ನಾಳೆ ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಂಗಾರಕ ಯೋಗ, ಜೀವನದ ಮೇಲೆ ಬೀರಲಿದೆ ಭಾರೀ ಪ್ರಭಾವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹ ರಾಹು ಅಥವಾ ಕೇತುವಿನ ಜೊತೆಯಲ್ಲಿದ್ದಾಗ ಅಂಗಾರಕ ಯೋಗ ಉಂಟಾಗುತ್ತದೆ. ಈ ಯೋಗವನ್ನು ಅತ್ಯಂತ ಅಪಾಯಕಾರಿ ಯೋಗ ಎಂದು ಪರಿಗಣಿಸಲಾಗಿದೆ. 

Written by - Zee Kannada News Desk | Last Updated : Feb 25, 2022, 12:37 PM IST
  • ರಾಹುವನ್ನು ಪಾಪ ಗ್ರಹವೆಂದು ಪರಿಗಣಿಸಲಾಗಿದೆ
  • ಅಂಗಾರಕ ಯೋಗವು ಮಂಗಳ ಮತ್ತು ಪಾಪ ಗ್ರಹಗಳ ಸಂಯೋಜನೆಯಿಂದ ರೂಪುಗೊಳ್ಳುತ್ತದೆ
  • ಅಂಗಾರಕ ಯೋಗದ ಪ್ರಭಾವದಿಂದ ಮಾತು ಮಾತಿಗೂ ಕೋಪ ಬರುತ್ತದೆ
ನಾಳೆ ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಂಗಾರಕ ಯೋಗ, ಜೀವನದ ಮೇಲೆ ಬೀರಲಿದೆ ಭಾರೀ ಪ್ರಭಾವ   title=
ಅಂಗಾರಕ ಯೋಗದ ಪ್ರಭಾವದಿಂದ ಮಾತು ಮಾತಿಗೂ ಕೋಪ ಬರುತ್ತದೆ (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನ ರಾಶಿ (Mars transit)ಬದಲಾಗಲಿದೆ. ಫೆಬ್ರವರಿ 26ರ ಶನಿವಾರದಂದು ಮಂಗಳ ತನ್ನ ರಾಶಿ ಬದಲಾಯಿಸಲಿದ್ದಾನೆ. ಈ ದಿನ ಮಂಗಳ ಗ್ರಹವು ಮಧ್ಯಾಹ್ನ 2:46 ಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಗ್ರಹವು ಶುಭ ಗ್ರಹಗಳೊಂದಿಗೆ ಸಂಯೋಗಗೊಂಡಾಗ, ಶುಭ ಮತ್ತು ಲಾಭದಾಯಕ ಯೋಗವು ರೂಪುಗೊಳ್ಳುತ್ತದೆ. ಮತ್ತೊಂದೆಡೆ, ಮಂಗಳವು ಅಶುಭ ಅಥವಾ ಪಾಪ ಗ್ರಹದ ಜೊತೆಯಲ್ಲಿದ್ದಾಗ, ಅಪಾಯಕಾರಿ ಯೋಗವು ರೂಪುಗೊಳ್ಳುತ್ತದೆ. ಅದೇ ರೀತಿ ಫೆಬ್ರವರಿ 26 ರಂದು ಅಪಾಯಕಾರಿ ಯೋಗವು ರೂಪುಗೊಳ್ಳುತ್ತಿದೆ (Angaraka Dosha). 

ಈ ರಾಶಿಚಕ್ರದಲ್ಲಿ ಅಂಗಾರಕ ಯೋಗವು ರೂಪುಗೊಳ್ಳುತ್ತದೆ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಮಂಗಳ ಗ್ರಹ ರಾಹು ಅಥವಾ ಕೇತುವಿನ ಜೊತೆಯಲ್ಲಿದ್ದಾಗ ಅಂಗಾರಕ ಯೋಗ ಉಂಟಾಗುತ್ತದೆ (Angaraka Dosha). ಈ ಯೋಗವನ್ನು ಅತ್ಯಂತ ಅಪಾಯಕಾರಿ ಯೋಗ ಎಂದು ಪರಿಗಣಿಸಲಾಗಿದೆ. ರಾಹು ಪ್ರಸ್ತುತ ವೃಷಭ ರಾಶಿಯಲ್ಲಿ ಸಾಗುತ್ತಿದ್ದು, ಕೇತು ವೃಶ್ಚಿಕ ರಾಶಿಯಲ್ಲಿದೆ. ಇದರೊಂದಿಗೆ ರಾಹುವಿನ (Rahu)ದೃಷ್ಟಿಯೂ ಮಕರ ರಾಶಿಯ ಮೇಲಿದ್ದು, ಮಂಗಳ ಗ್ರಹವು ಈ ರಾಶಿಯನ್ನು ಪ್ರವೇಶಿಸಲಿದೆ. 

ಇದನ್ನೂ ಓದಿ : Milk Remedies : ಹಾಲನ್ನು ಹೀಗೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಲಕ್ಷ್ಮಿದೇವಿ!

ಅಂಗಾರಕ ಯೋಗದ ಪರಿಣಾಮ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಗಾರಕ ಯೋಗದಿಂದಾಗಿ ವ್ಯಕ್ತಿಯ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ (Effects of angaraka dosha). ಸಣ್ಣ ಸಣ್ಣ ವಿಚಾರಗಳಿಗೂ ಕೋಪ ಬರುತ್ತದೆ. ಮಾತು ಮಾತಿಗೂ ರೇಗುವುದಕ್ಕೆ ಆರಂಭಿಸುತ್ತಾರೆ. ಇದಲ್ಲದೆ, ಕೆಲವೊಮ್ಮೆ ಹಿಂಸಾಚಾರಕ್ಕೂ ಇಳಿದು ಬಿಡುತ್ತಾರೆ. ವಾಸ್ತವವಾಗಿ ಮಂಗಳವನ್ನು ಕ್ರೂರ ಗ್ರಹದ ವರ್ಗದಲ್ಲಿ ಇರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅದು ರಾಹುವಿನ ಸಂಯೋಗವನ್ನು ಹೊಂದಿರುವಾಗ, ಒಬ್ಬ ವ್ಯಕ್ತಿಯು ಕೋಪದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ. ಅಂಗಾರಕ ಯೋಗದ ಸಮಯದಲ್ಲಿ, ಅಗ್ನಿ ಮತ್ತು ವಾಹನ ಬಳಕೆಯಲ್ಲಿ ಅತ್ಯಂತ ಜಾಗ್ರತೆ ವಹಿಸಬೇಕು. ಅಲ್ಲದೆ, ವಾದಗಳಿಂದ ದೂರವಿರಬೇಕು. 

ಇದನ್ನೂ ಓದಿ : ಜೀವನದ ಸುಖ ಸಂತೋಷವನ್ನೇ ಕಸಿದುಕೊಳ್ಳುವ ಜಾತಕದ ಈ ದೋಷಕ್ಕೆ ಪರಿಹಾರ ಇಲ್ಲಿದೆ

ಅಂಗಾರಕ ಯೋಗವನ್ನು ತಪ್ಪಿಸಲು ಪರಿಹಾರಗಳು :
1. ಮಾತನ್ನು ನಿಯಂತ್ರಿಸಬೇಕು. 
2. ಅಂಗಾರಕ ಯೋಗದ ಸಮಯದಲ್ಲಿ ಕೆಟ್ಟ ಸಹವಾಸದಿಂದ ದೂರವಿರಬೇಕು. 
3. ಭಗವಾನ್ ಶಿವ (Lord Shiva)ಮತ್ತು ಭಜರಂಗಬಲಿ ಪೂಜೆ ಮಾಡಬೇಕು. ಹಾಗೆಯೇ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. 
4. ನಕಾರಾತ್ಮಕ ಆಲೋಚನೆ ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು. 
5. ಕುಟುಂಬ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. 
6. ಯಾವುದೇ ರೀತಿಯ ಅಮಲು ಪದಾರ್ಥಗಳ ಸೇವನೆಯಿಂದ ದೂರವಿರಬೇಕು.   
7. ಅಂಗಾರಕ ಯೋಗದ ಸಮಯದಲ್ಲಿ, 'ಓಂ ಅಂಗಾರಕಾಯ ನಮಃ' ಎಂಬ ಈ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News