ಗರುಡ ಪುರಾಣ: ಅಂತ್ಯಸಂಸ್ಕಾರದ ನಂತರ ನಾವು ಹಿಂತಿರುಗಿ ನೋಡಬಾರದೇಕೆ? ನಿಜವಾದ ಕಾರಣ ತಿಳಿಯಿರಿ

ಶವಸಂಸ್ಕಾರ ಮುಗಿಸಿ ಬರುವಾಗ ಹಿಂತಿರುಗಿ ನೋಡಬಾರದು ಎಂಬ ನಂಬಿಕೆ ಇದೆ. ಆದರೆ ಇದರ ಹಿಂದಿನ ಕಾರಣ ಏನು ಗೊತ್ತಾ?

Written by - Puttaraj K Alur | Last Updated : Jan 3, 2022, 08:29 PM IST
  • ಗರುಡ ಪುರಾಣವು ಸಾವಿನ ನಂತರದ ಪ್ರಕ್ರಿಯೆಯ ಬಗ್ಗೆ ತಿಳಿಸುತ್ತದೆ
  • ಗರುಡ ಪುರಾಣದ ಪ್ರಕಾರ ಆತ್ಮವು ಎಂದಿಗೂ ಸಾಯುವುದಿಲ್ಲ
  • ಗರುಡ ಪುರಾಣದ ಪ್ರಕಾರ ದಹನದ ನಂತರವೂ ಆತ್ಮವು ದೇಹದೊಂದಿಗೆ ಬಾಂಧವ್ಯ ಹೊಂದಿರುತ್ತದೆ
ಗರುಡ ಪುರಾಣ: ಅಂತ್ಯಸಂಸ್ಕಾರದ ನಂತರ ನಾವು ಹಿಂತಿರುಗಿ ನೋಡಬಾರದೇಕೆ? ನಿಜವಾದ ಕಾರಣ ತಿಳಿಯಿರಿ title=
ಗರುಡ ಪುರಾಣದಲ್ಲಿ ಸಾವಿನ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ

ನವದೆಹಲಿ: ಎಲ್ಲಾ 18 ಪುರಾಣಗಳಲ್ಲಿ ಕೇವಲ ಒಂದು ಗರುಡ ಪುರಾಣ(Garuda Purana)ವಿದೆ. ಇದರಲ್ಲಿ ಸಾವಿನ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣದಲ್ಲಿ ಭೌತಿಕ ಜೀವನದ ಹೊರತಾಗಿ ಅನೇಕ ನಿಗೂಢ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಆತ್ಮವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಆತ್ಮವು ದೇಹವನ್ನು ಸುಡುವುದನ್ನು ನೋಡುತ್ತದೆ. ಶವಸಂಸ್ಕಾರ ಮುಗಿಸಿ ಬರುವಾಗ ಹಿಂತಿರುಗಿ ನೋಡಬಾರದು ಎಂಬ ನಂಬಿಕೆ ಇದೆ. ಆದರೆ ಇದರ ಹಿಂದಿನ ಕಾರಣ ಏನು ಗೊತ್ತಾ? ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಆತ್ಮವು ದೇಹದೊಂದಿಗೆ ಬಾಂಧವ್ಯ ಹೊಂದಿರುತ್ತದೆ  

ಗರುಡ ಪುರಾಣ(Garuda Purana Facts)ದ ಪ್ರಕಾರ ದಹನದ ನಂತರವೂ ಆತ್ಮವು ದೇಹದೊಂದಿಗೆ ಬಾಂಧವ್ಯವನ್ನು ಹೊಂದಿರುತ್ತದಂತೆ. ಮೃತ ದೇಹದ ಆತ್ಮವು ಸಂಸ್ಕಾರದ ಬಳಿಕ ಹಿಂತಿರುಗಿ ನೋಡುವ ವ್ಯಕ್ತಿಯ ಬಳಿಗೆ ಹೋಗಲು ಬಯಸುತ್ತದಂತೆ. ಈ ಕಾರಣದಿಂದಲೇ ಶವಸಂಸ್ಕಾರದ ನಂತರ ಹಿಂತಿರುಗಿ ನೋಡಿದಾಗ ಆತ್ಮಕ್ಕೆ ಇನ್ನೂ ಯಾರೋ ಅಂಟಿಕೊಂಡಿರುವುದು ಗೊತ್ತಾಗುತ್ತದೆ. ಆತ್ಮವು ದೇಹದ ಬಾಂಧವ್ಯ(Garuda Purana On Death)ದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ, ನಂತರ ಅದರಿಂದ ಹೊರಬರಲು ಕಷ್ಟವಾಗುತ್ತದೆ. ಸಂಸ್ಕಾರದ ನಂತರ ಯಾರೂ ಹಿಂತಿರುಗಿ ನೋಡದಿರಲು ಇದು ಒಂದು ಕಾರಣವಾಗಿದೆ. ಸಂಸ್ಕಾರದ ನಂತರ ಹಿಂತಿರುಗಿ ನೋಡದಿದ್ದರೆ, ಆತ್ಮವು ತನ್ನ ಬಾಂಧವ್ಯದಲ್ಲಿ ದೇಹವಿಲ್ಲವೆಂಬ ಸಂದೇಶವನ್ನು ಪಡೆಯುತ್ತದೆ ಎಂಬುದು ನಂಬಿಕೆ.

ಇದನ್ನೂ ಓದಿ: ಶುಭ, ಅಶುಭ ಸಂಕೇತ ನೀಡುವ ಇರುವೆಗಳು.. ಯಾವ ಬಣ್ಣದ ಇರುವೆ ಕಂಡರೆ ಒಳಿತು? ಯಾವುದು ಕೆಡಕು?

ಸಂಬಂಧಿಕರೊಂದಿಗೆ ಆತ್ಮದ ಬಾಂಧವ್ಯ

ಗರುಡ ಪುರಾಣದ ಪ್ರಕಾರ ದೇಹವನ್ನು ಸುಟ್ಟ ನಂತರ, ಆತ್ಮವು ಸಂಬಂಧಿಕರನ್ನು ಅನುಸರಿಸಲು ಪ್ರಾರಂಭಿಸುತ್ತದೆ. ಏಕೆಂದರೆ ಅದು ಇನ್ನೊಂದು ದೇಹ(Garuda Purana Cremation)ವನ್ನು ಪ್ರವೇಶಿಸುವ ಪ್ರಚೋದನೆಯನ್ನು ಹೊಂದಿರುತ್ತದೆ. ದಹನದ ನಂತರ ಮೃತ ದೇಹವನ್ನು ಹಿಂತಿರುಗಿ ನೋಡಿದರೆ, ಆತ್ಮವು ಮತ್ತೊಂದು ಆತ್ಮದ ಕಡೆಗೆ ಬಾಂಧವ್ಯವನ್ನು ಹೊಂದಿದೆ ಎಂದು ಭಾವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದು ಮಾನವ ದೇಹವನ್ನು ಪ್ರವೇಶಿಸುತ್ತದೆ.

ದೇಹ ಪ್ರವೇಶಿಸಿದ ನಂತರ ಆತ್ಮ ಕಿರುಕುಳ ನೀಡುತ್ತದೆ

ಆತ್ಮವು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದ ನಂತರ ಅದು ಆ ವ್ಯಕ್ತಿಗೆ ತುಂಬಾ ಹಿಂಸಿಸುತ್ತದೆ. ಇದಲ್ಲದೆ ಅಂತ್ಯಕ್ರಿಯೆ(Garuda Purana Life After Death)ಯ ನಂತರ ಆತ್ಮವು ಹೆಚ್ಚಾಗಿ ಚಿಕ್ಕ ಮಕ್ಕಳ ಮತ್ತು ದುರ್ಬಲ ಹೃದಯದ ದೇಹವನ್ನು ಪ್ರವೇಶಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ಚಿಕ್ಕ ಮಕ್ಕಳನ್ನು ಅಥವಾ ದುರ್ಬಲ ಹೃದಯದವರನ್ನು ಶವಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕರೆದೊಯ್ಯಬಾರದು. ಒಂದು ವೇಳೆ ಹೋದರೂ ಹಿಂದಿರುಗುವಾಗ ಅವರನ್ನು ಮುಂಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. ಅವರು ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬಾರದು.  

ಇದನ್ನೂ ಓದಿ: ಈ ರಾಶಿಯವರಿಗೆ ಸಂಪತ್ತು ಮತ್ತು ಹೆಸರು ಎರಡೂ ನೀಡಲಿದೆ 2022, ಆದರೂ ಈ ವಿಚಾರದಲ್ಲಿ ಇರಲಿ ಎಚ್ಚರ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News