Goddess Lakshmi Tips: ಇಂತಹ ಜನರ ಮನೆಗೆ ಲಕ್ಷ್ಮಿ ಎಂದಿಗೂ ಕಾಲಿಡುವುದಿಲ್ಲ

Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಕೆಲವೇ ಕೆಲ ಜನರ ಮನೆಗೆ ಪ್ರವೇಶಿಸುತ್ತಾಳೆ ಎನ್ನಲಾಗಿದೆ, ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಅನುಸರಿಸುವವರ ಮನೆಯಲ್ಲಿ ಮಾತ್ರ ತಾಯಿ ನೆಲೆಸುತ್ತಾಳೆ ಎನ್ನಲಾಗಿದೆ. ಆದರೆ, ಕೆಲ ಕಾರಣಗಳಿಂದ ತಾಯಿ ಲಕ್ಷ್ಮಿ ಕೆಲವರ ಮನೆಗೆ ಪ್ರವೇಶಿಸುವುದಿಲ್ಲ ಎಂದೂ ಕೂಡ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ಕಾರಣಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jan 3, 2023, 03:53 PM IST
  • ಹಣ ಸಂಪಾದಿಸಲು ಮತ್ತು ಜೀವನದ ಎಲ್ಲಾ ಸಂತೋಷಗಳನ್ನು ಪಡೆಯಲು ಒಬ್ಬರು ಹಗಲಿರುಳು ಶ್ರಮಿಸುತ್ತಾರೆ.
  • ಆದರೂ ಕೂಡ ಕೆಲವರಿಗೆ ಲಕ್ಷ್ಮಿ ಒಲಿಯುವುದಿಲ್ಲ.
  • ಇದರ ಹಿಂದೆ ಇನ್ನೂ ಅನೇಕ ಕಾರಣಗಳಿವೆ, ಆ ಕಾರಣಗಳು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ.
Goddess Lakshmi Tips: ಇಂತಹ ಜನರ ಮನೆಗೆ ಲಕ್ಷ್ಮಿ ಎಂದಿಗೂ ಕಾಲಿಡುವುದಿಲ್ಲ  title=
Goddess Lakshmi Tips

Astro Tips For Goddess Lakshmi: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ-ಸಮೃದ್ಧಿ, ವೈಭವವನ್ನು ಪಡೆಯುವ ಬಯಕೆಯನ್ನು ಹೊಂದಿರುತ್ತಾನೆ. ಆದರೆ, ಇದೆಲ್ಲಾ ತಾಯಿ ಲಕ್ಷ್ಮಿಯ ಅನುಗ್ರಹವಿದ್ದರೆ ಮಾತ್ರ ಸಾಧ್ಯ. ಹಣ ಸಂಪಾದಿಸಲು ಮತ್ತು ಜೀವನದ ಎಲ್ಲಾ ಸಂತೋಷಗಳನ್ನು ಪಡೆಯಲು ಒಬ್ಬರು ಹಗಲಿರುಳು ಶ್ರಮಿಸುತ್ತಾರೆ. ಆದರೂ ಕೂಡ ಕೆಲವರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಇದರ ಹಿಂದೆ ಇನ್ನೂ ಅನೇಕ ಕಾರಣಗಳಿವೆ, ಆ ಕಾರಣಗಳು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಅದೃಷ್ಟದ ಜೊತೆಗೆ, ವ್ಯಕ್ತಿಯ ಕೆಟ್ಟ ಅಭ್ಯಾಸಗಳು ಕೂಡ ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತವೆ. ತಾಯಿ ಲಕ್ಷ್ಮಿಗೆ ಇಷ್ಟವಾಗದ ಆ ಕಾರಣಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಹೆಚ್ಚು ನಿದ್ರಿಸುವುದು
ತಡರಾತ್ರಿಯವರೆಗೂ ಎಚ್ಚರವಾಗಿ ಇರುವ ಅಭ್ಯಾಸವಿರುವ ಜನರು ತಾಯಿ ಲಕ್ಷ್ಮಿಗೆ ಹೆಚ್ಚು ಇಷ್ಟವಾಗುವುದಿಲ್ಲ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಈ ಜನರು ಬೆಳಗ್ಗೆ ಕೂಡ ತಡವಾಗಿ ಏಳುತ್ತಾರೆ. ಇದರಿಂದ ಇಂತಹ ಜನರು ಧನಹಾನಿ ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಜನರು ಹಣ ಗಳಿಸುವಲ್ಲಿ ಯಶಸ್ವಿಯಾದರೂ, ಅವರಿಂದ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ತಾಯಿ ಲಕ್ಷ್ಮಿ ಅಂತಹ ಜನರ ಮನೆಯಲ್ಲಿ ಹೆಚ್ಚುಕಾಲ ಉಳಿಯುವುದಿಲ್ಲ.

ಕೊಳೆಯಾದ ಬಟ್ಟೆ ಧರಿಸುವವರ ಮನೆಯಲ್ಲಿ
ತಾಯಿ ಲಕ್ಷ್ಮಿಗೆ ಶುಚಿತ್ವ ಎಂದರೆ ತುಂಬಾ ಇಷ್ಟ.ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ. ಕೊಳೆಯಾದ ಬಟ್ಟೆ ಧರಿಸುವವರಿಗೆ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ. ಇದರಿಂದ ತಾಯಿ ಲಕ್ಷ್ಮಿಗೂ ಕೋಪ ಬರುತ್ತದೆ. ಅಂತಹ ವ್ಯಕ್ತಿಯ ಬಳಿ ಹಣ ಉಳಿಯುವುದಿಲ್ಲ ಮತ್ತು ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

ಪೂಜೆ ಪುನಸ್ಕಾರಗಳು ನಡೆಯದ ಮನೆಯಲ್ಲಿ
ಮನೆಯಲ್ಲಿ ಪೂಜಿಸುವುದರಿಂದ ಮತ್ತು ನಿಯಮಿತವಾಗಿ ದೀಪಗಳನ್ನು ಬೆಳಗಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಸಂಚಿಸುತ್ತದೆ ಮತ್ತು ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚದಿದ್ದರೆ ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಶಾಸ್ತ್ರಗಳ ಪ್ರಕಾರ, ದೀಪಗಳನ್ನು ಬೆಳಗಿಸುವ ಮನೆಗಳಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ.

ಹಲವಾರು ದಿನಗಳವರೆಗೆ ಸ್ನಾನವನ್ನೇ ಮಾಡದವರ ಮನೆಯಲ್ಲಿ 
ಕೆಲವರಿಗೆ ಶುಚಿತ್ವವೇ ಇಷ್ಟವಿರುವುದಿಲ್ಲ.ಅಂತಹವರ ಮನೆಗೆ ತಾಯಿ ಲಕ್ಷ್ಮಿ ಪ್ರವೇಶಿಸುವುದಿಲ್ಲ. ಶುಚಿತ್ವವನ್ನು ನಿಯಮಿತವಾಗಿ ಕಾಪಾಡುವ ಮನೆಗಳಲ್ಲಿ ಲಕ್ಷ್ಮಿಯು ಸಂತೋಷದಿಂದ ಪ್ರವೇಶಿಸುತ್ತಾಳೆ ಮತ್ತು ಮನೆಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ ಎಂದು ನಂಬಲಾಗಿದೆ. ಅಂತಹ ಜನರು ಎಂದಿಗೂ ಹಣದ ನಷ್ಟವನ್ನು ಅನುಭವಿಸಬೇಕಾಗುವುದಿಲ್ಲ.

ಇದನ್ನೂ ಓದಿ-Skin Care Tips: 40ರ ವಯಸ್ಸಲ್ಲಿ 18ರ ಯುವತಿಯಂತೆ ಕಾಣಬೇಕೆ? ಈ ಉಪಾಯಗಳನ್ನು ಅನುಸರಿಸಿ

ಇತರರನ್ನು ನಿಂದಿಸುವವರ ಮನೆಯಲ್ಲಿ
ಸಾಮಾನ್ಯ ಭಾಷೆಯಲ್ಲಿ ನಿಂದನೀಯ ಪದಗಳನ್ನು ಬಳಸುವವರು, ಸಣ್ಣ ವಿಷಯಗಳಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ನಿಂದನೆಗಳಿಗೆ ತಾಯಿ ಲಕ್ಷ್ಮಿ ಕೊಪಗೊಳ್ಳುತ್ತಾಳೆ. ಈ ಜನರು ಕಾಲಕಾಲಕ್ಕೆ ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಕೋಪ ಮತ್ತು ನಾಲಿಗೆಯನ್ನು ನಿಯಂತ್ರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.

ಇದನ್ನೂ ಓದಿ-Vastu Tips: ಸೂರ್ಯಾಸ್ತದ ಬಳಿಕ ಮರೆತೂ ಕೂಡ ಈ ಕೆಲಸಗಳನು ಮಾಡಬೇಡಿ, ಕಾರಣ ಇಲ್ಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News