ಕೊಲೆಸ್ಟ್ರಾಲ್ ನಿಯಂತ್ರಿಸಲು ಸರಳ ಸಲಹೆಗಳು: ಬದಲಾದ ಜೀವನ ಶೈಲಿಯಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಸ್ಯೆಗಳಲ್ಲಿ ಕೊಲೆಸ್ಟ್ರಾಲ್ ಸಹ ಒಂದು. ಪುರುಷರು ಮತ್ತು ಮಹಿಳೆಯರಲ್ಲಿ ಒಂದು ವಯೋಮಿತಿಯ ಬಳಿಕ ಈ ಸಮಸ್ಯೆ ಅಧಿಕವಾಗಿ ಕಂಡು ಬರುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ ಹೃದಯಾಘಾತ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಅತ್ಯಗತ್ಯ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕಾಗಿ ಯೋಗ ವ್ಯಾಯಾಮ ಮಾತ್ರವಲ್ಲ, ನಿತ್ಯ ನಿಮ್ಮ ಆಹಾರದಲ್ಲಿ ಕೆಲವು ಪಾನೀಯಗಳನ್ನು ಸೇರಿಸುವುದರಿಂದಲೂ ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಅವುಗಳ ಬಗ್ಗೆ ತಿಳಿಯೋಣ...
ಹಾಗಲಕಾಯಿ ಜ್ಯೂಸ್:
ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಹಾಗಲಕಾಯಿ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ನಿಮಗೆ ತಿಳಿದಿರಬಹುದು. ಆದರೆ, ಕೊಲೆಸ್ಟ್ರಾಲ್ ನಿಯಂತ್ರನದಲ್ಲಿಯೂ ಇದು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹಾಗಲಕಾಯಿಯಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಇ ಅಧಿಕವಾಗಿದೆ. ಹಾಗಾಗಿ ನಿತ್ಯ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.
ಇದನ್ನೂ ಓದಿ- ಪೈಲ್ಸ್ ಸಮಸ್ಯೆಯನ್ನು ಮೂಲದಿಂದ ನಿವಾರಿಸಲು ಮನೆಮದ್ದು
ಸೋರೆಕಾಯಿ ಜ್ಯೂಸ್:
ಸೋರೆಕಾಯಿಯು ಸುಮಾರು 98% ನೀರನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸೋರೆಕಾಯಿ ತುಂಬಾ ಸಹಾಯಕವಾಗಿದೆ. ಸೋರೆಕಾಯಿ ರಸವನ್ನು ಕುಡಿಯುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರವಾಗಿ ಕಡಿಮೆ ಮಾಡಬಹುದು.
ಬೀಟ್ರೂಟ್ ಜ್ಯೂಸ್:
ಜನರು ಸಲಾಡ್ ರೂಪದಲ್ಲಿ ತಿನ್ನಲು ಇಷ್ಟಪಡುವ ಬೀಟ್ರೂಟ್ ಹೊಳೆಯುವ ಚರ್ಮವನ್ನು ಪಡೆಯಲು ಸಹಾಯಕವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ರಂಜಕ, ವಿಟಮಿನ್ ಬಿ ಇತ್ಯಾದಿ ಅಂಶಗಳು ಕಂಡು ಬರುತ್ತವೆ. ನಿತ್ಯ ನಿಮ್ಮ ಡಯಟ್ನಲ್ಲಿ ಬೀಟ್ರೂಟ್ ಜ್ಯೂಸ್ ಸೇವಿಸುವುದರಿಂದ ಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಈ ರಸವನ್ನು ಸೇವಿಸುವುದರಿಂದ ಪಾರ್ಶ್ವವಾಯು ಅಪಾಯ ಕೂಡ ಕಡಿಮೆ ಆಗುತ್ತದೆ.
ಇದನ್ನೂ ಓದಿ- ನಿಮಗೂ ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವ ಅಭ್ಯಾಸವಿದೆಯೇ? ಇದನ್ನು ತಪ್ಪದೇ ಓದಿ
ಅಲೋವೆರಾ ಜ್ಯೂಸ್ :
ಆಲೋವೆರಾವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ರುಚಿಯಲ್ಲಿ ಕಹಿ ಆದರೂ ಇದು ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಲೋವೆರಾ ಜ್ಯೂಸ್ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮಾತ್ರವಲ್ಲ, ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.