ಬಿಕೋ ಎನ್ನುತ್ತಿದ್ದ ಈದ್ಗಾ ಮೈದಾನದಲ್ಲಿ ಕುರಿಗಳದ್ದೇ ದರ್ಬಾರ್…!

Eid-ul-Adha: ನಾಳೆ ಅಂದರೆ 29ರಂದು ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಆಚರಿಸುವ ಬಕ್ರಿದ್ ಹಬ್ಬ ನಡೆಯಲಿದೆ. ಹಾಗಾಗೀ ಬನ್ನೂರು ಕುರಿ, ಹೈದ್ರಾಬಾದ್ ಬ್ರೀಡ್ , ಟಗರು , ವಾತಾ, ಬಿಜಾಪುರ ಕುರಿ, ಮಳ್ಳವಳಿ ಟಗರು.. ಅಬ್ಬಬ್ಬಾ ಒಂದಾ ಎರಡಾ..  ಚಾಮರಾಜಪೇಟೆ ಈದ್ಗಾ ಮೈದಾನದಲ್ಲೀಗ ಕುರಿಗಳದ್ದೇ ದರ್ಬಾರ್. 

Written by - Bhavya Sunil Bangera | Edited by - Yashaswini V | Last Updated : Jun 28, 2023, 03:21 PM IST
  • ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿನ ಕುರಿ ಸಂತೆಯಲ್ಲಿ ಈ ಬಾರಿ ವೆರೈಟಿ ವೆರೈಟಿ ಕುರಿ ಬಿಕರಿಯಾಗ್ತಿವೆ.
  • ಪ್ರತಿಯೊಬ್ಬ ವ್ಯಾಪಾರಿಯೂ ನೂರಾರು ಕುರಿಗಳನ್ನು ಮಾರಾಟ ಮಾಡಿದ್ದಾರೆ.
  • ಅದ್ರಲ್ಲೂ ಹೈದ್ರಾಬಾದ್ ಬ್ರೀಡ್ , ನಾಟಿ ಬ್ರೀಡ್, ಬನ್ನೂರು ಕುರಿ, ಮೇಕೆಗಳ ಬೆಲೆ 10 ಸಾವಿರದಿಂದ ಲಕ್ಷದವರೆಗೂ ಇದೆ.
ಬಿಕೋ ಎನ್ನುತ್ತಿದ್ದ ಈದ್ಗಾ ಮೈದಾನದಲ್ಲಿ ಕುರಿಗಳದ್ದೇ ದರ್ಬಾರ್…! title=

Eid-ul-Adha 2023: ಬಕ್ರೀದ್ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಮುಸ್ಲಿಂ ಬಾಂಧವರು ಬಹಳ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಬಕ್ರೀದ್ ಹಬ್ಬದ  ಅಟ್ರಾಕ್ಷನ್  ಅಂದ್ರೆ ಕುರಿಗಳು. ಹೀಗಾಗೇ ಮಹಾನಗರಿಯಲ್ಲಿ ವಿವಿಧ ಬ್ರೀಡ್ ನ ಕುರಿಗಳು ಮಾರಾಟಕ್ಕೆ ರೆಡಿಯಾಗಿವೆ. ಈದ್ಗಾ ಮೈದಾನದಲ್ಲಿ ಅವುಗಳದ್ದೆ ಕಾರುಬಾರು ಸ್ಟಾರ್ಟ್ ಆಗಿದ್ದು ವ್ಯಾಪಾರಿಗಳಿಗಂತೂ ಈಗ ಸುಗ್ಗಿಯೋ ಸುಗ್ಗಿಎಂಬಂತಾಗಿದೆ.
 
ಬಿಕೋ ಎನ್ನುತ್ತಿದ್ದ ಈದ್ಗಾ ಮೈದಾನದಲ್ಲಿ ಕುರಿಗಳದ್ದೇ ದರ್ಬಾರ್…!
ನಾಳೆ ಅಂದರೆ 29ರಂದು ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಆಚರಿಸುವ ಬಕ್ರಿದ್ ಹಬ್ಬ ನಡೆಯಲಿದೆ. ಹಾಗಾಗೀ ಬನ್ನೂರು ಕುರಿ, ಹೈದ್ರಾಬಾದ್ ಬ್ರೀಡ್ , ಟಗರು , ವಾತಾ, ಬಿಜಾಪುರ ಕುರಿ, ಮಳ್ಳವಳಿ ಟಗರು.. ಅಬ್ಬಬ್ಬಾ ಒಂದಾ ಎರಡಾ..  ಚಾಮರಾಜಪೇಟೆ ಈದ್ಗಾ ಮೈದಾನದಲ್ಲೀಗ ಕುರಿಗಳದ್ದೇ ದರ್ಬಾರ್. 

ಹೌದು, ಬಕ್ರೀದ್ ಹಬ್ಬವಿರೋದ್ರಿಂದ ಎಲ್ಲಾ ವೈರಟಿ ಕುರಿಗಳು ಇಲ್ಲಿ ಮಾರಾಟಕಕ್ಕೆ ಲಭ್ಯವಿವೆ. ಯಾವುದೇ ಬೇಧ-ಭಾವವಿಲ್ಲದೇ ಮುಸ್ಲಿಂ ಬಾಂಧವರು ಇಲ್ಲಿಗೆ ಬಂದು ಕುರಿ ಖರೀದಿಸ್ತಿದ್ದಾರೆ.. ಕುರಿಗಳಿಗೆ ಈಗ ಬಂಗಾರದ ಬೆಲೆ ಬಂದಿದ್ರು, ವರ್ಷಕ್ಕೊಮ್ಮೆ ಬರೋ ಹಬ್ಬಕ್ಕೆ ಕುರಿ ಕಡಿದೇ ಇರೋಕ್ಕಾಗಲ್ಲ ಅನ್ನೋ ಗ್ರಾಹಕರು, ಎಷ್ಟೇ ಬೆಲೆ ಇದ್ರೂ ಕುರಿ ಖರೀದಿಸೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 

ಇದನ್ನೂ ಓದಿ- Bakrid 2023: ಇಲ್ಲಿದೆ ನೋಡಿ ʼಬಕ್ರಿದ್‌ʼ ಹಬ್ಬದ ಮಹತ್ವ...!

ಈ ಕುರಿಗಳ ಬೆಲೆ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ... 
ನಾಟಿ ಕುರಿ : ₹18,000 - ₹25,000
ಬನ್ನೂರು ಕುರಿ : 1.20 ಲಕ್ಷ (ಜೋಡಿ)
ಟಗರು : ₹25,000 - ₹35,000
ಮೇಕೆ : ₹20,000 - ₹40,000
ಕುಳ್ಳ್ ಕುರಿ : ₹75,000 (ಜೋಡಿ)

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿನ ಕುರಿ ಸಂತೆಯಲ್ಲಿ ಈ ಬಾರಿ ವೆರೈಟಿ ವೆರೈಟಿ ಕುರಿ ಬಿಕರಿಯಾಗ್ತಿವೆ. ಪ್ರತಿಯೊಬ್ಬ ವ್ಯಾಪಾರಿಯೂ ನೂರಾರು ಕುರಿಗಳನ್ನು ಮಾರಾಟ ಮಾಡಿದ್ದಾರೆ. ಅದ್ರಲ್ಲೂ ಹೈದ್ರಾಬಾದ್ ಬ್ರೀಡ್ , ನಾಟಿ ಬ್ರೀಡ್, ಬನ್ನೂರು ಕುರಿ, ಮೇಕೆಗಳ ಬೆಲೆ 10 ಸಾವಿರದಿಂದ ಲಕ್ಷದವರೆಗೂ ಇದೆ. ಇನ್ನು ಕುರಿಗಳಿಗೆ ಬಾಲಿವುಡ್ ನಟರ ಹೆಸರು ಇಡಲಾಗಿದೆ. ಸಲ್ಮಾನ್ ಖಾನ್, ಶಾರೂಖ್ ಖಾನ್ ಹೀಗೆ ನಾನಾ ರೀತಿ ಹೆಸರು ಇಟ್ಟು ಜನರನ್ನ ಸೆಳೆಯುವ ಪ್ರಯತ್ನ ನಡಿತಿದೆ.

ಇದನ್ನೂ ಓದಿ- ಸ್ಮಶಾನದಲ್ಲಿ ಬಕ್ರೀದ್ ಆಚರಣೆ 

ಸದ್ಯ ಮೈಸೂರು, ರಾಮನಗರ, ಕೋಲಾರ, ಬೀದರ್ , ವಿಜಾಪುರ , ತುಮಕೂರು , ಮದ್ದೂರು, ಚಿತ್ರದುರ್ಗ, ಜಮಖಂಡಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದಲೂ ಕುರಿ ವ್ಯಾಪಾರಿಗಳು ಆಗಮಿಸಿದ್ದಾರೆ. ಆದ್ರೆ ಈ ಬಾರಿ ಕುರಿಗಳಿಗೆ ಬಜಾರ್ ಕಮ್ಮಿಯಾಗಿದ್ದು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕುರಿಗಳ ರೇಟ್ ನಲ್ಲಿ ಬಾರಿ ಇಳಿಕೆ ಇದೆ. ಹೀಗಾಗಿ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡ್ಬೇಕಾಗಿದ್ದ ಕಾಲದಲ್ಲಿ ಕೊಂಚ ಬೇಸರ ಎದ್ದು ಕಾಣುತ್ತಿದೆ.

ಒಟ್ನಲ್ಲಿ ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರಿದ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕುರಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇನ್ನು ಹಬ್ಬಕ್ಕೆ ಕುರಿ ಖರೀದಿಸಲು ಮುಸ್ಲಿಂ ಬಾಂಧವರು ಮುಂದಾಗಿದ್ರೆ , ಒಳ್ಳೆ ಲಾಭ ಸಿಗುವ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು ಎದುರು ನೋಡ್ತಾ ಇದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News