Guru Purnima 2022: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ಶುಭಯೋಗಗಳು, ಈ ಕೆಲಸ ಮಾಡಿ ಕಷ್ಟಗಳು ನಿವಾರಣೆಯಾಗಲಿವೆ

Guru Purnima 2022 Date: ಮಹರ್ಷಿ ವೇದವ್ಯಾಸರ ಸ್ಮರಣಾರ್ಥ ಅವರ ಜನ್ಮ ತಿಥಿಯಂದು ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ಉತ್ಸವವನ್ನು ಜುಲೈ 13, 2022 ರಂದು ಆಚರಿಸಲಾಗುತ್ತಿದೆ. ಆದರೆ, ಈ ಬಾರಿಯ ಗುರು ಪೂರ್ಣಿಮಾ ಉತ್ಸವದಂದು ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ.  

Written by - Nitin Tabib | Last Updated : Jul 4, 2022, 11:02 AM IST
  • ಮಹರ್ಷಿ ವೇದವ್ಯಾಸರ ಸ್ಮರಣಾರ್ಥ ಅವರ ಜನ್ಮ ತಿಥಿಯಂದು ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ.
  • ಈ ವರ್ಷ ಈ ಉತ್ಸವವನ್ನು ಜುಲೈ 13, 2022 ರಂದು ಆಚರಿಸಲಾಗುತ್ತಿದೆ. ಆದರೆ,
  • ಈ ಬಾರಿಯ ಗುರು ಪೂರ್ಣಿಮಾ ಉತ್ಸವದಂದು ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ.
Guru Purnima 2022: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ಶುಭಯೋಗಗಳು, ಈ ಕೆಲಸ ಮಾಡಿ ಕಷ್ಟಗಳು ನಿವಾರಣೆಯಾಗಲಿವೆ title=
Guru Purnima 2022

Guru Purnima Upay: ಗುರು ಪೂರ್ಣಿಮಾ ಗುರುಗಳಿಗೆ ಗೌರವ ಸಲ್ಲಿಸುವ ವಿಶಿಷ್ಟ ದಿನವಾಗಿದೆ. ಈ ದಿನ ಶಿಷ್ಯರು ತಮ್ಮ ತಮ್ಮ ಗುರುವನ್ನು ಪೂಜಿಸುತ್ತಾರೆ, ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಮಹಾಭಾರತದ ಕರ್ತೃ ಮಹರ್ಷಿ ವೇದವ್ಯಾಸ್ ಅವರನ್ನು ಈ ದಿನ ಪೂಜಿಸಲಾಗುತ್ತದೆ. ಮಹರ್ಷಿ ವ್ಯಾಸರು ಆಷಾಢ ಮಾಸದ ಹುಣ್ಣಿಮೆಯಂದು ಜನಿಸಿದ್ದರು ಮತ್ತು ಅವರ ಜನ್ಮ ದಿನದಂದು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಜನರು ತಮ್ಮ ಇಷ್ಟ ದೇವನನ್ನು ಗುರು ಎಂದು ಪೂಜಿಸುತ್ತಾರೆ. ಈ ಬಾರಿ ಗುರು ಪೂರ್ಣಿಮೆಯನ್ನು 13ನೇ ಜುಲೈ 2022, ಬುಧವಾರದಂದು ಆಚರಿಸಲಾಗುವುದು.

ಗುರು ಪೂರ್ಣಿಮಾ ದಿನ ನಾಲ್ಕು ರಾಜಯೋಗಗಳ ನಿರ್ಮಾಣ
ಗುರು ಪೂರ್ಣಿಮೆಗೆ ಧಾರ್ಮಿಕವಾಗಿ ಎಷ್ಟು ಮಹತ್ವವಿದೇಯೋ ಅಷ್ಟೇ ಮಹತ್ವ ಜೋತಿಷ್ಯ ದೃಷ್ಟಿಯಿಂದಲೂ ಕೂಡ ಇದೆ. ಈ ಬಾರಿಯ ಗುರು ಪೂರ್ಣಿಮೆಯ ದಿನ ಗ್ರಹಗಳ ಸ್ಥಿತಿ ತುಂಬಾ ಶುಭವಾಗಿದೆ. 2022ರ ಗುರು ಪೂರ್ಣಿಮೆಯ ದಿನ ಮಂಗಳ, ಬುಧು, ಗುರು ಹಾಗೂ ಶನಿ ಗ್ರಹಗಳು ತುಂಬಾ ಶುಭ ಸ್ಥಿತಿಯಲ್ಲಿ ಇರಲಿವೆ. ಹೀಗಾಗಿ ಗುರು ಪೂರ್ಣಿಮಾ ದಿನ ರುಚಕ, ಭದ್ರ, ಹಂಸ ಹಾಗೂ ಶಶ್ ಹೆಸರಿನ ನಾಲ್ಕು ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದರ ಜೊತೆಗೆ ಸೂರ್ಯ ಹಾಗೂ ಬುಧ ಒಂದೇ ರಾಶಿಯಲ್ಲಿರುವ ಕಾರಣ ಬುಧಾದಿತ್ಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಒಟ್ಟಾರೆ ಹೇಳುವುದಾದರೆ, ಗುರು ಪೂರ್ಣಿಮಾ ದಿನ ಮಾಡಲಾಗುವ ಪೂಜೆ ಮತ್ತು ಉಪಾಯಗಳು ಅತ್ಯಂತ ಶುಭ ಫಲಪ್ರದ ಸಾಬೀತಾಗಲಿವೆ.

ಇದನ್ನೂ ಓದಿ-Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ

ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಈ ಉಪಾಯಗಳನ್ನು ಮಾಡಿ
ಗುರು ಪೂರ್ಣಿಮೆಯ ದಿನ ನಿರ್ಮಾಣಗೊಳ್ಳುತ್ತಿರುವ ಈ ಅತ್ಯಂತ ಶುಭಯೋಗಗಳ ಹಿನ್ನೆಲೆ ಈ ದಿನ ಕೈಗೊಳ್ಳಲಾಗುವ ಪೂಜೆ ಹಾಗೂ ಉಪಾಯಗಳು ಹಲವು ಪಟ್ಟು ಹೆಚ್ಚು ಫಲಪ್ರದಾಯಿಗಳಾಗಿರುತ್ತವೆ. ಹೀಗಾಗಿ ಗುರುವಿನ ಕೃಪಾ ಕಟಕ್ಷಕ್ಕೆ ಪಾತ್ರರಾಗಲು ಮತ್ತು ಜಾತಕದಲ್ಲಿ ಗುರುಗ್ರಹವನ್ನು ಬಲಪಡಿಸಲು ಪೂಜೆ ಅವಶ್ಯವಾಗಿ ಕೈಗೊಳ್ಳಿ. ಜೀವನದಲ್ಲಿ ಹಲವಾರು ಸಮಸ್ಯೆಗಳಿಂದ ಸುತ್ತುವರೆದ ಜನರು, ಕೈಗೂಡುವ ಕೆಲಸ ಬಿಗಡಾಯಿಸುತ್ತಿದ್ದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ, ವಿವಾಹ ಕಾರ್ಯ ಇತ್ಯಾದಿಗಳಲ್ಲಿ ಉಂಟಾಗುತ್ತಿರುವ ವಿಘ್ನಗಳನ್ನು ನಿವಾರಿಸಳು ಬಯಸುವವರು ಗುರು ಪೂರ್ಣಿಮಾ ದಿನ ಗುರು ಗ್ರಹವನ್ನು ಪೂಜಿಸಬೇಕು ಮತ್ತು ಜಾತಕದಲ್ಲಿ ಗುರುಬಲ ಹೆಚ್ಚಿಸಿಕೊಳ್ಳಬೇಕು. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗಲಿವೆ.

ಇದನ್ನೂ ಓದಿ-Mercury Transit 2022: ಮಿಥುನ ರಾಶಿಯಲ್ಲಿ ಇಂದು ಬುಧ-ಸೂರ್ಯರ ಸಂಯೋಜನೆ, 3 ರಾಶಿಗಳ ಜನರಿಗೆ ಜಬರ್ದಸ್ತ್ ಧನಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News