Daily Horoscope: ದಿನಭವಿಷ್ಯ 15-08-2021 Today astrology

ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಂದಿನ  ದಿನ ಆರಂಭಿಸಿ. ನಿಮ್ಮ ನಿಮ್ಮ ರಾಶಿಗನುಗುಣವಾಗಿ ನಿಮ್ಮ ಇಂದಿನ ದಿನ ಭವಿಷ್ಯ ಹೀಗೆ .

Written by - Zee Kannada News Desk | Last Updated : Aug 15, 2021, 08:56 AM IST
  • ಮೇಷ ರಾಶಿಯವರಿಗೆ ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗಬಹುದು
  • ಮಿಥುನ ರಾಶಿಯವರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡರೆ ಒಳ್ಳೆಯದು
  • ಮಕರ ರಾಶಿಯವರಿಗೆ ನಂಬಿಕೆಯೇ ಮುಳುವಾಗಬಹುದು
Daily Horoscope: ದಿನಭವಿಷ್ಯ 15-08-2021 Today astrology title=
daily horoscope 15 -08-2021 (file photo)

ಹೊಸದಿಲ್ಲಿ: ಕುಂಭ, ವೃಶ್ಚಿಕ ಮತ್ತು ವೃಷಭ ರಾಶಿಯವರಿಗೆ ವ್ಯವಹಾರದ ದೃಷ್ಟಿಯಿಂದ ಭಾನುವಾರ ಲಾಭದಾಯಕವಾಗಲಿದೆ. ತುಲಾ ಮತ್ತು ಧನು ರಾಶಿಯ ಜನರು ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. 

ಮೇಷರಾಶಿ: ಭಾನುವಾರದಂದು ವ್ಯಾಪಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆದಾಗ್ಯೂ, ಆದಾಯದಲ್ಲಿ ಹೆಚ್ಚಳ ಸಾಧ್ಯ. ವೈವಾಹಿಕ ಜೀವನವು ಆಹ್ಲಾದಕರ ಮತ್ತು ಅನುಕೂಲಕರವಾಗಿರುತ್ತದೆ.  ಮಕ್ಕಳು ಅಥವಾ ಪ್ರೇಮ ಸಂಬಂಧಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿದೆ. 

ವೃಷಭ: ನಿಮ್ಮ ಗೆಳೆಯರ ಗುಂಪಿನಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಪರವಾಗಿ, ವಿಷಯಗಳು ಸುಗಮವಾಗಿರುತ್ತವೆ ಮತ್ತು ಉತ್ತಮ ಪ್ರಗತಿ ಸಿಗಲಿದೆ. ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. 

ಮಿಥುನ: ಭಾನುವಾರ, ನೀವು ಅಪೂರ್ಣ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅನಗತ್ಯ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸುವುದು ಅಗತ್ಯವಾಗಿರುತ್ತದೆ. ಮಾತಿನ ಮೇಲೆ ನಿಯಂತ್ರಣವಿರಲಿ.  ಆದಾಯವು ಸ್ಥಿರವಾಗಿರುತ್ತದೆ. ಆದರೆ ವೆಚ್ಚಗಳು ನಿರೀಕ್ಷೆಗಿಂತ ಹೆಚ್ಚಿರಬಹುದು. ಈ ವೆಚ್ಚಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿರುತ್ತದೆ.

ಇದನ್ನೂ ಓದಿ :  Saturday Tips: ಶನಿವಾರದಂದು ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗುತ್ತೆ

ಕರ್ಕ ರಾಶಿ: ನಿಮ್ಮನ್ನು ಸಾಬೀತುಪಡಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಹಿರಿಯರನ್ನು ಮೆಚ್ಚಿಸಲು ಸ್ವಲ್ಪ ಕಷ್ಟವಾಗಬಹುದು. ಕಠಿಣ ಪರಿಶ್ರಮ ಮತ್ತು ವಿನಮ್ರ ಸ್ವಭಾವ ಈ ಅವಧಿಯಲ್ಲಿ ಯಶಸ್ಸಿನ ಮೆಟ್ಟಿಲಾಗಿರಲಿ.  

ಸಿಂಹ: ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಪ್ರಭಾವಶಾಲಿ ಸ್ಥಾನದತ್ತ ಸಾಗುತ್ತೀರಿ. ನಿಮ್ಮ ಕೆಲವು ಆಸೆಗಳು ಈಡೇರುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ನಿಮ್ಮ ಸಂಬಂಧಗಳು ಹೆಚ್ಚು ಸೌಹಾರ್ದಯುತವಾಗಿರುತ್ತವೆ.

ಕನ್ಯಾ: ನೀವು ಭಾವನಾತ್ಮಕವಾಗಿ ಏಕಾಂಗಿತನವನ್ನು ಅನುಭವಿಸಬಹುದು. ನೀವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೀರಿ. ಆದಾಗ್ಯೂ, ವೆಚ್ಚಗಳ ಒತ್ತಡವು ಅಧಿಕವಾಗಿರುತ್ತದೆ.

ಇದನ್ನೂ ಓದಿ :  ಈ ರಾಶಿಯವರಿಗೆ ಕಂಕಣ ಭಾಗ್ಯ ಬೇಗ ಕೂಡಿ ಬರುತ್ತದೆ..! ನಿಮ್ಮ ರಾಶಿ ಯಾವುದು ನೋಡಿ ..

ತುಲಾ: ನಿಮಗೆ ಹೊಸ ಅವಕಾಶಗಳು ಸಿಗುತ್ತವೆ ಮತ್ತು ಲಾಭ ಗಳಿಸಲು ಅವುಗಳನ್ನು ಬಳಸಿಕೊಳ್ಳುತ್ತೀರಿ. ಹೀಗಾಗಿ ಆರ್ಥಿಕ ಏಳಿಗೆ ಖಚಿತವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಗೊಂದಲಗಳು, ಕುಟುಂಬದ ಸದಸ್ಯರ ಆರೋಗ್ಯ ಹದಗೆಡುವುದು ಮತ್ತು ಆಸ್ತಿ ವಿಷಯಗಳಲ್ಲಿ ವಿವಾದಗಳು ನಿಮ್ಮನ್ನು ನಿರಂತರ ಒತ್ತಡದಲ್ಲಿರಿಸುತ್ತದೆ.

ವೃಶ್ಚಿಕ: ವೃತ್ತಿಪರ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ  ಪ್ರಯೋಜನವಾಗಬಹುದು. ಉದ್ಯಮಿಗಳು ಪಾಲುದಾರಿಕೆ ಅಥವಾ ಸಂಘದ ಮೂಲಕ ಉತ್ತಮ ಲಾಭ ಪಡೆಯಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಧನು : ಪರೀಕ್ಷೆ ಅಥವಾ ಸ್ಪರ್ಧೆಯ ಮೂಲಕ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದವರು ಯಶಸ್ವಿಯಾಗುತ್ತಾರೆ. ವ್ಯಾಪಾರಿಗಳು ದೀರ್ಘಕಾಲದ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.  ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆದರೆ, ಖರ್ಚುಗಳನ್ನು ಸಹ ನೀವು ನಿಯಂತ್ರಿಸಬೇಕು.

ಇದನ್ನೂ ಓದಿ :  ತಾಮ್ರದ ಉಂಗುರ ಹಾಕುವುದರಿಂದ ನಿವಾರಣೆಯಾಗಲಿದೆ ಈ ದೋಷಗಳು

ಮಕರ: ಪ್ರೇಮ ವ್ಯವಹಾರಗಳಿಗೆ ಈ ಸಮಯ ಸೂಕ್ತವಲ್ಲ. ಭಾವನಾತ್ಮಕವಾಗಿ ಯಾರನ್ನು ನಂಬಬೇಡಿ. ನಿಮ್ಮನಂಬಿಕೆಯೇ ನಿಮಗೆ ಮುಳುವಾಗಬಹುದು. ತಾಳ್ಮೆ ಮತ್ತು ಸಂಯಮದಿಂದ ನಿಮ್ಮ ಕೆಲಸದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಿ.

ಕುಂಭ: ನೀವು ವೃತ್ತಿಪರವಾಗಿ ಪ್ರಗತಿ ಸಾಧಿಸುವಿರಿ. ನಿಮ್ಮ ಕೆಲಸಕ್ಕಾಗಿ ಕೆಲಸದ ಸ್ಥಳದಲ್ಲಿ ನೀವು ಪ್ರಶಂಸೆಗೆ ಗುರಿಯಾಗಬಹುದು. ನಿಮ್ಮಲ್ಲಿ ಕೆಲವರು ಹೊಸ ಸಂಘ ಅಥವಾ ಪಾಲುದಾರಿಕೆಯನ್ನು ಪ್ರವೇಶಿಸಬಹುದು. ನಿಮ್ಮ ವಿರೋಧಿಗಳು ನಿಮಗೆ ಯಾವುದೇ ಹಾನಿ ಮಾಡಲು ಸಾಧ್ಯವಾಗುವುದಿಲ್ಲ.

ಮೀನ ರಾಶಿ: ಇದು ಮಿಶ್ರ ಫಲಿತಾಂಶಗಳನ್ನು ಹೊಂದಿರುವ ದಿನ. ಆದರೆ, ವಿಶಾಲ ಪ್ರಮಾಣದಲ್ಲಿ ವಿಷಯಗಳು ನಿಮ್ಮ ಪರವಾಗಿರುತ್ತವೆ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಮತ್ತು ತೊಂದರೆಗಳು ಉಂಟಾಗುತ್ತವೆ. ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನೀವು ಹೊಸ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಬಯಸಿದ ಫಲಿತಾಂಶಗಳಿಗಾಗಿ ಶ್ರಮಿಸಬೇಕು.

ಇದನ್ನೂ ಓದಿ :  ಸೂರ್ಯನ ರಾಶಿ ಪರಿವರ್ತನೆಯಿಂದ ಪ್ರಕಾಶಿಸಲಿದೆ ಈ ರಾಶಿಯವರ ಭಾಗ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News