fruits with salt: ಈ ಹಣ್ಣುಗಳಿಗೆ ಉಪ್ಪು ಬೆರೆಸಿ ತಿಂದರೆ ಪರೋಕ್ಷವಾಗಿ ವಿಷ ಸೇವಿಸಿದಂತೆ!

fruits with salt: ಇನ್ನು ಪ್ರತಿಯೊಬ್ಬರೂ ಹಣ್ಣುಗಳನ್ನು ತಿನ್ನುವ ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಕೆಲವರು ಬೆಳಿಗ್ಗೆ ಹಣ್ಣುಗಳನ್ನು ತಿಂದರೆ, ಇನ್ನೂ ಕೆಲವರು ಸಂಜೆ ತಿನ್ನಲು ಇಷ್ಟಪಡುತ್ತಾರೆ. ಇನ್ನೂ ಕೆಲ ಜನರು ಹಣ್ಣುಗಳ ಮೇಲೆ ಉಪ್ಪು ಎರಚಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಆದರೆ ಉಪ್ಪು ಬೆರೆಸಿಕೊಂಡು ಹಣ್ಣುಗಳನ್ನು ತಿನ್ನುವುದು ಕಡಿಮೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

Written by - Bhavishya Shetty | Last Updated : Dec 4, 2022, 09:46 AM IST
    • ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಸಮೃದ್ಧತೆಯಿಂದ ಕೂಡಿದೆ
    • ಉಪ್ಪು ಬೆರೆಸಿಕೊಂಡು ಹಣ್ಣುಗಳನ್ನು ತಿನ್ನುವುದು ಕಡಿಮೆ ಪ್ರಯೋಜನಕಾರಿ
    • ಹಣ್ಣುಗಳ ಮೇಲೆ ಉಪ್ಪು ಚಿಮುಕಿಸುವುದು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕಾರಕ
fruits with salt: ಈ ಹಣ್ಣುಗಳಿಗೆ ಉಪ್ಪು ಬೆರೆಸಿ ತಿಂದರೆ ಪರೋಕ್ಷವಾಗಿ ವಿಷ ಸೇವಿಸಿದಂತೆ!  title=
salt to fruits

fruits with salt: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಹಣ್ಣುಗಳನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಿಮ್ಮಿಂದ ದೂರವಾಗುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಸಮೃದ್ಧತೆಯಿಂದ ಕೂಡಿದೆ. ಹೀಗಿರುವಾಗ ಇದನ್ನು ಪ್ರತೀ ದಿನ ಸೇವಿಸಿದರೆ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.

ಇದನ್ನೂ ಓದಿ: Mangal Margi 2023: ವೃಷಭ ರಾಶಿಯೆಡೆಗೆ ಮಂಗಳ ಮಾರ್ಗಿ, ಈ ರಾಶಿಗಳಿಗೆ ಸುಖ-ಸಂಪತ್ತು ಸಿಗಲಿದೆ!

ಇನ್ನು ಪ್ರತಿಯೊಬ್ಬರೂ ಹಣ್ಣುಗಳನ್ನು ತಿನ್ನುವ ತಮ್ಮದೇ ಆದ ವಿಧಾನವನ್ನು ಅನುಸರಿಸುತ್ತಾರೆ. ಕೆಲವರು ಬೆಳಿಗ್ಗೆ ಹಣ್ಣುಗಳನ್ನು ತಿಂದರೆ, ಇನ್ನೂ ಕೆಲವರು ಸಂಜೆ ತಿನ್ನಲು ಇಷ್ಟಪಡುತ್ತಾರೆ. ಇನ್ನೂ ಕೆಲ ಜನರು ಹಣ್ಣುಗಳ ಮೇಲೆ ಉಪ್ಪು ಎರಚಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಆದರೆ ಉಪ್ಪು ಬೆರೆಸಿಕೊಂಡು ಹಣ್ಣುಗಳನ್ನು ತಿನ್ನುವುದು ಕಡಿಮೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಹಣ್ಣುಗಳ ಮೇಲೆ ಉಪ್ಪು ಚಿಮುಕಿಸುವುದು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಹಣ್ಣುಗಳ ಜೊತೆ ಉಪ್ಪು ಬೆರೆಸಿದರೆ ಆಗುವ ಅನಾನುಕೂಲಗಳು:

1. ವರದಿಗಳ ಪ್ರಕಾರ, ಆರೋಗ್ಯವಂತ ವ್ಯಕ್ತಿಯ ದೇಹಕ್ಕೆ ದಿನಕ್ಕೆ 5 ಗ್ರಾಂ ಉಪ್ಪು ಮಾತ್ರ ಬೇಕಾಗುತ್ತದೆ. ದೇಹವು ಆಹಾರದಿಂದ ಅಗತ್ಯವಿರುವಷ್ಟು ಉಪ್ಪನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಉಪ್ಪಿನ ಪ್ರಮಾಣವು ಹೃದಯ ಮತ್ತು ರಕ್ತದೊತ್ತಡಕ್ಕೆ ಒಳ್ಳೆಯದಲ್ಲ.

2. ಹೆಚ್ಚು ಉಪ್ಪು ತಿಂದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ನೀರಿನ ಧಾರಣವು ಪ್ರಾರಂಭವಾಗುತ್ತದೆ. ಇದರಿಂದ ದೇಹವು ಉಬ್ಬಿದಂತೆ ಭಾಸವಾಗುತ್ತದೆ. ಜೊತೆಗೆ ದೇಹಕ್ಕೆ ಪರೋಕ್ಷವಾಗಿ ವಿಷ ಸೇರಿದಂತೆ ಆಗುತ್ತದೆ.

3. ಕತ್ತರಿಸಿದ ಹಣ್ಣುಗಳಿಗೆ ಉಪ್ಪನ್ನು ಹಾಕುವುದರಿಂದ, ದೇಹವು ಉತ್ತಮ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಏಕೆಂದರೆ ಇದರಿಂದ ಹಣ್ಣುಗಳ ಪೋಷಕಾಂಶಗಳು ನೀರಿನ ರೂಪದಲ್ಲಿ ಹೊರಬರುತ್ತವೆ. ಇದರ ನಂತರ, ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವನ್ನು ನೀಡುವುದಿಲ್ಲ. ಈ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರದೊಂದಿಗೆ ದೇಹದ ನೀರು ಹೊರಬರುತ್ತದೆ, ಇದು ದೇಹಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: Astro Tips: ಭಾನುವಾರ ರಾತ್ರಿ ಈ ಒಂದು ಕೆಲಸ ಮಾಡಿದ್ರೆ ಸಾಕು ಜೀವನವಿಡೀ ಹಣದ ಮಳೆಯಾಗಲಿದೆ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News