Excessive Sweating: ದೇಹದ ದುರ್ವಾಸನೆಯಿಂದ ಪರಿಹಾರ ಪಡೆಯಲು ಸಿಂಪಲ್ ಟಿಪ್ಸ್

Body Odor Home Remedies: ಬೇಸಿಗೆಯಲ್ಲಿ ಹಲವರಿಗೆ ದೇಹದ ದುರ್ವಾಸನೆ ತುಂಬಾ ಕಾಡುತ್ತದೆ. ಏಕೆಂದರೆ, ಕೆಲವರು ಹೆಚ್ಚು ಬೆವರುತ್ತಾರೆ. ಆದರೆ, ಅತಿಯಾದ ಬೆವರುವಿಕೆ, ದುರ್ವಾಸನೆಯಿಂದ ಒಂದು ರೀತಿಯ ಮುಜುಗರದ ಭಾವನೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಸಹಕಾರಿ ಆಗಲಿವೆ. 

Written by - Yashaswini V | Last Updated : May 20, 2022, 08:22 AM IST
  • ನೀವು ಸ್ವಭಾವತಃ ಹೆಚ್ಚು ಬೆವರುವವರಾಗಿದ್ದರೆ ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
  • ಹೆಚ್ಚು ಎಣ್ಣೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು.
  • ಕೊಬ್ಬಿನ ಪದಾರ್ಥಗಳನ್ನು ತಿನ್ನುವುದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ.
Excessive Sweating: ದೇಹದ ದುರ್ವಾಸನೆಯಿಂದ ಪರಿಹಾರ ಪಡೆಯಲು ಸಿಂಪಲ್ ಟಿಪ್ಸ್   title=
Remedies For Sweating

ಬೇಸಿಗೆಯಲ್ಲಿ ದೇಹದ ದುರ್ವಾಸನೆಯಿಂದ ಪರಿಹಾರ ಪಡೆಯಲು ಸಿಂಪಲ್ ಟಿಪ್ಸ್: ದೇಶಾದ್ಯಂತ ಹಲವೆಡೆ ಮುಂಗಾರು ಆರಂಭವಾಗಿದೆ, ಇನ್ನೂ ಕೆಲವೆಡೆ ಬಿರು ಬಿಸಿಲಿನ ತಾಪ ಹೆಚ್ಚಾಗಿದೆ.  ಬಿಸಿಗಾಳಿ, ಸುಡುವ ಬಿಸಿಲು ಮತ್ತು ತೇವಾಂಶದಿಂದ ದೇಹದಿಂದ ಬೆವರು ಬರುವುದು ತುಂಬಾ ಸಾಮಾನ್ಯವಾಗಿದೆ. ಆದರೆ, ಕೆಲವರು ಅತಿಯಾಗಿ ಬೆವರುತ್ತಾರೆ. ಇದು ದೇಹದಲ್ಲಿ ದುರ್ವಾಸನೆಯನ್ನು ಉಂಟು ಮಾಡುತ್ತದೆ. ದೇಹದ ದುರ್ವಾಸನೆ ಸುತ್ತಮುತ್ತಲಿನ ಜನರಿಗೆ ತೊಂದರೆ ನೀಡುತ್ತದೆ. ಜೊತೆಗೆ ದೇಹದ ದುರ್ವಾಸನೆಯಿಂದಾಗಿ ಆ ವ್ಯಕ್ತಿಗೂ ಒಂದು ರೀತಿಯ ಕೀಳರಮಿ, ಮುಜುಗರದ ಭಾವನೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕೇಳು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಮುಕ್ತಿ ಪದೆಯಬಹುದು. ಈ ಲೇಖನದಲ್ಲಿ ಅಂತಹ ಕೆಲವು ಸಲಹೆಗಳನ್ನು ನೀಡಲಿದ್ದೇವೆ.

ದೇಹದ ದುರ್ವಾಸನೆಯಿಂದ ಪರಿಹಾರ ಪಡೆಯಲು ಈ ಸಲಹೆಗಳನ್ನು ಅನುಸರಿಸಿ ನೋಡಿ:
* ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ:

ಫ್ಯಾಶನ್ ಯುಗದಲ್ಲಿ ಟ್ರೆಂಡಿಯಾಗಿ ಕಾಣಬೇಕೆಂದು ಬಿಗಿಯಾದ ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದಾಗಿ ದೇಹದ ಹಲವು ಭಾಗಗಳಿಗೆ ಗಾಳಿ ಬಾರದೆ ವಿಪರೀತ ಬೆವರುವುದು ಶುರುವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಮುಖ್ಯ. ನೀವು ಅತಿಯಾಗಿ ಬೆವರುವವರಾಗಿದ್ದರೆ ನಿಮಗೆ ಆರಾಮದಾಯಕ ಉಡುಪುಗಳು ಪರಿಹಾರ ನೀಡಬಹುದು.

ಇದನ್ನೂ ಓದಿ- Blood Pressure: ಬಿಪಿ ನಿಯಂತ್ರಣದಲ್ಲಿಡಲು ಈ ಹಣ್ಣುಗಳನ್ನು ಇಂದೇ ನಿಮ್ಮ ಡಯಟ್ನಲ್ಲಿ ಸೇರಿಸಿ

* ಕೊಬ್ಬಿನ ಪದಾರ್ಥಗಳನ್ನು ಹಿತ-ಮಿತವಾಗಿ ಸೇವಿಸಿ:
ನೀವು ಸ್ವಭಾವತಃ ಹೆಚ್ಚು ಬೆವರುವವರಾಗಿದ್ದರೆ ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಹೆಚ್ಚು ಎಣ್ಣೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು. ಕೊಬ್ಬಿನ ಪದಾರ್ಥಗಳನ್ನು ತಿನ್ನುವುದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ, ಇದರಿಂದಾಗಿ ವಾಸನೆಯು ಉದ್ಭವಿಸುತ್ತದೆ.

* ಟೆನ್ಷನ್ ಫ್ರೀ ಆಗಿರಿ :
ಸುಡುವ ಶಾಖದಿಂದ ಟೆನ್ಷನ್ ಆಗುವುದು ಸಾಮಾನ್ಯ, ಆದರೆ ಒತ್ತಡವು ಅತಿಯಾದ ಬೆವರುವಿಕೆಗೆ ಕಾರಣವಾಗಬಹುದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಹಾಗಾಗಿ ಮನಸ್ಸನ್ನು ಆದಷ್ಟು ರಿಲ್ಯಾಕ್ಸ್ ಮಾಡಲು ಪ್ರಯತ್ನಿಸಿ ಮತ್ತು ಟೆನ್ಷನ್ ಫ್ರೀ ಆಗಿರಿ ಇದರಿಂದ ಬೆವರುವಿಕೆ ಕಡಿಮೆ ಆಗುವುದು ಮಾತ್ರವಲ್ಲ, ಇತರ ಕೆಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.

ಇದನ್ನೂ ಓದಿ- Raisins Benefits: ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ತಿನ್ನುವುದರಿಂದ ಸಿಗುತ್ತೆ ಹಲವು ಪ್ರಯೋಜನ

* ರಾತ್ರಿಯಲ್ಲಿ ಈ ಕೆಲಸವನ್ನು ಮಾಡಿ: 
ಅತಿಯಾಗಿ ಬೆವರುವವವರು ರಾತ್ರಿ ಮಲಗುವ ಮೊದಲು ಸ್ನಾನ ಮಾಡಿ, ಬಳಿಕ ಕಂಕುಳನ್ನು ಒಣಗಿಸಿ ಆ ಜಾಗದಲ್ಲಿ ಡಿಯೋಡರೆಂಟ್ ಹಚ್ಚಿದರೆ ಬೆವರುವುದು ಕಡಿಮೆಯಾಗುತ್ತದೆ. ಇದನ್ನು ಕೆಲವು ದಿನಗಳವರೆಗೆ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News