Curd Face mask: ಮೊಸರು ಹಚ್ಚಿದರೆ ಪಡೆಯಬಹುದು ಹೊಳೆಯುವ ತ್ವಚೆ, ಇಮ್ಮಡಿಯಾಗುತ್ತದೆ ಮುಖದ ಸೌಂದರ್ಯ

ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ, ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಬಳಸಿ. ಈ ಫೇಸ್ ಪ್ಯಾಕ್ ತ್ವಚೆಯನ್ನು ತಂಪಾಗಿರಿಸುತ್ತವೆ.

Written by - Ranjitha R K | Last Updated : Oct 5, 2021, 08:20 PM IST
  • ಮೊಸರು ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
  • ಮೊಸರಿನ ಬಳಕೆಯಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ
  • ತ್ವಚೆ ಹೊಳೆಯುಂತೆ ಮಾಡುತ್ತದೆ
Curd Face mask: ಮೊಸರು ಹಚ್ಚಿದರೆ ಪಡೆಯಬಹುದು ಹೊಳೆಯುವ ತ್ವಚೆ, ಇಮ್ಮಡಿಯಾಗುತ್ತದೆ ಮುಖದ ಸೌಂದರ್ಯ   title=
ಮೊಸರು ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. (file photo)

ನವದೆಹಲಿ : Curd Face mask: ಮೊಸರು ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು (benefits of curd) ನೀಡುತ್ತದೆ. ಮೊಸರಿನ ಬಳಕೆಯಿಂದ, ಮುಖದ ಸುಕ್ಕುಗಳು, ಲೈನ್ಸ್ , ಟ್ಯಾನಿಂಗ್ ಸಮಸ್ಯೆಗಳು, ಮೊಡವೆ ಕಲೆಗಳು ಇತ್ಯಾದಿಗಳನ್ನು ಹೋಗಲಾಡಿಸಬಹುದು. ಮೊಸರಿನಲ್ಲಿರುವ ಸತು, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಗಳು ಚರ್ಮವನ್ನು ಆರೋಗ್ಯವಾಗಿಡುತ್ತವೆ.

ಚರ್ಮಕ್ಕೆ ಸಂಬಂಧಿಸಿದ (Skin care) ಯಾವುದೇ ಸಮಸ್ಯೆಯಿದ್ದರೂ, ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಬಳಸಿ. ಈ ಫೇಸ್ ಪ್ಯಾಕ್ ತ್ವಚೆಯನ್ನು ತಂಪಾಗಿರಿಸುತ್ತವೆ.

1. ಮೊಸರು ಮತ್ತು ರೋಸ್ ವಾಟರ್ :
-ಮೊಸರಿನಲ್ಲಿ (Curd) ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ತ್ವಚೆಗೆ ಹಚ್ಚಿ. 
-ಅದರ ನಂತರ 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ (warm water) ತೊಳೆಯಿರಿ. 
-ನಿರಂತರವಾಗಿ ಹೀಗೆ ಮಾಡುತ್ತಾ ಬಂದರೆ ತ್ವಚೆಗೆ ಹೊಳಪೂ ನೀಡುತ್ತದೆ. 
-ನಂತರ ನಿಮ್ಮ ಚರ್ಮವನ್ನು ಮೃದುವಾದ ಟವೆಲ್ ನಿಂದ ಒಣಗಿಸಿ.
ಅದರ ನಂತರ ಉತ್ತಮ ಮಾಯಿಶ್ಚರೈಸರ್ ಹಚ್ಚಿ.

ಇದನ್ನೂ ಓದಿ : Papaya Leaf: ಈ ಎಲೆಯ ರಸ ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತೆ

2. ಮೊಸರು ಮತ್ತು ಆಲಿವ್ ಎಣ್ಣೆ :
-ಮೂರು ಚಮಚ ಮೊಸರು ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು (olive oil) ಬೆರೆಸಿ ಪೇಸ್ಟ್ ತಯಾರಿಸಿ.
-ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ.
-15-20 ನಿಮಿಷಗಳ ನಂತರ ಮುಖಾನ್ನು ತೊಳೆಯಿರಿ.
-ಹೀಗೆ ಮಾಡುವುದರಿಂದ ತ್ವಚೆ ವಯಸ್ಸಾದಂತೆ ಕಾಣಿಸುವುದಿಲ್ಲ.  

3. ಮೊಸರು ಮತ್ತು ಕಡಲೆ ಹಿಟ್ಟು : 
-ಒಂದು ಟೀಚಮಚ ಕಡಲೆಹಿಟ್ಟು  ಅರ್ಧ ಚಮಚ ನಿಂಬೆ ರಸ (lemon juice) ಮತ್ತು 2 ಚಮಚ ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ. 
-ಇದನ್ನು ಮುಖಕ್ಕೆ ಹಚ್ಚಿದ ನಂತರ, ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ. 
-ಇದು ಚರ್ಮದ ಮೇಲೆ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Benefits of Cabbage: ನಿಮ್ಮ ಡಯಟ್ನಲ್ಲಿ ಈ ಆಹಾರವನ್ನು ಸೇರಿಸಿ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ

4. ಮೊಟ್ಟೆ ಮತ್ತು ಕಡಲೆ ಹಿಟ್ಟು : 
-ಮೊದಲು 1 ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ.
-ಈಗ 1 ಟೀಸ್ಪೂನ್ ಕಡಲೆ ಹಿಟ್ಟು, ಸಣ್ಣ ಬಾಳೆಹಣ್ಣು (banana) ಮತ್ತು 2 ಚಮಚ ಮೊಸರು ಸೇರಿಸಿ.
-ಈ ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
-ಮೊಸರಿನಿಂದ ಮಾಡಿದ ಈ ಫೇಸ್ ಪ್ಯಾಕ್ (face pack) ಅನ್ನು ಪ್ರತಿದಿನ ಹಚ್ಚುವುದರಿಂದ ಮುಖಡ ಸೌಂದರ್ಯ ಹೆಚ್ಚುತ್ತದೆ. 
-ಅಲ್ಲದೆ ಚರ್ಮ ಸಂಬಂಧಿ ಸಮಸ್ಯೆಗಲು ಕೂಡಾ ದೂರವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News