'ಬುಧಾದಿತ್ಯ ಯೋಗ'ದ ಪರಿಣಾಮ- ಈ ಮೂರು ರಾಶಿಯವರಿಗೆ ಸಾಕಷ್ಟು ಸಂಪತ್ತು- ಪ್ರಗತಿ

Budhaditya Yoga Effect: ವರ್ಷದ ಕೊನೆಯ ತಿಂಗಳು ಡಿಸೆಂಬರ್ ಮಾಸದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರನಾದ ಬುಧ ಇಬ್ಬರೂ ಒಟ್ಟಿಗೆ ಸೇರಿ ಬಹಳ ಮಂಗಳಕರ ಯೋಗವಾದ 'ಬುಧಾದಿತ್ಯ ಯೋಗ'ವನ್ನು ರೂಪಿಸಲಿದ್ದಾರೆ. ಬುಧ ಮತ್ತು ಆದಿತ್ಯರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಈ ಶುಭ ಯೋಗವು ಮೂರು ರಾಶಿಯ ಜನರಿಗೆ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

Written by - Yashaswini V | Last Updated : Dec 1, 2022, 10:53 AM IST
  • ಧನು ರಾಶಿಯಲ್ಲಿ ರೂಪುಗೊಳ್ಳಳಿರುವ ಬುಧಾದಿತ್ಯ ರಾಜಯೋಗವು ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ
  • ಆದರೂ, ಮೂರು ರಾಶಿಯ ಜನರಿಗೆ ಸಾಕಷ್ಟು ಸಂಪತ್ತು ಮತ್ತು ಪ್ರಗತಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
'ಬುಧಾದಿತ್ಯ ಯೋಗ'ದ ಪರಿಣಾಮ- ಈ ಮೂರು ರಾಶಿಯವರಿಗೆ ಸಾಕಷ್ಟು ಸಂಪತ್ತು- ಪ್ರಗತಿ  title=
Budhaditya Yoga Effect

Budhaditya Yoga Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಡಿಸೆಂಬರ್ ತಿಂಗಳಿನಲ್ಲಿ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಕೆಲವು ಗ್ರಹಗಳ ರಾಶಿ ಬದಲಾವಣೆಯಿಂದ ರಾಜಯೋಗಗಳು ಕೂಡ ರೂಪುಗೊಳ್ಳಲಿವೆ.  ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಮಂಗಳಕರ ಯೋಗಗಳು ಮತ್ತು ರಾಜಯೋಗಗಳು ದ್ವಾದಶ ರಾಶಿಗಳ ಮೇಲೆ ವಿಶೇಷ ಪರಿಣಾಮಗಳನ್ನು ಬೀರುತ್ತದೆ. ಡಿಸೆಂಬರ್‌ನಲ್ಲಿ, ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರನಾದ ಬುಧ ಇಬ್ಬರೂ ಧನು ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಡಿಸೆಂಬರ್ 3, 2022 ರಂದು, ಬುಧ ರಾಶಿ ಪರಿವರ್ತನೆ ಹೊಂದಿ ಧನು ರಾಶಿಯನ್ನು ಪ್ರವೇಶಿಸಿದರೆ,  ಡಿಸೆಂಬರ್ 16, 2022 ರಂದು, ಸೂರ್ಯ ದೇವ ಧನು ರಾಶಿ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಧನು ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ನಿರ್ಮಾಣವಾಗುತ್ತಿದೆ. ಈ ಯೋಗವು ಮೂರು ರಾಶಿ ಚಕ್ರದವರಿಗೆ ಭರ್ಜರಿ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಧನು ರಾಶಿಯಲ್ಲಿ ಬುಧಾದಿತ್ಯ ರಾಜಯೋಗ- ಮೂರು ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನ:-
ಧನು ರಾಶಿಯಲ್ಲಿ ರೂಪುಗೊಳ್ಳಳಿರುವ ಬುಧಾದಿತ್ಯ ರಾಜಯೋಗವು ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ ಆದರೂ, ಮೂರು ರಾಶಿಯ ಜನರಿಗೆ ಸಾಕಷ್ಟು ಸಂಪತ್ತು ಮತ್ತು ಪ್ರಗತಿಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
ಆ ರಾಶಿಗಳೆಂದರೆ-

ಮೇಷ ರಾಶಿ:
ಧನು ರಾಶಿಯಲ್ಲಿ ಬುಧ ಮತ್ತು ಆದಿತ್ಯರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಶುಭ 'ಬುಧಾದಿತ್ಯ ರಾಜಯೋಗ'ದಿಂದ ಮೇಷ ರಾಶಿಯ ಜನರು ಬಹಳ ಮಂಗಳಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟ ಕೈಹಿಡಿಯಲಿದೆ. ಉದ್ಯೋಗಸ್ಥರು ಉತ್ತುಂಗ ಸ್ಥಾನಕ್ಕೇರುವರು. ವ್ಯಾಪಾರ-ವ್ಯವಹಾರದಲ್ಲೂ ಬಂಪರ್ ಲಾಭವಾಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಇದನ್ನೂ ಓದಿ- Sun Transit 2022 Effect: 18 ದಿನಗಳ ಬಳಿಕ ಅಪಾರ ಸಂಪತ್ತು ಗಳಿಸಲಿದ್ದಾರೆ ಈ ರಾಶಿಯ ಜನ

ಕುಂಭ ರಾಶಿ: 
ಧನು ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ನಿರ್ಮಾಣವಾಗುವುದರಿಂದ ಕುಂಭ ರಾಶಿಯವರಿಗೆ ತುಂಬಾ ಲಾಭದಾಯಕವಾಗಲಿದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಮಯವು ಉತ್ತಮವಾಗಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಹೂಡಿಕೆಯು ಪ್ರಯೋಜನಕಾರಿ ಆಗಿದೆ. ವೃತ್ತಿ ರಂಗದಲ್ಲಿಯೂ ಕೆಲವು ಗುಡ್ ನ್ಯೂಸ್ ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ- Saturn Transit: 2023ರಲ್ಲಿ ಶನಿ ಮಹಾಪುರುಷ ಯೋಗದಿಂದ ಬೆಳಗಲಿದೆ ಈ ರಾಶಿಯವರ ಜೀವನ

ಮೀನ ರಾಶಿ:
ಡಿಸೆಂಬರ್‌ನಲ್ಲಿ ರೂಪುಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಮೀನ ರಾಶಿಯ ಜನರಿಗೆ ಬಂಪರ್ ಕೊಡುಗೆಗಳನ್ನು ನೀಡಲಿದೆ. ವ್ಯಾಪಾರ-ವ್ಯವಹಾರದಲ್ಲಿ ಭಾರೀ ಪ್ರಯೋಜನವಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದ್ದು, ಜವಾಬ್ದಾರಿ ಹುದ್ದೆ ಲಭ್ಯವಾಗಬಹುದು. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಭಾಗ ಬಲಗೊಳ್ಳಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News