ಶ್ರಾವಣ ಮಾಸದಲ್ಲಿ ಮಾಡುವ ಈ ಕೆಲಸಗಳಿಂದ ದೂರವಾಗಲಿದೆ ಎಲ್ಲಾ ಕಷ್ಟ

ಈ ವರ್ಷದಲ್ಲಿ 5 ಶ್ರಾವಣ ಸೋಮವಾರ ಬರುತ್ತದೆ. ಶ್ರಾವಣ ಮಾಸದಲ್ಲಿ ಶಿವನನ್ನು ಪ್ರಸನ್ನಗೊಳಿಸಲು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.  

Written by - Ranjitha R K | Last Updated : Jul 4, 2022, 02:48 PM IST
  • ಜುಲೈ 14 ರಿಂದ ಶ್ರಾವಣ ಪ್ರಾರಂಭವಾಗುತ್ತದೆ.
  • ಈ ವರ್ಷದಲ್ಲಿ 5 ಶ್ರಾವಣ ಸೋಮವಾರ ಬರುತ್ತದೆ.
  • ಶ್ರಾವಣ ತಿಂಗಳಿಗೆ ಪರಿಣಾಮಕಾರಿ ಪರಿಹಾರಗಳು
ಶ್ರಾವಣ ಮಾಸದಲ್ಲಿ ಮಾಡುವ ಈ ಕೆಲಸಗಳಿಂದ ದೂರವಾಗಲಿದೆ ಎಲ್ಲಾ ಕಷ್ಟ title=
Shravana masa remedies (file photo)

ಬೆಂಗಳೂರು : ಆಷಾಢ ಮಾಸ ಮುಗಿದ ತಕ್ಷಣ, ಅಂದರೆ  ಜುಲೈ  14 ರಿಂದ ಶ್ರಾವಣ ಪ್ರಾರಂಭವಾಗುತ್ತದೆ.  ಆಗಸ್ಟ್   12ರವರೆಗೆ ಶ್ರಾವಣ ಮಾಸ ಮುಂದುವರೆಯುತ್ತದೆ. ಈ ವರ್ಷದಲ್ಲಿ 5 ಶ್ರಾವಣ ಸೋಮವಾರ ಬರುತ್ತದೆ. ಶ್ರಾವಣ ಮಾಸದಲ್ಲಿ ಶಿವನನ್ನು ಪ್ರಸನ್ನಗೊಳಿಸಲು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.  ಇದನ್ನು ಅನುಸರಿಸುವುದರಿಂದ ಎಲ್ಲಾ  ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳಲಾಗುತ್ತದೆ. 

ಶ್ರಾವಣ ತಿಂಗಳಿಗೆ ಪರಿಣಾಮಕಾರಿ ಪರಿಹಾರಗಳು :
ಶ್ರೀಮಂತರಾಗಲು ಏನು ಮಾಡಬೇಕು ? : ನೀವು ಹಣದ ಮುಗ್ಗಟ್ಟಿನಿಂದ ತೊಂದರೆಗೀಡಾಗಿದ್ದು, ಆರ್ಥಿಕ ಸ್ಥಿತಿಯನ್ನು ಬಲಪಡಿಸಬೇಕಾದರೆ, ಶ್ರಾವಣ ಮಾಸದಲ್ಲಿ ಯಾವುದಾದರೊಂದು ದಿನ  ಪೂರ್ವ ದಿಕ್ಕಿಗೆ ಮುಖ ಮಾಡಿ, ಮನೆಯ ಒಂದು ಮೂಲೆಯಲ್ಲಿ ಸಣ್ಣ ಶಂಖ ಮತ್ತು 7 ಚಿಪ್ಪುಗಳನ್ನು ಇರಿಸಿ. ನಂತರ ಕುಳಿತುಕೊಂಡು 'ಓಂ ಗಣಪತಯೇ ನಮಃ' ಎಂಬ ಜಪ ಮಾಡಿ. ಕೆಲವೇ ದಿನಗಳಲ್ಲಿ ಕಷ್ಟ ಪರಿಹಾರವಾಗುವ ಲಕ್ಷಣಗಳು ಕಾಣಿಸುತ್ತವೆ. 

ಇದನ್ನೂ ಓದಿ : Astro Tips: ಬೆಕ್ಕಿಗೆ ಸಂಬಂಧಿಸಿದ ಈ ಒಂದು ಸಂಗತಿ ನಿಮಗೆ ಕೋಟ್ಯಾಧಿಪತಿಯನ್ನಾಗಿಸಬಹುದು, ಲಕ್ಷ್ಮಿ ಯಂತ್ರದಂತೆ ಕೆಲಸ ಮಾಡುತ್ತದೆ

ವೈವಾಹಿಕ ಜೀವನದ ಸಮಸ್ಯೆಯನ್ನು ಹೋಗಲಾಡಿಸಲು : ಶ್ರಾವಣ  ಮಾಸದಲ್ಲಿ ನಿಮ್ಮ ಕೈಗಳಿಂದ ಮಣ್ಣಿನ ಶಿವಲಿಂಗವನ್ನು ಮಾಡಿ. ಸೋಮವಾರದಂದು ಈ ಶಿವಲಿಂಗಕ್ಕೆ ಕುಂಕುಮ-ಅರಿಶಿನ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ಮನೆಯಲ್ಲಿನ ದುಃಖ ಮತ್ತು ಅಶಾಂತಿ ನಿವಾರಣೆಗೆ : ಶ್ರಾವಣ  ಮಾಸದಲ್ಲಿ ಪ್ರತಿದಿನ ಶಿವನಿಗೆ 21 ಬಿಲ್ವ ಪಾತ್ರೆಗಳನ್ನು ತೆಗೆದುಕೊಂಡು, ಅದರಲ್ಲಿ  ಬಿಳಿ ಚಂದನದಿಂದ 'ಓಂ ನಮಃ ಶಿವಾಯ' ಎಂದು ಬರೆದು ಅರ್ಪಿಸಿ. ಹೀಗೆ ಮಾಡಿದರೆ ಎಲ್ಲಾ ತೊಂದರೆಗಳು ದೂರವಾಗಿ, ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : ಜುಲೈ 16 ರಿಂದ ಸೂರ್ಯನಂತೆ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮತ್ತು ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News