ಚೈತ್ರ ಮಾಸದಲ್ಲಿ ಎರಡೂ ಕೈಗಳಿಂದ ಸಾಕಷ್ಟು ಹಣ ಬಾಚಿಕೊಳ್ಳಲ್ಲಿದ್ದಾರೆ ಈ 4 ರಾಶಿಗಳ ಜನರು! ಕಾರಣ ಇಲ್ಲಿದೆ

Five Rajyog Formation: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಆರಂಭದಲ್ಲಿಯೇ ಗ್ರಹಗಳ ಅಪರೂಪದ ಸಂಯೋಜನೆ ನೆರವೇರಲಿದೆ. ಇದರಿಂದಾಗಿ 5 ರಾಜಯೋಗಗಳು ರೂಪುಗೊಳ್ಳಲಿವೆ. ಈ ರಾಜಯೋಗಗಳು ಒಟ್ಟು 5 ರಾಶಿಗಳ ಸ್ಥಳೀಯರಿಗೆ ಈ ಇಡೀ ತಿಂಗಳು ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿವೆ.  

Written by - Nitin Tabib | Last Updated : Mar 8, 2023, 10:18 PM IST
  • ಈ ಬಾರಿ ಶನಿಯು ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭದಲ್ಲಿ ಷಶ ರಾಜಯೋಗವನ್ನು ರೂಪಿಸುತ್ತಿದ್ದರೆ,
  • ಸ್ವರಾಶಿ ಮೀನದಲ್ಲಿ ಹಂಸರಾಜ ಯೋಗ ನಿರ್ಮಾಣಗೊಳಿಸುತ್ತಿದ್ದಾನೆ.
  • ಶುಕ್ರನು ಉಚ್ಛ ಮೀನದಲ್ಲಿದ್ದು ಮಾಲವ್ಯ ರಾಜಯೋಗವನ್ನು ಮತ್ತು ಬುಧ-ಸೂರ್ಯನು ಕುಂಭದಲ್ಲಿದ್ದು ಬುಧಾದಿತ್ಯ ಯೋಗವನ್ನು ನಿರ್ಮಿಸಲಿದ್ದಾರೆ.
  • ಚಂದ್ರನು ಕನ್ಯಾರಾಶಿಯಲ್ಲಿರುವುದರಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ.
ಚೈತ್ರ ಮಾಸದಲ್ಲಿ ಎರಡೂ ಕೈಗಳಿಂದ ಸಾಕಷ್ಟು ಹಣ ಬಾಚಿಕೊಳ್ಳಲ್ಲಿದ್ದಾರೆ ಈ 4 ರಾಶಿಗಳ ಜನರು! ಕಾರಣ ಇಲ್ಲಿದೆ title=
ಚೈತ್ರ ಮಾಸದಲ್ಲಿ 5 ರಾಜಯೋಗಗಳ ನಿರ್ಮಾಣ!

Five Rajyog Effect 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಜಯೋಗಗಳ ಅಪರೂಪದ ಸಂಯೋಜನೆ ಹೋಳಿ ಹಬ್ಬದ ಸಂದರ್ಭದಲ್ಲಿ ನೆರವೇರಲಿದೆ. ಇದರಿಂದ 4 ರಾಶಿಯ ಜಾತಕದವರಿಗೆ ಇಡೀ ತಿಂಗಳು ಈ ಸಂಯೋಜನೆಯಿಂದ ಅಪಾರ ಧನಲಾಭ ಪ್ರಾಪ್ತಿಯಾಗಲಿದೆ. ಈ ಬಾರಿ ಶನಿಯು ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭದಲ್ಲಿ ಷಶ ರಾಜಯೋಗವನ್ನು ರೂಪಿಸುತ್ತಿದ್ದರೆ, ಸ್ವರಾಶಿ ಮೀನದಲ್ಲಿ ಹಂಸರಾಜ ಯೋಗ ನಿರ್ಮಾಣಗೊಳಿಸುತ್ತಿದ್ದಾನೆ. ಶುಕ್ರನು ಉಚ್ಛ ಮೀನದಲ್ಲಿದ್ದು ಮಾಲವ್ಯ ರಾಜಯೋಗವನ್ನು ಮತ್ತು ಬುಧ-ಸೂರ್ಯನು ಕುಂಭದಲ್ಲಿದ್ದು ಬುಧಾದಿತ್ಯ ಯೋಗವನ್ನು ನಿರ್ಮಿಸಲಿದ್ದಾರೆ. ಚಂದ್ರನು ಕನ್ಯಾರಾಶಿಯಲ್ಲಿರುವುದರಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಇಂತಹ ಈ 4 ರಾಶಿಯವರಿಗೆ ಈ ಅತ್ಯಂತ ಮಂಗಳಕರವಾದ ರಾಜಯೋಗವು ತುಂಬಾ ಫಲಪ್ರದ ಸಾಬೀತಾಗಲಿದೆ.

ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ಈ ಬಾರಿ ಹೋಳಿಯಲ್ಲಿ 5 ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಈ ಶುಭ ಯೋಗದ ಸೃಷ್ಟಿಯಿಂದ ಇಡೀ ಚೈತ್ರ ಮಾಸವು ಮೇಷ ರಾಶಿಯವರಿಗೆ ಸಂತಸದ ಮಾಸಬಾಗಲಿದೆ. ಹೋಳಿಯಂದು ರೂಪುಗೊಂಡ ಈ ಮಂಗಳಕರ ಯೋಗವು ನಿಮ್ಮ ವೃತ್ತಿಜೀವನದಲ್ಲಿ ಅಪಾರ ಪ್ರಗತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಆರ್ಥಿಕ ಲಾಭವೂ ಇದರಿಂದ ಹೆಚ್ಚಾಗಲಿದೆ. ಸರ್ಕಾರಿ ವಲಯದಲ್ಲಿ ಸ್ಥಗಿತಗೊಂಡ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಈ ಸಂದರ್ಭದಲ್ಲಿ ಹಿರಿಯ ಸಹೋದರರಿಂದ ಸಹಕಾರ ಸಿಗಲಿದೆ. ನಿಮ್ಮ ಎಲ್ಲಾ ಆಸೆಗಳು ಈ ಅವಧಿಯಲ್ಲಿ ಈಡೇರಲಿವೆ.

ಮಿಥುನ ರಾಶಿ
ಚೈತ್ರ ಮಾಸವು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಈ ರಾಶಿಯ ಸ್ಥಳಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಕೌಟುಂಬಿಕ ಜೀವನದಲ್ಲೂ ವಾತ್ಸಲ್ಯ ಮತ್ತು ಪ್ರೀತಿಯನ್ನು ನೀವು ಕಾಣಬಹುದು. ಈ ತಿಂಗಳು ಕೆಲವು ಖರ್ಚುಗಳು ಇರಬಹುದು, ಆದರೆ ಶುಭ ಕಾರ್ಯಗಳಿಗೆ ಖರ್ಚು ಮಾಡುವುದು ಸಂತೋಷವನ್ನು ತರುತ್ತದೆ. ವೃತ್ತಿಯ ದೃಷ್ಟಿಯಿಂದಲೂ ಈ ತಿಂಗಳು ಉತ್ತಮ ಎಂದು ಹೇಳಲಾಗುತ್ತಿದೆ. ಪ್ರಯಾಣಕ್ಕೆ ಶುಭಯೋಗಗಳು ರೂಪುಗೊಳ್ಳುತ್ತಿವೆ.

ತುಲಾ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರಿಗೆ ಈ ರಾಜಯೋಗವು ಆನಂದದಾಯಕ ಸಾಬೀತಾಗಲಿದೆ. ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಾಗಲಿದೆ. ಅಷ್ಟೇ ಅಲ್ಲ, ಈ ರಾಶಿಯ ಜನರು ತಮ್ಮ ತೊಂದರೆಗಳಿಂದ ಮುಕ್ತಿ ಪಡೆಯಲಿದ್ದಾರೆ. ನೆರೆಹೊರೆಯವರೊಂದಿಗಿನ ಸಂಬಂಧದಲ್ಲಿ ಮಾಧುರ್ಯತೆ ಇರಲಿದೆ. ದೀರ್ಘ ಕಾಲದಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ಈ ಅವಧಿಯಲ್ಲಿ, ನೀವು ಮನೆಯ ಹಿರಿಯರಿಂದ ಆಶೀರ್ವಾದವನ್ನು ಪಡೆಯುವಿರಿ.

ಇದನ್ನೂ ಓದಿ-ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಧನ-ಸಂಪತ್ತಿನ ಕಾರಕ ಗ್ರಹ, ಈ ರಾಶಿಗಳ ಜನರಿಗೆ ಭಾರಿ ವಿತ್ತೀಯ ಲಾಭ!

ಮೀನ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹೋಳಿ ಹಬ್ಬದಂದು ರೂಪುಗೊಂಡ ರಾಜಯೋಗವು ಮೀನ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಈ ಸಮಯದಲ್ಲಿ ನೀವು ವಾಹನ ಮತ್ತು ವಸ್ತು ಸಂಪನ್ಮೂಲಗಳನ್ನು ಪಡೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಸಹಕಾರ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಪ್ರಯಾಣದ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ತಂದೆ ಮತ್ತು ಪಿತ್ರಾರ್ಜಿತ ಆಸ್ತಿಯಿಂದ ನಿಮಗೆ ಲಾಭವಾಗಲಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರಲಿದೆ. ಆರ್ಥಿಕ ವಿಷಯಗಳಲ್ಲಿ ಲಾಭವಾಗಲಿದೆ.

ಇದನ್ನೂ ಓದಿ-Holi 2023 Horoscope: ಮುಂದಿನ ಹೋಳಿ ಹಬ್ಬದವರೆಗೆ ಈ 4 ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ- 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News