Alcohol Facts: ಮದ್ಯ ಸೇವಿಸಿದ ಬಳಿಕ ವ್ಯಕ್ತಿ ನಶೆಯಲ್ಲಿ ಇಂಗ್ಲೀಷ್ ಮಾತನಾಡೋದು ಯಾಕೆ ಗೊತ್ತಾ?

Alcohol Facts: ಕೆಲವೊಮ್ಮೆ ಕುಡುಕರ ಇಂಗ್ಲೀಷನ್ನು ಕೇಳಿ ನಗು ತಡೆಯಲಾರದು. ವಾಸ್ತವವಾಗಿ, ನಶೆಯ ಸ್ಥಿತಿಯಲ್ಲಿ, ವ್ಯಕ್ತಿಯೊಳಗಿನ ಭಾಷೆಯ ಬಗ್ಗೆ ಹೆದರಿಕೆಯು ಬಹಳಷ್ಟು ಕಡಿಮೆಯಾಗುತ್ತದೆ. ಇದರೊಂದಿಗೆ, ಅವರು 'ಜನರು ಏನು ಯೋಚಿಸುತ್ತಾರೆ' ಎಂಬ ಆಲೋಚನೆ ಸಹ ಮಾಡುವುದಿಲ್ಲ. ಯಾವುದೇ ಕುಡುಕ ವ್ಯಕ್ತಿಯು ಸುಲಭವಾಗಿ ವಿವಿಧ ಭಾಷೆಗಳನ್ನು ಮಾತನಾಡಲು ಪ್ರಾರಂಭಿಸುತ್ತಾನೆ ಎಂಬುದಕ್ಕೆ ಇದೇ ಕಾರಣ. ಈ ವಿಷಯವು ವಿವಿಧ ಅಧ್ಯಯನಗಳಲ್ಲಿ ಮುಂಚೂಣಿಗೆ ಬಂದಿದೆ.

Written by - Bhavishya Shetty | Last Updated : Jan 26, 2023, 12:52 AM IST
    • ಮದ್ಯ ಸೇವಿಸಿದ ನಂತರ ಅಮಲಿನಲ್ಲಿ ನಾಟಕಗಳನ್ನು ಮಾಡುವವರನ್ನು ನೀವು ನೋಡಿರಬೇಕು.
    • ಕೆಲವರು ನಶೆಯಲ್ಲಿ ಹೆಚ್ಚು ಭಾವುಕರಾಗುತ್ತಾರೆ, ಕೆಲವರು ತಮ್ಮ ಹೃದಯದ ಎಲ್ಲಾ ರಹಸ್ಯಗಳನ್ನು ಹೊರ ಹಾಕುತ್ತಾರೆ
    • ಕುಡುಕರು ಸತ್ಯವನ್ನು ಮಾತ್ರವಲ್ಲದೆ ಇಂಗ್ಲಿಷ್ ಕೂಡ ಮಾತನಾಡಲು ಪ್ರಾರಂಭಿಸುತ್ತಾರೆ
Alcohol Facts: ಮದ್ಯ ಸೇವಿಸಿದ ಬಳಿಕ ವ್ಯಕ್ತಿ ನಶೆಯಲ್ಲಿ ಇಂಗ್ಲೀಷ್ ಮಾತನಾಡೋದು ಯಾಕೆ ಗೊತ್ತಾ?  title=
Alcohol consumption

Alcohol Facts: ಮದ್ಯ ಸೇವಿಸಿದ ನಂತರ ಅಮಲಿನಲ್ಲಿ ವಿವಿಧ ರೀತಿಯ ನಾಟಕಗಳನ್ನು ಮಾಡುವವರನ್ನು ನೀವು ನೋಡಿರಬೇಕು. ಕೆಲವರು ನಶೆಯಲ್ಲಿ ಹೆಚ್ಚು ಭಾವುಕರಾಗುತ್ತಾರೆ, ಕೆಲವರು ತಮ್ಮ ಹೃದಯದ ಎಲ್ಲಾ ರಹಸ್ಯಗಳನ್ನು ಹೊರ ಹಾಕುತ್ತಾರೆ. ಕುಡುಕರು ಯಾವಾಗಲೂ ಸತ್ಯವನ್ನೇ ಮಾತನಾಡುತ್ತಾರೆ ಎಂದು ಸಹ ಹೇಳಲಾಗುತ್ತದೆ. ಆದರೆ ಕುಡುಕರು ಸತ್ಯವನ್ನು ಮಾತ್ರವಲ್ಲದೆ ಇಂಗ್ಲಿಷ್ ಕೂಡ ಮಾತನಾಡಲು ಪ್ರಾರಂಭಿಸುತ್ತಾರೆ ಎಂಬುದನ್ನು ನೀವು ಗಮನಿಸಿದ್ದೀರಾ?

ಇದನ್ನೂ ಓದಿ: Health Tips: ಈ 5 ತರಕಾರಿಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತವೆ

ಕೆಲವೊಮ್ಮೆ ಕುಡುಕರ ಇಂಗ್ಲೀಷನ್ನು ಕೇಳಿ ನಗು ತಡೆಯಲಾರದು. ವಾಸ್ತವವಾಗಿ, ನಶೆಯ ಸ್ಥಿತಿಯಲ್ಲಿ, ವ್ಯಕ್ತಿಯೊಳಗಿನ ಭಾಷೆಯ ಬಗ್ಗೆ ಹೆದರಿಕೆಯು ಬಹಳಷ್ಟು ಕಡಿಮೆಯಾಗುತ್ತದೆ. ಇದರೊಂದಿಗೆ, ಅವರು 'ಜನರು ಏನು ಯೋಚಿಸುತ್ತಾರೆ' ಎಂಬ ಆಲೋಚನೆ ಸಹ ಮಾಡುವುದಿಲ್ಲ. ಯಾವುದೇ ಕುಡುಕ ವ್ಯಕ್ತಿಯು ಸುಲಭವಾಗಿ ವಿವಿಧ ಭಾಷೆಗಳನ್ನು ಮಾತನಾಡಲು ಪ್ರಾರಂಭಿಸುತ್ತಾನೆ ಎಂಬುದಕ್ಕೆ ಇದೇ ಕಾರಣ. ಈ ವಿಷಯವು ವಿವಿಧ ಅಧ್ಯಯನಗಳಲ್ಲಿ ಮುಂಚೂಣಿಗೆ ಬಂದಿದೆ.

ಸಂಶೋಧನೆಯಲ್ಲಿ ಅಚ್ಚರಿಯ ಫಲಿತಾಂಶ:

ಎರಡನೇ ಭಾಷೆ ಮತ್ತು ಮದ್ಯದ ಸಂಪರ್ಕದ ಬಗ್ಗೆ ಲಿವರ್‌ಪೂಲ್ ವಿಶ್ವವಿದ್ಯಾಲಯ ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ಸಂಶೋಧನೆ ನಡೆಸಲಾಯಿತು. ಇದರಲ್ಲಿ ಇದು ನಿಜವೆಂದು ಸಾಬೀತಾಗಿದೆ. ಈ ಸಂಶೋಧನೆಯಲ್ಲಿ ಎರಡು ಭಾಷೆಗಳ ಜ್ಞಾನ ಹೊಂದಿರುವ 50 ಜನರನ್ನು ಸೇರಿಸಲಾಯಿತು. ಈ ಎಲ್ಲಾ ಜನರಿಗೆ ಕುಡಿಯಲು ಮದ್ಯವನ್ನು ನೀಡಲಾಯಿತು, ನಂತರ ಮದ್ಯಪಾನ ಮಾಡಿದ ವ್ಯಕ್ತಿ ಉತ್ತಮ ರೀತಿಯಲ್ಲಿ ಇಂಗ್ಲಿಂಷ್ ಭಾಷೆಯನ್ನು ಮಾತನಾಡುತ್ತಾನೆ. ಆದರೆ ಅವನು ಮದ್ಯದ ಮೊದಲು ಆ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಕಾಡುವ ಹಿಮ್ಮಡಿ ನೋವಿಗೆ ಸರಳ ಮನೆಮದ್ದು

ಈ ಸಂಶೋಧನೆಯ ನಂತರ, ಸ್ವಲ್ಪ ಆಲ್ಕೋಹಾಲ್ ನಿಮ್ಮ ಉಚ್ಚಾರಣೆಯನ್ನು ಸುಧಾರಿಸುತ್ತದೆ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ. ಇದರೊಂದಿಗೆ ನಿಮ್ಮೊಳಗಿನ ಆತಂಕವೂ ಕಡಿಮೆಯಾಗುತ್ತದೆ. ಹೆಚ್ಚು ಮದ್ಯ ಸೇವಿಸುವ ವ್ಯಕ್ತಿ ಏನನ್ನೂ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಆದರೆ, ಇದನ್ನೂ ಅಂತಿಮ ಫಲಿತಾಂಶ ಎಂದು ಪರಿಗಣಿಸಲಾಗಿಲ್ಲ. ವಿಜ್ಞಾನಿಗಳ ಪ್ರಕಾರ, ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆಯ ನಂತರವೇ ಅಂತಿಮ ಫಲಿತಾಂಶವನ್ನು ನೀಡಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News