ಅಡುಗೆ ಮನೆ ಚಾಕುವನ್ನು ಹರಿತಗೊಳಿಸಲು ಇಲ್ಲಿದೆ ಮೂರು ಸುಲಭ ವಿಧಾನ

How To Sharpen Kitchen Knife At:ಕೆಲವು ಸುಲಭ ಮತ್ತು ಸರಳ ವಿಧಾನಗಳ ಮೂಲಕ ಚಾಕುವನ್ನು ಹರಿತಗೊಳಿಸಬಹುದು. ಮಾತ್ರವಲ್ಲ ಅದರ ಮೇಲಿನ ತುಕ್ಕು ಹೋಗಲಾಡಿಸಬಹುದು.

Written by - Ranjitha R K | Last Updated : Aug 25, 2023, 01:08 PM IST
  • ಚಾಕು ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ.
  • ತುಕ್ಕು ಹಿಡಿದ ಚಾಕುವನ್ನು ಹೇಗೆ ತೀಕ್ಷ್ಣಗೊಳಿಸುವುದು
  • ಈ ಮೂರು ವಸ್ತುಗಳನ್ನು ಬಳಸಿದರೆ ಸಾಕು
ಅಡುಗೆ ಮನೆ ಚಾಕುವನ್ನು ಹರಿತಗೊಳಿಸಲು ಇಲ್ಲಿದೆ ಮೂರು ಸುಲಭ ವಿಧಾನ   title=

How To Sharpen Kitchen Knife : ತರಕಾರಿ ಹಣ್ಣುಗಳನ್ನು ಕತ್ತರಿಸುವ ಚಾಕು ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಚಾಕು ಇಲ್ಲದೆ ರುಚಿಕರವಾದ ಆಹಾರ  ತಯಾರಿಸುವುದು ಕೂಡಾ ಅಸಾಧ್ಯ. ಅನೇಕ ಬಾರಿ ನಾವು ಚಾಕುವಿನ ಅಂಚನ್ನು ತೀಕ್ಷ್ಣಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ಬೇರೆ ಯಾವುದೋ ಕಾರಣದಿಂದ ಅದು ತುಕ್ಕು ಹಿಡಿಯುತ್ತದೆ. ಇದರ ಪರಿಣಾಮ ಅಡುಗೆ ಕೆಲಸ ಮಾಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ತುಕ್ಕು ಹಿಡಿದ ಚಾಕುವನ್ನು ಹೇಗೆ ಹರಿತಗೊಳಿಸುವುದು :
ಕೆಲವು  ಮಹಿಳೆಯರು ಅಥವಾ ಪುರುಷರು, ಆಗಾಗ ಅಡುಗೆ ಮನೆಯ ಚಾಕುವನ್ನು ಹರಿತಗೊಳಿಸುತ್ತಾರೆ. ಇನ್ನು ಕೆಲವರು ಈ ಕೆಲಸ ಮಾಡದೇ   ನಿರ್ಲಕ್ಷ್ಯ ತೋರುತ್ತಾರೆ. ಆದರೆ ಕೆಲವು ಸುಲಭ ಮತ್ತು ಸರಳ ವಿಧಾನಗಳ ಮೂಲಕ ಚಾಕುವನ್ನು ಹರಿತಗೊಳಿಸಬಹುದು. ಮಾತ್ರವಲ್ಲ ಅದರ ಮೇಲಿನ ತುಕ್ಕು ಹೋಗಲಾಡಿಸಬಹುದು.

ಇದನ್ನೂ ಓದಿ : ಎರಡು ಬಾರಿ ಈ ಪೌಡರ್ ನ ಫೇಸ್ ಪ್ಯಾಕ್ ಬಳಸಿದರೆ ಸಾಕು ಮಿರ ಮಿರ ಮಿಂಚುವುದು ತ್ವಚೆ

ಸೆರಾಮಿಕ್   ಕಪ್  :
ತಲೆ ಕೆಳಗೆ ಮಾಡಿದರೆ ಅದರ ಕೆಳಗಿನ ಭಾಗ ಸ್ವಲ್ಪ ಒರಟಾಗಿರುತ್ತದೆ. ಈ ಒರಟು ಮೇಲ್ಮೈಯಲ್ಲಿ ಚಾಕುವನ್ನು ಉಜ್ಜುವ ಮೂಲಕ ಚಾಕು ಅಂಚನ್ನು ಹರಿತಗೊಳಿಸಬಹುದು. 

ಕಬ್ಬಿಣದ ರಾಡ್ : 
ನಮ್ಮೆಲ್ಲರ ಮನೆಯಲ್ಲಿ ಕಬ್ಬಿಣದ ರಾಡ್ ಇದ್ದೇ ಇರುತ್ತದೆ.  ಮೊದಲನೆಯದಾಗಿ, ಕಬ್ಬಿಣದ ರಾಡ್ ಅನ್ನು ಬಿಸಿಲಿನಲ್ಲಿ ಇರಿಸಿ. ಇದರ ನಂತರ ಚಾಕುವನ್ನು ಉಜ್ಜುವ ಮೂಲಕ ಹರಿತಗೊಳಿಸಬಹುದು. ಕಬ್ಬಿಣದ ರಾಡ್ ಅನ್ನು ಬಳಸುವ ಮೂಲಕ ಚಾಕುವನ್ನು ಸರಿಯಾಗಿ ಹರಿತಗೊಳಿಸಬಹುದು.  

ಇದನ್ನೂ ಓದಿ : ರಂಗೋಲಿಯಲ್ಲಿ ಅರಳಿದ ಚಂದ್ರಯಾನ-3: ಯಶಸ್ವಿಗೆ ಹಾರೈಕೆ

ಸ್ಯಾಂಡ್ ಪೇಪರ್ : 
ಚಾಕುವಿನ ಅಂಚನ್ನು ಹರಿತಗೊಳಿಸಲು ಸ್ಯಾಂಡ್ ಪೇಪರ್ ಅನ್ನು  ಬಳಸಬಹುದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಸ್ಯಾಂಡ್ ಪೇಪರ್ ಅನ್ನು ಒರಟಾದ ಮೇಲ್ಮೈಯಲ್ಲಿ ಉಜ್ಜುವುದರಿಂದ ಚಾಕುವಿನ ಅಂಚನ್ನು ಹರಿತಗೊಳಿಸಬಹುದು. ಅಲ್ಲದೆ ಹಿಡಿದಿರುವ ತುಕ್ಕನ್ನು ಸಹ ಹೋಗಲಾಡಿಸಬಹುದು. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News