ತುಪ್ಪದ ಫೇಸ್ ಪ್ಯಾಕ್ ನಿಂದ ಚರ್ಮಕ್ಕಿದೆ ಇಷ್ಟೆಲ್ಲಾ ಪ್ರಯೋಜನ

Ghee For Skin Whitening: ಪ್ರಸ್ತುತ ಮಾರುಕಟ್ಟೆಯಲ್ಲಿ ತ್ವಚೆಯ ಆರೈಕೆಗಾಗಿ ಸಿಗುವ ಕೆಮಿಕಲ್ ಗಳಿರುವ ಉತ್ಪನ್ನಗಳನ್ನು ಅನೇಕರು ಬಳಸುತ್ತಿದ್ದು, ಅವುಗಳಿಂದ ಹಲವು ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.  

Written by - Chetana Devarmani | Last Updated : Sep 5, 2023, 10:25 PM IST
  • ತ್ವಚೆಯ ಆರೈಕೆಗಾಗಿ ತುಪ್ಪ
  • ತುಪ್ಪದ ಫೇಸ್ ಪ್ಯಾಕ್ ಲಾಭಗಳು
  • ಚರ್ಮದ ಹೊಳಪನ್ನು ಹೆಚ್ಚಿಸುತ್ತೆ ತುಪ್ಪ
ತುಪ್ಪದ ಫೇಸ್ ಪ್ಯಾಕ್ ನಿಂದ ಚರ್ಮಕ್ಕಿದೆ ಇಷ್ಟೆಲ್ಲಾ ಪ್ರಯೋಜನ   title=

Skin Care Tips : ಮುಖವನ್ನು ಸುಂದರವಾಗಿ ಮತ್ತು ಕಾಂತಿಯುತವಾಗಿಡಲು ಹಲವರು ಫೇಸ್ ವಾಶ್, ದುಬಾರಿ ಬೆಲೆಯ ಸಾಬೂನುಗಳು, ಮಾರುಕಟ್ಟೆಯಲ್ಲಿ ಸಿಗುವ ಫೇಸ್ ಕ್ರೀಮ್ ಗಳಂತಹ ಹಲವು ಬಗೆಯ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಕೆಲವರು ದುಬಾರಿ ವೆಚ್ಚದ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಹೀಗೆ ಮಾಡಿ ಮುಖ ಸುಂದರವಾಗಿಸಿಕೊಂಡರೂ ಅದರ ಪರಿಣಾಮ ಕೆಲವೇ ದಿನಗಳ ವರೆಗೆ ಮಾತ್ರ ಇರುತ್ತದೆ. ಆ ನಂತರ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. 

ರಾಸಾಯನಿಕ ಉತ್ಪನ್ನಗಳ ಅತಿಯಾದ ಸೇವನೆಯಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆಗಳೂ ಇವೆ. ಆದ್ದರಿಂದ ಆಯುರ್ವೇದ ಸೂಚಿಸಿದ ಕೆಲವು ಮನೆಮದ್ದುಗಳನ್ನು ಬಳಸುವುದು ಉತ್ತಮ. ಇವುಗಳನ್ನು ಬಳಸುವುದರಿಂದ ತ್ವಚೆಯಲ್ಲಿ ಸಾಮಾನ್ಯ ಹಾಗೂ ಶಾಶ್ವತವಾದ ಹೊಳಪು ಸಿಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಇದನ್ನೂ ಓದಿ: ಬಿಳಿ ಕೂದಲನ್ನು ಒಂದೇ ವಾರದಲ್ಲಿ ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ಹೂವಿನ ಹೇರ್‌ ಮಾಸ್ಕ್‌!

ಮುಖವನ್ನು ಸುಂದರವಾಗಿಸಲು ತುಪ್ಪ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತುಪ್ಪದಲ್ಲಿನ ಔಷಧೀಯ ಗುಣಗಳು ಚರ್ಮವನ್ನು ಹಾನಿಯಿಂದ ಮುಕ್ತಗೊಳಿಸಿ ಶಾಶ್ವತವಾಗಿ ಹೊಳೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಸ್ಕಿನ್ ಕೇರ್ ಉತ್ಪನ್ನಗಳ ಬದಲಿಗೆ ತುಪ್ಪದಿಂದ ಮಾಡಿದ ಫೇಸ್ ಲೋಷನ್ ಬಳಸುವುದು ಉತ್ತಮ.  

ಮೊದಲಿಗೆ, ಈ ಲೋಷನ್ ತಯಾರಿಸಲು, ನೀವು ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ನಾಲ್ಕು ಚಮಚ ತುಪ್ಪವನ್ನು ಸೇರಿಸಿ ಮತ್ತು ಕರಗಿಸಬೇಕು. ಅದರ ನಂತರ ಮೂರು ಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ಕಲಸಿದ ನಂತರ ಎರಡು ಗಂಟೆಗಳ ಕಾಲ ಪಕ್ಕದಲ್ಲಿ ಇರಿಸಿ. ಬಾಟಲಿಯಲ್ಲಿ ಇಟ್ಟು ಬೆಳಗ್ಗೆ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಇಟ್ಟು ತೊಳೆದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವು ನಯವಾಗುವುದಲ್ಲದೆ ಶಾಶ್ವತವಾಗಿ ಹೊಳೆಯುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದಲ್ಲದೆ, ಅನೇಕ ರೀತಿಯ ಚರ್ಮದ ಸಮಸ್ಯೆಗಳು ಸಹ ಸುಲಭವಾಗಿ ನಿವಾರಣೆಯಾಗುತ್ತವೆ.
 
ಇದನ್ನೂ ಓದಿ: ಕೂದಲು ವೇಗವಾಗಿ ಬೆಳೆಯಲು ಅಕ್ಕಿ ನೀರನ್ನು ಹೀಗೆ ಬಳಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News