ಈ ಮೂವರೊಂದಿಗೆ ಜಗಳವಾಡಿದರೆ ಜೀವನ ಪೂರ್ತಿ ಪಶ್ಚಾತಾಪ ಪಡಬೇಕಾಗುತ್ತದೆ

ಆಚಾರ್ಯ ಚಾಣಕ್ಯ ನೀತಿಗಳು ಎಲ್ಲಾ ಕಾಲದಲ್ಲಿಯೂ ಉಪಯುಕ್ತವಾಗಿವೆ.  ಈ ನೀತಿಯನ್ನು ಅನುಸರಿಸಿದರೆ ಜೀವನದಲ್ಲಿ ತೊಂದರೆಗಳು ಎದುರಾದಾಗದಂತೆ ನೋಡಿಕೊಳ್ಳಬಹುದು. 

Written by - Ranjitha R K | Last Updated : Apr 4, 2022, 12:21 PM IST
  • ಈ 4 ಜನರೊಂದಿಗೆ ಎಂದಿಗೂ ವಿವಾದ ಮಾಡಬೇಡಿ
  • ಜೀವನದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ
  • ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ
ಈ ಮೂವರೊಂದಿಗೆ ಜಗಳವಾಡಿದರೆ ಜೀವನ ಪೂರ್ತಿ ಪಶ್ಚಾತಾಪ ಪಡಬೇಕಾಗುತ್ತದೆ  title=
Chanakya niti (file photo)

ಬೆಂಗಳೂರು : ಆಚಾರ್ಯ ಚಾಣಕ್ಯರ ನೀತಿಗಳು ಜೀವನದ ಪ್ರತಿಯೊಂದು ವಿಷಯದಲ್ಲೂ ಉಪಯುಕ್ತವಾಗಿವೆ. ಈ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಪಡೆಯಲು, ಶ್ರೀಮಂತರಾಗಲು, ತೊಂದರೆಗಳಿಂದ ಹೊರಬರಲು ಅಥವಾ ತೊಂದರೆಗಳಿಂದ ಪಾರಾಗಲು ಸಹಾಯವಾಗುತ್ತವೆ (Chanakya Niti For Success).  ಆಚಾರ್ಯ ಚಾಣಕ್ಯ ನೀತಿಗಳು ಎಲ್ಲಾ ಕಾಲದಲ್ಲಿಯೂ ಉಪಯುಕ್ತವಾಗಿವೆ.  ಈ ನೀತಿಯನ್ನು ಅನುಸರಿಸಿದರೆ ಜೀವನದಲ್ಲಿ ತೊಂದರೆಗಳು ಎದುರಾದಾಗದಂತೆ ನೋಡಿಕೊಳ್ಳಬಹುದು. ಕೆಲವು ಜನರೊಂದಿಗೆ ಯಾವತ್ತೂ ವಿವಾದ ಮಾಡಿಕೊಳ್ಳ ಬಾರದು ಎಂದು ಚಾಣಾಕ್ಯ ನೀತಿಯಲ್ಲಿ ಹೇಳಲಾಗಿದೆ.

ಈ ಜನರೊಂದಿಗೆ ವಿವಾದ ಮಾಡಿಕೊಳ್ಳಬೇಡಿ : 
ಈ ಜನರೊಂದಿಗೆ ನೀವು ಜಗಳವಾಡಿದರೆ, ಜೀವನದಲ್ಲಿ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತಾರೆ (Chanakya Niti). 

ಇದನ್ನೂ ಓದಿ : ಈ ರಾಶಿಯವರ ಮೇಲೆ ಈ ದಿನದಿಂದ ಶನಿಯ ವಕ್ರ ದೃಷ್ಟಿ ಇರುವುದೇ ಇಲ್ಲ.!

ಮೂರ್ಖ ವ್ಯಕ್ತಿ : ಆಚಾರ್ಯ ಚಾಣಕ್ಯ ಅವರು ಮೂರ್ಖ ವ್ಯಕ್ತಿಯೊಂದಿಗೆ ಎಂದಿಗೂ ವಾದ ಮಾಡಬಾರದು ಎಂದು ಹೇಳುತ್ತಾರೆ (Chanakya niti for success). ಮೂರ್ಖ ವ್ಯಕ್ತಿಯೊಂದಿಗೆ ವಾದ ಮಾಡುವುದು ಎಂದರೆ, ನಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡಂತೆ ಎನ್ನುತ್ತದೆ ಚಾಣಾಕ್ಯ ನೀತಿ.   ಅಲ್ಲದೆ, ನಮ್ಮ ಪ್ರತಿಯೊಂದು ಮಾತಿಗೂ ಅವರು ತಪ್ಪು ಅರ್ಥ ಕಲ್ಪಿಸಿಕೊಂಡು ನಮ್ಮ ಇಮೇಜ್ ಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಾರೆ  ಎಂದು ಹೇಳಲಾಗಿದೆ. 

ಸ್ನೇಹಿತ  :  ಒಳ್ಳೆಯ ಮತ್ತು ನಿಜವಾದ ಸ್ನೇಹಿತ ಪ್ರತಿ ಸಂತೋಷ ಮತ್ತು ದುಃಖದ ಒಡನಾಡಿ. ಸ್ನೇಹಿತರೊಂದಿಗೆ ಜಗಳವಾಡಿದರೆ, ಜೀವನದಲ್ಲಿ ಪ್ರೀತಿಯ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ಕಳೆದುಕೊಳ್ಳುತ್ತೀರಿ. ಇದಲ್ಲದೆ, ಸ್ನೇಹಿತನ ಮನಸ್ಸು ಬದಲಾದರೆ, ನಿಮ್ಮ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುವ ಮೂಲಕ ನಿಮಗೆ ದೊಡ್ಡ ಹಾನಿ ಮಾಡಬಹುದು (Chanakya niti for life). 
 
ಇದನ್ನೂ ಓದಿ: Weekly Horoscope: ಮುಂದಿನ 7 ದಿನ ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ, ನಿಮ್ಮ ರಾಶಿ ಯಾವುದು?

ಸಂಬಂಧಿಕರು  :  ನಿಮ್ಮ ಪೋಷಕರು, ಒಡಹುಟ್ಟಿದವರು, ಹೆಂಡತಿ ಅಥವಾ ಮಕ್ಕಳೊಂದಿಗೆ ಎಂದಿಗೂ ವಿವಾದ ಮಾಡಬೇಡಿ. ಇವರಲ್ಲಿ ಮಾಡಿಕೊಳ್ಳುವ ವಾದ ಮಿತಿ ಮೀರಿ ಸಂಬಂಧ ಮುರಿಯುವ ಮಟ್ಟ ತಲುಪಿದರೆ ತೊಂದರೆಯಾಗುತ್ತದೆ (Chanakya niti for Success) . ಅಂತಹ ತಪ್ಪು ಜೀವಮಾನದ ದುಃಖವನ್ನು ನೀಡುತ್ತದೆ.  

ಗುರು :  ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ. ಅವರು ಸಂತೋಷ ಮತ್ತು ಯಶಸ್ವಿ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತಾರೆ. ಸವಾಲುಗಳನ್ನು ಹೇಗೆ ಎದುರಿಸಬೇಕೆಂದು ವಿವರಿಸುತ್ತಾರೆ. ಆದುದರಿಂದ ಗುರುವಿನೊಂದಿಗೆ ಯಾವತ್ತೂ ವಿವಾದ ಮಾಡಕೊಳ್ಳಬೇಡಿ. ಇಲ್ಲದಿದ್ದರೆ ಗುರುವಿನ ಕೃಪೆಯಿಂದ ವಂಚಿತರಾಗಬೇಕಾಗುತ್ತದೆ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News