Guru Purnima 2022: ಗುರು ಪೂರ್ಣಿಮಾ ದಿನ ರಾಶಿಗಳಿಗೆ ಅನುಗುಣವಾಗಿ ದಾನ ಮಾಡುವುದು ಸಾಕಷ್ಟು ಲಾಭ ನೀಡುತ್ತದೆ

Guru Purnima 2022: ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸುವ ಪರಂಪರೆ ಇದೆ. ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಗೆ ಕಾರಣವಾಗುತ್ತದೆ.  

Written by - Nitin Tabib | Last Updated : Jul 2, 2022, 07:45 PM IST
  • ಜುಲೈ 13, 2022 ರಂದು ಈ ವರ್ಷದ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತಿದೆ.
  • ಗುರುವಿನ ಪ್ರತಿ ಆದರ ಹಾಗೂ ಗೌರವವನ್ನು ಪ್ರಕಟಿಸಲು ಈ ಉತ್ಸವವನ್ನು ಆಚರಿಸಲಾಗುತ್ತದೆ.
  • ಗುರುವಿಲ್ಲದ ಬಾಳೇ ಕತ್ತಲು ಅರ್ಥಾತ್ ಗುರುವೇ ನಮಗೆ ಸರಿಯಾದ ಮಾರ್ಗದರ್ಶನವನ್ನು ತೋರುತ್ತಾರೆ ಎಂಬುದು.
Guru Purnima 2022: ಗುರು ಪೂರ್ಣಿಮಾ ದಿನ ರಾಶಿಗಳಿಗೆ ಅನುಗುಣವಾಗಿ ದಾನ ಮಾಡುವುದು ಸಾಕಷ್ಟು ಲಾಭ ನೀಡುತ್ತದೆ title=
Guru Purnima 2022

Guru Purnima 2022 Daan: ಜುಲೈ 13, 2022 ರಂದು ಈ ವರ್ಷದ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತಿದೆ. ಗುರುವಿನ ಪ್ರತಿ ಆದರ ಹಾಗೂ ಗೌರವವನ್ನು ಪ್ರಕಟಿಸಲು ಈ ಉತ್ಸವವನ್ನು ಆಚರಿಸಲಾಗುತ್ತದೆ. ಗುರುವಿಲ್ಲದ ಬಾಳೇ ಕತ್ತಲು ಅರ್ಥಾತ್ ಗುರುವೇ ನಮಗೆ ಸರಿಯಾದ ಮಾರ್ಗದರ್ಶನವನ್ನು ತೋರುತ್ತಾರೆ ಎಂಬುದು.. ಪ್ರಾಚೀನ ಕಾಲದಿಂದಲೂ ಕೂಡ ಗುರು-ಶಿಷ್ಯರ ಪರಂಪರೆ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ. ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಯನ್ನು ದಯಪಾಲಿಸುತ್ತದೆ. ಈ ಹುಣ್ಣಿಮೆಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ, ಬನ್ನಿ ರಾಶಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯ ದಿನ ವಿಶೇಷ ಉಪಾಯಗಳು ಹಾಗೂ ದಾನಗಳನ್ನು ಮಾಡಿ ನೀವು ನಿಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಮೇಷ ರಾಶಿ- ಆಷಾಢ ಹುಣ್ಣಿಮೆಯಂದು ಮೇಷ ರಾಶಿಯ ಜಾತಕದವರು ನಿರ್ಗತಿಕರಿಗೆ ಬೆಲ್ಲ, ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.

ವೃಷಭ ರಾಶಿ- ವೃಷಭ ರಾಶಿಯ ಜನರು ಕಲ್ಲು ಸಕ್ಕರೆ ದಾನ ಮಾಡಿ, ದಿನವಿಡೀ ಪೂಜೆಯ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.

ಮಿಥುನ ರಾಶಿ- ಹಸುವಿಗೆ ಹಸಿರು ಮೇವು ಹಾಕಿದರೆ ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ನೀವು ಹಸಿರು ಬಣ್ಣದ ಹೆಸರು ಬೆಳೆಯನ್ನು ಸಹ ನೀವು ದಾನ ಮಾಡಬಹುದು. ಇದು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ಕರ್ಕ ರಾಶಿ- ಬಡವರಿಗೆ ಅಥವಾ ನಿರ್ಗತಿಕರಿಗೆ ಅನ್ನವನ್ನು ದಾನ ಮಾಡುವುದು ಉತ್ತಮ. ಒತ್ತಡವನ್ನು ತೊಡೆದುಹಾಕಲು ಈ ಪರಿಹಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಸಿಂಹ ರಾಶಿ- ಗುರು ಪೂರ್ಣಿಮೆಯಂದು ಸಿಂಹ ರಾಶಿಯವರು ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ.

ಕನ್ಯಾ ರಾಶಿ- ಈ ದಿನ, ಕನ್ಯಾ ರಾಶಿಯ ಜನರು ಬ್ರಾಹ್ಮಣರಿಗೆ ತಮ್ಮ ತಮ್ಮ ಭಕ್ತಿಗೆ ಅನುಗುಣವಾಗಿ ಆಹಾರ ಅಥವಾ ದಕ್ಷಿಣೆಯನ್ನು ನೀಡಬೇಕು. ಹಸುವಿಗೆ ಮೇವು ತಿನ್ನಿಸಿ.

ತುಲಾ ರಾಶಿ- ಆಷಾಢ ಹುಣ್ಣಿಮೆಯಂದು ತುಲಾ ರಾಶಿಯವರು ಚಿಕ್ಕ ಹೆಣ್ಣು ಮಕ್ಕಳಿಗೆ ಪಾಯಸ ದಾನ ಮಾಡಬೇಕು. ಇದು ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯವರು ಮಂಗಗಳಿಗೆ ಬೇಳೆ ಮತ್ತು ಬೆಲ್ಲವನ್ನು ತಿನ್ನಿಸಬೇಕು. ಅಲ್ಲದೆ, ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಕರ.

ಧನು ರಾಶಿ- ಗುರು ಪೂರ್ಣಿಮೆಯ ದಿನದಂದು ಧನು ರಾಶಿಯವರು ದೇವಸ್ಥಾನದಲ್ಲಿ ಕಡಲೆ ಬೆಳೆ ದಾನ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಮಕರ ರಾಶಿ- ಹುಣ್ಣಿಮೆಯಂದು ಬಡವರಿಗೆ ಕಂಬಳಿಗಳನ್ನು ಹಂಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ-Mercury Transit 2022: ಮಿಥುನ ರಾಶಿಯಲ್ಲಿ ಇಂದು ಬುಧ-ಸೂರ್ಯರ ಸಂಯೋಜನೆ, 3 ರಾಶಿಗಳ ಜನರಿಗೆ ಜಬರ್ದಸ್ತ್ ಧನಲಾಭ

ಕುಂಭ ರಾಶಿ- ವೃದ್ಧಾಶ್ರಮಕ್ಕೆ ಬಟ್ಟೆ, ಆಹಾರ ಮತ್ತು ಹಣವನ್ನು ದಾನ ಮಾಡಿ. ಅಲ್ಲದೆ ದೇವಸ್ಥಾನದಲ್ಲಿ ಕಪ್ಪು ಉಂಡೆಯನ್ನು ದಾನ ಮಾಡಬೇಕು.

ಇದನ್ನೂ ಓದಿ-Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಮೀನ ರಾಶಿ- ಮೀನ ರಾಶಿಯ ಜಾತಕದವರು ಹುಣ್ಣಿಮೆಯಂದು ಬಡವರಿಗೆ ಅರಿಶಿನ ಮತ್ತು ಬೇಳೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಿ. ಇದು ನಿಮ್ಮ ಆಸೆಯನ್ನು ಪೂರೈಸುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News