆ ಮುರಿದಿದ್ದರೆ ಧೂಮಪಾನ(Smoking)ವು ನಿಮ್ಮ ರಕ್ತಕಣಗಳನ್ನು ಹಾನಿ ಮಾಡುವ ಮೂಲಕ ಚೇತರಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ: ದಿನಕ್ಕೆ ಎಷ್ಟು ಕಪ್ Green Tea ಕುಡಿಯಬೇಕು? ಕುಡಿಯಲು ಸರಿಯಾದ ಸಮಯ ಯಾವುದು? ಇಲ್ಲಿ ತಿಳಿಯಿರಿ

ವ್ಯಾಯಾಮ ಮಾಡದಿರುವುದು

ವ್ಯಾಯಾಮದ ಕೊರತೆ(Not Exercising)ಯು ಮೂಳೆ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಸ್ನಾಯುಗಳನ್ನು ಬಿಗಿಗೊಳಿಸುವುದು ಮೂಳೆಗಳನ್ನು ಬಲಪಡಿಸುತ್ತದೆ. ಆದ್ದರಿಂದ ವ್ಯಾಯಾಮವು ಮೂಳೆಗಳನ್ನು ಬಲಪಡಿಸುತ್ತದೆ. ನಿಮ್ಮ ಮೂಳೆಗಳು ಹೆಚ್ಚು ಭಾರವನ್ನು ಎತ್ತುವ ಮೂಲಕ ಮತ್ತು ಚುರುಕಾಗಿ ನಡೆಯುವುದರ ಮೂಲಕ ಬಲಗೊಳ್ಳುತ್ತವೆ.

ಮದ್ಯಪಾನ

ತಜ್ಞರ ಪ್ರಕಾರ ಆಲ್ಕೋಹಾಲ್(Alcohol) ಕುಡಿಯುವುದರಿಂದ ದೇಹದಲ್ಲಿ ಕಾರ್ಟಿಸೋಲ್ ಕೂಡ ಹೆಚ್ಚಾಗುತ್ತದೆ. ಇದು ಮೂಳೆ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಆಲ್ಕೋಹಾಲ್ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಎರಡೂ ಹಾರ್ಮೋನುಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Rules for Consuming Ghee : ಬೆಳಿಗ್ಗೆ ಮತ್ತು ರಾತ್ರಿ ತುಪ್ಪ ಹೇಗೆ ತಿನ್ನಬೇಕು? ಇದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?

ವಿಟಮಿನ್ ಡಿ ಕೊರತೆ

ವಿಟಮಿನ್ ಡಿ(Vitamin D) ಮೂಳೆಗಳನ್ನು ಬಲಪಡಿಸುತ್ತದೆ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ತೆಳುವಾಗಬಹುದು ಮತ್ತು ದುರ್ಬಲವಾಗಬಹುದು. ವಿಟಮಿನ್ ಡಿ ಯ ಮುಖ್ಯ ಮೂಲವೆಂದರೆ ಸೂರ್ಯನ ಬೆಳಕು. ನೀವು ಮನೆಯ ಹೊರಗೆ ಸಮಯ ಕಳೆಯದಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗಬಹುದು. ಮೂಳೆಗಳ ಬಲಕ್ಕೆ ಕ್ಯಾಲ್ಸಿಯಂ ಕೂಡ ಅಗತ್ಯ. ಹೀಗಾಗಿ ಈ ಸಲಹೆಗಳನ್ನು ತಪ್ಪದೇ ಪಾಲಿಸಿ ಮೂಳೆ ಸವತೆ ಸಮಸ್ಯೆಯಿಂದ ಪಾರಾಗಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News