ಈ ಹೆಸರಿನ ಹುಡುಗಿಯರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾರೆ ..! ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ

Lucky Girls Name:  ನಾಮ ಶಾಸ್ತ್ರದಲ್ಲಿ, ಕಠಿಣ ಪರಿಶ್ರಮ ಮತ್ತು ಅದೃಷ್ಟದ ಆಧಾರದ ಮೇಲೆ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಪಡೆಯುವ ಕೆಲವು ಹುಡುಗಿಯರ ಹೆಸರೂ ಯಾವ ಅಕ್ಷರದಿಂದ ಆರಂಭವಾಗುತ್ತದೆ ನೋಡೋಣ. 

Written by - Ranjitha R K | Last Updated : May 19, 2022, 02:50 PM IST
  • ಅದೃಷ್ಟವಂತ ಹುಡುಗಿಯರಿವರು
  • ಜ್ಯೋತಿಷ್ಯದಲ್ಲಿ ನಾಮ ಶಾಸ್ತ್ರಕ್ಕೆ ಇದೆ ಪ್ರಾಮುಖ್ಯತೆ
  • ಜನ್ಮ ಚಿಹ್ನೆಯ ಆಧಾರದ ಮೇಲೆ ನಾಮಕರಣ ಮಾಡಲಾಗುತ್ತದೆ
ಈ ಹೆಸರಿನ ಹುಡುಗಿಯರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾರೆ ..! ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ  title=
Name Astrology (File photo)

Lucky Girls Name : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಪ್ರಭಾವವು ಅವನ ಜೀವನದ ಮೇಲೆ ಬೀರುತ್ತದೆ. ವ್ಯಕ್ತಿಯ ಹೆಸರು ಅವನ ಗುರುತು. ವ್ಯಕ್ತಿಯ ಜನ್ಮ ಚಿಹ್ನೆಯ ಆಧಾರದ ಮೇಲೆ ಹೆಸರಿಸಲಾಗುತ್ತದೆ. ಪ್ರತಿಯೊಂದು ಹೆಸರು ತನ್ನದೇ ಆದ ವಿಭಿನ್ನ ಅರ್ಥವನ್ನು ಹೊಂದಿರುತ್ತದೆ. ಆ ಹೆಸರಿನ ಅರ್ಥದ ಪರಿಣಾಮವು ವ್ಯಕ್ತಿಯ ಸ್ವಭಾವ, ಅದೃಷ್ಟದ ಮೇಲೆ ಕಂಡುಬರುತ್ತದೆ. ನಾಮ ಶಾಸ್ತ್ರದ ಪ್ರಕಾರ, ಜನ್ಮ ಚಿಹ್ನೆಯ ಆಧಾರದ ಮೇಲೆ ಇಡುವ ಹೆಸರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಈ ಹೆಸರಿನ ಹುಡುಗಿಯರು ಅದೃಷ್ಟದಲ್ಲಿ ಬಹಳ ಶ್ರೀಮಂತರು :
ಕೆ ಅಕ್ಷರದ ಹೆಸರಿನ ಹುಡುಗಿಯರು :  ಜ್ಯೋತಿಷ್ಯದ ಪ್ರಕಾರ, ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಹುಡುಗಿಯರು ತುಂಬಾ ಬುದ್ಧಿವಂತರಾಗಿರುತ್ತಾರೆ. ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಈ ಹುಡುಗಿಯರು ತಮ್ಮದೇ ಆದ ಗುರುತನ್ನು ಹೊಂದಿರುತ್ತಾರೆ. ಅವರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ. ವೃತ್ತಿಜೀವನದಲ್ಲಿ ಶೀಘ್ರದಲ್ಲೇ ಅವಳು ಯಶಸ್ಸಿನ ಶಿಖರವನ್ನು ಏರುತ್ತಾಳೆ. ಈ ಹುಡುಗಿಯರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಅವರನ್ನು ಬೆಂಬಲಿಸುತ್ತದೆ. 

ಇದನ್ನೂ ಓದಿ : Garuda Purana: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ಎಲ್ ಅಕ್ಷರದ  ಹೆಸರಿನ ಹುಡುಗಿಯರು  :  ಈ ಹೆಸರಿನ ಹುಡುಗಿಯರ ಮೇಲೆ ಲಕ್ಷ್ಮೀಯ ವಿಶೇಷ ಆಶೀರ್ವಾದವಿರುತ್ತದೆ.  ಜೀವನದಲ್ಲಿ ಏನು ಮಾಡಬೇಕು ಎಂದು ಯೋಚಿಸುತ್ತಾರೆ ಅದೆ ರೀತಿ ಜೀವನವನ್ನು ನಿರ್ವಹಿಸುತ್ತಾಳೆ.  ಈ ಹೆಸರಿನ ಹುಡುಗಿಯರು ಬಹಳ ಶ್ರಮಜೀವಿಗಳು. ಬುದ್ಧಿವಂತಿಕೆಯ ಆಧಾರದ ಮೇಲೆ, ಅವರು ಜೀವನದಲ್ಲಿ ಬಹಳ ಮುಂದೆ ಹೋಗುತ್ತಾರೆ. ಗುರಿ ಸಾಧಿಸಲು ನಿರಂತರವಾಗಿ ಶ್ರಮಿಸುತ್ತಾರೆ.  

ಪಿ ಅಕ್ಷರದ ಹೆಸರಿನ ಹುಡುಗಿಯರು  : ಈ ಹೆಸರಿನ ಹುಡುಗಿಯರು ಸಮಾಜದಲ್ಲಿ ತಮ್ಮ ಪ್ರತ್ಯೇಕ ಐಡೆಂಟಿಟಿಯನ್ನು ಮಾಡಿಕೊಂಡು ಬದುಕಲು ಬಯಸುತ್ತಾರೆ. ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡಾ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಈ ಹುಡುಗಿಯರು ಯಾವುದೇ ಕೆಲಸವನ್ನು ಕೂಡಾ ಅರ್ಧಕ್ಕೆ ನಿಲ್ಲಿಸುವುದೇ ಇಲ್ಲ. ವೃತ್ತಿಜೀವನದ ಆರಂಭದಲ್ಲಿಯೇ  ಉನ್ನತ ಸ್ಥಾನಗಳನ್ನು ಏರುತ್ತಾರೆ.  ಇವರಿಗೆ ಜೀವನದಲ್ಲಿ ಯಾವುದೇ ಸೌಕರ್ಯಗಳಿಗೆ ಕೊರತೆಯಿರುವುದಿಲ್ಲ. 

ಇದನ್ನೂ ಓದಿ : ಹಿಮ್ಮುಖ ಚಲನೆ ಆರಂಭಿಸಲಿರುವ ಶನಿ ಮಹಾತ್ಮ .! ಮತ್ತೆ ಕಾಡಲಿದ್ದಾನೆ ಈ ಎರಡು ರಾಶಿಯವರನ್ನು

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News