ದೀಪಾವಳಿ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳ ಖರೀದಿ ಬೇಡ.! ಕೈ ಹಿಡಿಯುವುದು ದುರಾದೃಷ್ಟ

ಈ ಬಾರಿ  ಅಕ್ಟೋಬರ್ 23 ರಂದು ಧನ್ತೇರಸ್‌ ಹಬ್ಬ ಬರುತ್ತದೆ. ಈ ದಿನ ಜನ ಖರೀದಿಯಲ್ಲಿ ತೊಡಗುತ್ತಾರೆ. ಈ  ದಿನದಂದು ಶಾಪಿಂಗ್ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. 

Written by - Ranjitha R K | Last Updated : Oct 6, 2022, 04:05 PM IST
  • ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ತೇರಸ್ ಹಬ್ಬ ಆಚರಣೆ
  • ಈ ದಿನ ಶಾಪಿಂಗ್ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ
  • ಈ ದಿನ ಅಶುಭ ವಸ್ತುಗಳನ್ನು ಖರೀದಿಸಬಾರದು
ದೀಪಾವಳಿ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳ ಖರೀದಿ ಬೇಡ.!  ಕೈ ಹಿಡಿಯುವುದು ದುರಾದೃಷ್ಟ  title=
Dhanteras 2022

ಬೆಂಗಳೂರು : ಐದು ದಿನಗಳ ದೀಪಗಳ ಹಬ್ಬವಾದ ದೀಪಾವಳಿಯು ಧನ್ತೇರಸ್‌ನೊಂದಿಗೆ ಪ್ರಾರಂಭವಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ  ಅಕ್ಟೋಬರ್ 23 ರಂದು ಧನ್ತೇರಸ್‌ ಹಬ್ಬ ಬರುತ್ತದೆ. ಈ ದಿನ ಜನ ಖರೀದಿಯಲ್ಲಿ ತೊಡಗುತ್ತಾರೆ. ಈ  ದಿನದಂದು ಶಾಪಿಂಗ್ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ, ಈದಿನ ಏನು ಖರೀದಿಸುತ್ತೇವೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಈ ದಿನ ಅಶುಭ ವಸ್ತುಗಳನ್ನು ಖರೀದಿಸಿದರೆ, ಅದೃಷ್ಟ ಕೂಡಾ  ದುರದೃಷ್ಟವಾಗಿ ಬದಲಾಗುತ್ತದೆ. 

ಪಿಂಗಾಣಿ ಪಾತ್ರೆಗಳು : 
ಮನೆಯಲ್ಲಿ ಅಲಂಕಾರ ಮತ್ತು ಬಳಕೆಗಾಗಿ ಜನರು ಧನ್ತೇರಸ್ ದಿನದಂದು ಪಿಂಗಾಣಿ ಪಾತ್ರೆಗಳು ಅಥವಾ ವಸ್ತುಗಳನ್ನು ಖರೀದಿಸುತ್ತಾರೆ. ಪಿಂಗಾಣಿಯಿಂದ ಮಾಡಿದ ವಸ್ತುಗಳು ನೋಡುವುದಕ್ಕೆ ಸುಂದರವಾಗಿ ಕಾಣಿಸುತ್ತದೆ. ಆದರೆ ಧಂತೇರಸ್ ದಿನದಂದು ಅದನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ : October 16 ರಂದು ಈ ತಿಂಗಳ ಮೊದಲ ರಾಶಿ ಪರಿವರ್ತನೆ, ಈ ರಾಶಿಗಳ ಭಾಗ್ಯದಲ್ಲಿ ಬಂಬಾಟ್ ಬದಲಾವಣೆ

ಉಕ್ಕಿನ ಪಾತ್ರೆಗಳು :
ಧನ್ತೇರಸ್ ದಿನದಂದು ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ. ಈ ದಿನ ಹಿತ್ತಾಳೆ, ತಾಮ್ರ ಮುಂತಾದ ಶುದ್ಧ ಲೋಹಗಳ ಪಾತ್ರೆಗಳನ್ನು ಖರೀದಿಸಬೇಕು. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಅದೇ ಸಮಯದಲ್ಲಿ, ಸ್ಟೀಲ್ ಪಾತ್ರೆಗಳನ್ನು ಈ ದಿನ ಖರೀದಿಸಬಾರದು. ಇದು ರಾಹುವಿನ ಅಂಶಗಳಾಗಿದ್ದು ಮನೆಯಲ್ಲಿ ದುರಾದೃಷ್ಟವನ್ನು ತರುತ್ತದೆ. 

ಅಲ್ಯೂಮಿನಿಯಂ ಪಾತ್ರೆ :
ಅಲ್ಯೂಮಿನಿಯಂ ಮೇಲೂ ರಾಹುವಿನ ಪ್ರಭಾವವಿದೆ. ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದು ಅಥವಾ ತಿನ್ನುವುದು ಒಳ್ಳೆಯದಲ್ಲ. ಧನ್ತೇರಸ್ ದಿನದಂದು ಅಲ್ಯೂಮಿನಿಯಂ ಪಾತ್ರೆಗಳನ್ನು ತಪ್ಪಿಯೂ ಖರೀದಿಸಬಾರದು.  ಇದರಿಂದ ಲಕ್ಷ್ಮೀ ಕೂಡಾ ಮುನಿಸಿಕೊಳ್ಳುತ್ತಾಳೆ.

ಕಪ್ಪು ವಸ್ತುಗಳು : 
ಹಿಂದೂ ಧರ್ಮದ ಪ್ರಕಾರ, ಯಾವುದೇ ಶುಭ ಕಾರ್ಯದಲ್ಲಿ ಕಪ್ಪು ಬಣ್ಣದ ವಸ್ತುಗಳನ್ನು ಬಳಸುವುದು ಮಂಗಳಕರವಲ್ಲ. ಕಪ್ಪು ಬಣ್ಣದ ಮೇಲೆ ಶನಿಯ ಪ್ರಭಾವವಿರುತ್ತದೆ. ಧನ್ತೇರಸ್ ದಿನದಂದು ಶಾಪಿಂಗ್ ಮಾಡಲು ಹೋದರೆ,  ಕಪ್ಪು ಬಣ್ಣದ ವಸ್ತುಗಳನ್ನು ಖರೀದಿಸಬೇಡಿ. 

ಇದನ್ನೂ ಓದಿ : ಮುಂದಿನ ತಿಂಗಳು ಈ ರಾಶಿಯವರಿಗೆ ಬಂಪರ್ ಲಾಭ.! ಅದೃಷ್ಟ ನೀಡಲಿದ್ದಾರೆ ಮಂಗಳ ಮತ್ತು ಬುಧ

ಗಾಜು ಮತ್ತು ಪ್ಲಾಸ್ಟಿಕ್ ವಸ್ತುಗಳು :
ಧಂತೇರಸ್ ದಿನದಂದು ಗಾಜು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಬಾರದು. ಗಾಜಿನ ವಸ್ತು ಖರೀದಿಸಿದರೆ, ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದಿಲ್ಲ. ಹಣ ಉಳಿಯುವುದಿಲ್ಲ. ಏಕೆಂದರೆ ಗಾಜಿನ ಮೇಲೆ ಕೂಡಾ ರಾಹುವಿನ ಪ್ರಭಾವವಿರುತ್ತದೆ. ಹಾಗಾಗಿ ದೀಪಾವಳಿ ಖರೀದಿ ಮಾಡುವಾಗ  ಗಾಜಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಖರೀದಿಸುವುದನ್ನು ತಪ್ಪಿಸಿ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News