ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನಕ್ಕೆ ದಿನಗಣನೆ!

215th Flower Show in Lalbagh: ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲಪುಷ್ಪ ದಿನ ನಿಗದಿಯಾಗಿದ್ದು ಜನವರಿ 18ರಿಂದ ಜನವರಿ 28ರವರೆಗೆ ಒಟ್ಟು 11ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. 

Written by - Yashaswini V | Last Updated : Jan 16, 2024, 05:10 PM IST
  • ಪ್ರತಿ ವರ್ಷ ಸಸ್ಯ ಕಾಶಿ ಲಾಲ್‌ಬಾಗ್‌ನಲ್ಲಿ ಹೂವಿನ ಲೋಕ ಮೇಳೈಸುತ್ತದೆ.
  • ಕಳೆದ ಬಾರಿಯೂ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಜನ ಮನ್ನಣೆಯನ್ನು ಪಡೆದುಕೊಂಡಿತ್ತು.
  • ಪ್ರತಿ ವರುಷದಂತೆ ಈ ವರುಷವು ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲ ಪುಷ್ಪ ಪ್ರದರ್ಶನವನ್ನ ಆಯೋಜನೆ ಮಾಡಲಾಗಿದೆ.
ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನಕ್ಕೆ ದಿನಗಣನೆ! title=

215th Flower Show in Lalbagh: ಸಿಲಿಕಾನ್ ಸಿಟಿಯ ಪ್ರೇಮಿಗಳ ನೆಚ್ಚಿನ ತಾಣ ಹಾಗೂ ವಾಯುವಿಹಾರಿಗಳ ಸ್ವರ್ಗ ಎಂದು ಕರೆಸಿಕೊಳ್ಳುವ ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ರಾಜಧಾನಿ ಜನರಿಗೆ 215ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಹಾಗಾದರೆ ಈ ಬಾರಿಯ ಪ್ಲವರ್ ಶೋ ಯಾವ ಕಾನ್ಸೆಪ್ಟ್‌ನಲ್ಲಿ ನಡೆಯುತ್ತಿದೆ. ಈ  ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯೋಣ... 

ಪ್ರತಿ ವರ್ಷ ಸಸ್ಯ ಕಾಶಿ ಲಾಲ್‌ಬಾಗ್‌ನಲ್ಲಿ ಹೂವಿನ ಲೋಕ ಮೇಳೈಸುತ್ತದೆ. ಕಳೆದ ಬಾರಿಯೂ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಜನ ಮನ್ನಣೆಯನ್ನು ಪಡೆದುಕೊಂಡಿತ್ತು. ಪ್ರತಿ ವರುಷದಂತೆ ಈ ವರುಷವು ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲ ಪುಷ್ಪ ಪ್ರದರ್ಶನವನ್ನ ಆಯೋಜನೆ ಮಾಡಲಾಗಿದ್ದು, ಇಂದು ಈ‌ ಕುರಿತು ಸುದ್ದಿಗೋಷ್ಟಿಯನ್ನ ಏರ್ಪಡಿಸಲಾಗಿತ್ತು.  ಈ ಸುದ್ದಿಗೋಷ್ಟಿಯಲ್ಲಿ ಲಾಲ್‌ಬಾಗ್‌ ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್, ಜಂಟಿ‌ನಿರ್ದೇಶಕರಾದ ಜಗದೀಶ್, ಸರ್ಕಾರದ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ- Roses: ನಿಮ್ಮ ಉದ್ಯಾನಕ್ಕಾಗಿ ವಿಧದ ಗುಲಾಬಿಗಳು!

ಇನ್ನೂ... ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲಪುಷ್ಪ ದಿನ ನಿಗದಿಯಾಗಿದ್ದು ಜನವರಿ 18ರಿಂದ ಜನವರಿ 28ರವರೆಗೆ ಒಟ್ಟು 11ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಪ್ಲವರ್ ಶೋನಲ್ಲಿ ವಚನಕಾರ ಬಸವಣ್ಣ ಹಾಗೂ ವಚನ ಸಾಹಿತ್ಯ ಲೋಕವನ್ನ ಹೂಗಳಲ್ಲಿ ಅನಾವರಣಗೊಳಿಸಲು ತೀರ್ಮಾನಿಸಲಾಗಿದ್ದು, ಅನುಭವ ಮಂಟಪದ ನಿರ್ಮಾಣವಾಗುತ್ತಿರುವ ಪರಿಯಂತೂ ನಿಜಕ್ಕೂ ಮೂಕ ವಿಸ್ಮಯಗೊಳಿಸುವಂತಿದೆ. ಇನ್ನೂ... ವಿಶೇಷವಾಗಿ ಚೆನೈ, ಕೊಲ್ಕತ್ತಾ, ಪುಣೆ ಸೇರಿದಂತೆ ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳಿಂದ ಹೂಗಳ ಗಿಡಗಳನ್ನು ತರಿಸಿಕೊಳ್ಳಲಾಗಿದ್ದು, ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಬೆಳೆದ ವಿವಿಧ ಹೂಗಳನ್ನು ಬಳಸಿ ಸುಮಾರು 2.85 ಕೋಟಿ ವೆಚ್ಚದಲ್ಲಿ ಈ ಬಾರಿಯ ಪ್ಲವರ್ ಶೋ ನಡೆಸಲು ತೀರ್ಮಾನಿಸಲಾಗಿದೆ. 

ಇದನ್ನೂ ಓದಿ- ನವಿಲು ನರ್ತಿಸಿದ ಸ್ಥಳದ ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದ್ರೆ, ಅದೃಷ್ಟವೇ ಬದಲಾಗುತ್ತದೆ..!

ಈ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವವರಿಗೆ ಸಾಮಾನ್ಯ ದಿನಗಳಲ್ಲಿ 80ರೂ. ಟಿಕೆಟ್ ದರ ನಿಗಡಿಗೊಳಿಸಲಾಗಿದೆ ಹಾಗೂ ರಜೆ ದಿನಗಳಲ್ಲಿ 100 ರೂ. ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಬಂದರೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ಫಲಪುಷ್ಪ ಪ್ರದರ್ಶನದ ತಯಾರಿ ಅದ್ದೂರಿಯಾಗಿ ಸಾಗಿ ಬರುತ್ತಿದ್ದು  ಹೂವಿನ ಸೌಂದರ್ಯವನ್ನು ನೋಡಿ ಕಣ್ಣು ತುಂಬಿಕೊಳ್ಳಲು ಜನರು ಕಾತುರರಾಗಿ ಕಾಯುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News