ಬೆಂಗಳೂರು: Ganesh Chaturthi 2021- ಗಣೇಶ ಚತುರ್ಥಿಯ ದಿನದಂದು ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ದೇಶದ ಹಲವು ಭಾಗಗಳಲ್ಲಿ ಮುಂದಿನ 10 ದಿನಗಳ ಕಾಲ ಗಣೇಶ ಉತ್ಸವ ನಡೆಯುತ್ತದೆ. ಜ್ಯೋತಿಷ್ಯ ಪರಿಹಾರಗಳನ್ನು ಮಾಡುವ ದೃಷ್ಟಿಯಿಂದ ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗಿನ ಸಮಯವು ಅತ್ಯಂತ ಮಂಗಳಕರವಾಗಿದೆ. 10 ದಿನಗಳ ಕಾಲ ತನ್ನ ಭಕ್ತರೊಂದಿಗೆ ಉಳಿದ ನಂತರ, ಅನಂತ ಚತುರ್ದಶಿಯ ದಿನ ಹೊರಡುತ್ತಾನೆ. ಧರ್ಮದ ಪ್ರಕಾರ- ಪುರಾಣಗಳು ಹಾಗೂ ಜ್ಯೋತಿಷ್ಯದ ಪ್ರಕಾರ, ಈ 10 ದಿನಗಳ ಸಮಯವು ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ, ಕೆಲವು ಪರಿಹಾರಗಳನ್ನು ಮಾಡುವುದರಿಂದ ವ್ಯಕ್ತಿಯ ಸಕಲ ಸಂಕಷ್ಟವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಗಣೇಶೋತ್ಸವದಲ್ಲಿ ಈ ಪರಿಹಾರವನ್ನು ಮಾಡಿ :
ತೊಂದರೆ ತಪ್ಪಿಸಲು ಪರಿಹಾರ: ಮನೆ ಮತ್ತು ವ್ಯಾಪಾರದಲ್ಲಿ ಆಗಾಗ ಬಿಕ್ಕಟ್ಟುಗಳು ಎದುರಾದರೆ, ಗಣೇಶೋತ್ಸವದ ಸಮಯದಲ್ಲಿ, ಮನೆಯಲ್ಲಿ ಗಣೇಶ ಯಂತ್ರವನ್ನು ಸ್ಥಾಪಿಸಿ. ಇದು ದುಷ್ಟ ಶಕ್ತಿಗಳ ವಿರುದ್ಧವೂ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನು ರಕ್ಷಿಸುತ್ತದೆ.
ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಪರಿಹಾರಗಳು: ಪ್ರಗತಿಯಲ್ಲಿ ಪದೇ ಪದೇ ಅಡೆತಡೆಗಳು ಉಂಟಾಗುತ್ತಿದ್ದರೆ, ನಂತರ ಗಣೇಶ ಚತುರ್ಥಿಯಂದು (Ganesh Chaturthi) ಅಥವಾ ಇಡೀ 10 ದಿನಗಳವರೆಗೆ ಆನೆಗಳಿಗೆ ಹಸಿರು ಮೇವನ್ನು ತಿನ್ನಿಸಿ. ಅಲ್ಲದೆ, ಗಜಾನನಣ ದೇವಸ್ಥಾನಕ್ಕೆ ಹೋಗಿ ನಿಮ್ಮ ಸಮಸ್ಯೆಗಳನ್ನು ನಿವಾರಿಸುವಂತೆ ದೇವರನ್ನು ಪ್ರಾರ್ಥಿಸಿ, ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ.
ಇದನ್ನೂ ಓದಿ- Ganesh Chaturthi 2021: ಗಣೇಶ ಚತುರ್ಥಿಯಂದು, ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಪೂಜಿಸಿ ಶುಭ ಫಲ ಪಡೆಯಿರಿ
ಸಂಪತ್ತನ್ನು ಹೆಚ್ಚಿಸಲು ಪರಿಹಾರ: ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗಿನ 10 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ , ಗಣಪತಿಗೆ ಶುದ್ಧ ತುಪ್ಪ ಮತ್ತು ಬೆಲ್ಲವನ್ನು ಅರ್ಪಿಸಿ. ಅದರ ನಂತರ ಈ ಭೋಗವನ್ನು ಹಸುವಿಗೆ ತಿನ್ನಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಶೀಘ್ರದಲ್ಲೇ ಸುಧಾರಿಸುವುದು ಎಂಬ ನಂಬಿಕೆ ಇದೆ.
ಬಡ್ತಿ ಪಡೆಯಲು ಪರಿಹಾರ: ಗಣೇಶ ಚತುರ್ಥಿಯಂದು ನಿಮ್ಮ ಮನೆಯಲ್ಲಿ ಹಳದಿ ಬಣ್ಣದ ಗಣೇಶ (Lord Ganesh) ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ. ಪೂಜೆಯಲ್ಲಿ 5 ಕಟ್ಟುಗಳ ಅರಿಶಿನವನ್ನು ಅರ್ಪಿಸಿ. ಈ ಸಮಯದಲ್ಲಿ, ಶ್ರೀ ಗಣಪತಿಪತಯೇ ನಮಃ ಮಂತ್ರವನ್ನು ಪಠಿಸಿ. ನಂತರ 108 ದೂರ್ವಾದಲ್ಲಿ ಒದ್ದೆಯಾದ ಅರಿಶಿನವನ್ನು ಹಚ್ಚಿ ಮತ್ತು ಶ್ರೀ ಗಜವಕತ್ರಂ ನಮೋ ನಮಃ ಎಂದು ಪಠಿಸುವ ಮೂಲಕ ಗಣಪತಿಗೆ ಅರ್ಪಿಸಿ. ಇದನ್ನು 10 ದಿನಗಳವರೆಗೆ ಮಾಡುವುದರಿಂದ ನಿಮಗೆ ಬಡ್ತಿ ಸಿಗುತ್ತದೆ.
ಮಗಳ ಮದುವೆಗೆ ಪರಿಹಾರ: ಮಗಳ ಮದುವೆಯಲ್ಲಿ ವಿಳಂಬವಾದರೆ, ಗಣೇಶ ಚತುರ್ಥಿಯಂದು, ಮಗಳನ್ನು ಬೇಗನೆ ಮದುವೆಯಾಗುವಂತೆ ಪ್ರಾರ್ಥಿಸುವಾಗ ಮೋದಕವನ್ನು ದೇವರಿಗೆ ಅರ್ಪಿಸಿ. ಸಾಧ್ಯವಾದರೆ, ವ್ರತವನ್ನೂ ಮಾಡಿ.
ಇದನ್ನೂ ಓದಿ- Planetary Transits: ಶುಕ್ರ, ಮಂಗಳನ ರಾಶಿ ಪರಿವರ್ತನೆ; ಈ 3 ರಾಶಿಯವರಿಗೆ ಅದೃಷ್ಟ
ಮಗನ ಮದುವೆಗೆ ಪರಿಹಾರ: ಮಗನ ಮದುವೆಯಲ್ಲಿ ವಿಳಂಬವಾದರೆ, ಗಣೇಶ ಚತುರ್ಥಿಯಂದು ಗಣಪತಿ ಬಪ್ಪನಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸಿ ಮತ್ತು ಶೀಘ್ರದಲ್ಲೇ ಮಗನ ವಿವಾಹವಾಗುವಂತೆ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ಶೀಘ್ರದಲ್ಲೇ ಮಗನ ಮದುವೆ ನಡೆಯಲಿದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.