ಮಸಾಲೆ ಡಬ್ಬಿಯಲ್ಲಿರುವ ಲವಂಗದ ನೀರು ಕುಡಿಯುವುದರಿಂದ ಕೂದಲಿಗೆ ಸಿಗುತ್ತೆ 5 ಪ್ರಮುಖ ಪ್ರಯೋಜನಗಳು

Clove Benefis: ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿರುವ ಲವಂಗವು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದು ಆರೋಗ್ಯಕ್ಕೆ ವರದಾನವಾಗಿದೆ. 

Written by - Yashaswini V | Last Updated : Oct 15, 2024, 07:33 PM IST
  • ಲವಂಗದಲ್ಲಿ ಉತ್ಕರ್ಷಣ ನಿರೋಧಕ, ಕಬ್ಬಿಣ, ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ
  • ಲವಂಗದಲ್ಲಿ ಬೀಟಾ-ಕ್ಯಾರೊಟಿನ್ ಇದ್ದು ಇದು ನೆತ್ತಿಯನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
  • ಲವಂಗದ ನೀರಿನ ಬಳಕೆಯಿಂದ ಕೂದಲಿಗೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ...
ಮಸಾಲೆ ಡಬ್ಬಿಯಲ್ಲಿರುವ ಲವಂಗದ ನೀರು ಕುಡಿಯುವುದರಿಂದ ಕೂದಲಿಗೆ ಸಿಗುತ್ತೆ  5 ಪ್ರಮುಖ ಪ್ರಯೋಜನಗಳು  title=

Cloves For Hair: ಭಾರತೀಯ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಲವಂಗದ ಬಳಕೆಯು ಹಲವು ವಿಧದಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ನೆತ್ತಿಯನ್ನು ಪೋಷಿಸಿ, ಕೂದ್ಲೈನ ಆರೋಗ್ಯವನ್ನು ಸುಧಾರಿಸುವುದರಲ್ಲೂ ಲವಂಗ ಅತ್ಯುತ್ತಮ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

ಲವಂಗದಲ್ಲಿ ಉತ್ಕರ್ಷಣ ನಿರೋಧಕ, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಮ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿದೆ. ಇದರ ಬಳಕೆಯೂ ಕೂದಲಿನ ಆರೋಗ್ಯಕ್ಕೆ ಲಾಭದಾಯಕವಾಗಿದೆ. 

ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದೆರಡು ಲವಂಗ ಹಾಕಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಕೂದಲಿಗೆ ಸಿಗುವ 'ಐದು' ಪ್ರಮುಖ ಪ್ರಯೋಜನಗಳೆಂದರೆ... 

ಇದನ್ನೂ ಓದಿ- ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...

ನೆತ್ತಿಯ ರಕ್ಷಣೆ: 
ಲವಂಗದಲ್ಲಿ ಬೀಟಾ-ಕ್ಯಾರೊಟಿನ್ ಇದ್ದು ಇದು ನೆತ್ತಿಯನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. 

ತಲೆಹೊಟ್ಟು ನಿವಾರಣೆ: 
ಲವಂಗವು ನಂಜುನಿರೋಧಕ, ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೋಬಿಯಲ್ ಹೆಚ್ಚಾಗಿದೆ. ಲವಂಗದ ನೀರಿನ ಬಳಕೆಯಿಂದ ತಲೆಹೊಟ್ಟು ತುರಿಕೆ ಸಮಸ್ಯೆಗಳನ್ನು ನಿವಾರಿಸಬಹುದು. 

ಕೂದಲು ಉದುರುವಿಕೆ: 
ಲವಂಗಡ ನೀರು ಗಮನಾರ್ಹವಾಗಿ ಕೂದಲುದುರುವಿಕೆ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. 

ಇದನ್ನೂ ಓದಿ- ಈ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಕೂದಲು ಉದುರುವುದಕ್ಕೆ ಬೀಳುವುದು ಫುಲ್ ಸ್ಟಾಪ್ ! ಉದ್ದ, ಗಾಢ, ಕಡು ಕಪ್ಪು ಕೂದಲಿಗೆ ಇದೇ ಟಾನಿಕ್ !

ಕೂದಲ ಬೆಳವಣಿಗೆ: 
ಲವಂಗದ ನೀರಿನಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ್ದು ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 

ಶಿಲೀಂಧ್ರಗಳಿಂದ ರಕ್ಷಣೆ: 
ಲವಂಗದ ನೀರು ಕೂದಲ ಬೆಳವಣಿಗೆಗೆ ಅಡ್ಡಿಯಾಗಿರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಕೂದಲಿನ ಕಿರು ಚೀಲಗಳನ್ನು ಬಳಪಡಿಸುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News