Chandra Grahan 2021: ಈ ದಿನ ಸಂಭವಿಸಲಿದೆ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ?

Chandra Grahan 2021: ಮೇ ತಿಂಗಳಿನಲ್ಲಿ ಈ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ (Lunar Eclipse 2021) ಸಂಭವಿಸಲಿದ್ದು, ಭಾರತದ ಭೂಭಾಗಗಳಿಂದ ಇದು ಗೋಚರಿಸುತ್ತಿಲ್ಲ. ಇದು ವೃಶ್ಚಿಕ ರಾಶಿ ಜಾತಕ ಹೊಂದಿದವರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಹಾಗಾದರೆ ಬನ್ನಿ ಈ ಚಂದ್ರಗ್ರಹಣದ ದಿನಾಂಕ, ಸಮಯ ಹಾಗೂ ಪ್ರಭಾವದ ಕುರಿತು ತಿಳಿದುಕೊಳ್ಳೋಣ.  

Written by - Nitin Tabib | Last Updated : Apr 29, 2021, 05:49 PM IST
  • ಮೇ ತಿಂಗಳಿನಲ್ಲಿ ವರ್ಷದ ಮೊದಲ ಚಂದ್ರಗ್ರಹಣ
  • ಯಾವ ರಾಶಿಯಲ್ಲಿ ಈ ಗ್ರಹಣ ಸಂಭವಿಸಲಿದೆ.
  • ಯಾವ ರಾಶಿಯ ಜನರ ಮೇಲೆ ಇದು ಹೆಚ್ಚು ಪ್ರಭಾವ ಬೀರಲಿದೆ.
Chandra Grahan 2021: ಈ ದಿನ ಸಂಭವಿಸಲಿದೆ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ? title=
Lunar Eclipse 2021 (File Photo)

Chandra Grahan 2021: 2021 ರ ಮೊದಲ ಚಂದ್ರ ಗ್ರಹಣ ಮೇ 26 ರಂದು ಸಂಭವಿಸಲಿದೆ. ಈ ದಿನವು ವೈಶಾಖ್ ತಿಂಗಳ ಹುಣ್ಣಿಮೆಯ ದಿನಾಂಕವೂ ಆಗಿದೆ. ಭಾರತದ ಸಮಯದ ಪ್ರಕಾರ, ಈ ಚಂದ್ರ ಗ್ರಹಣವು ಹಗಲಿನಲ್ಲಿ ನಡೆಯಲಿದೆ. ಆದ್ದರಿಂದ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಚಂದ್ರ ಗ್ರಹಣವು ಖಗೋಳ ಘಟನೆಯಾಗಿದೆ. ವಿಜ್ಞಾನದ ಪ್ರಕಾರ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರಲಿದ್ದು, ಈ ಮೂರೂ ಗ್ರಹಗಳು ಸರಳ ರೇಷೆಯಲ್ಲಿರುತ್ತವೆ. ಇದರಿಂದ ಖಗೋಳದಲಿ ಸೃಷ್ಟಿಯಾಗುವ ಈ ಸ್ಥಿತಿಯನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.

ಹಿಂದೂ ಪಂಚಾಗ ಮತ್ತು ಜ್ಯೋತಿಷ್ಯ (Astrology) ಲೆಕ್ಕಾಚಾರಗಳ ಪ್ರಕಾರ, ಈ ಚಂದ್ರಗ್ರಹಣವು 20 ಮೇ 2021 ರಂದು ದಿನದ ಅವಧಿಯಲ್ಲಿ ಸಂಭವಿಸಲಿದೆ. ಈ ದಿನ ವೈಶಾಕ್ ತಿಂಗಳ ಶುಕ್ಲ ಪಕ್ಷದ ಹುಣ್ಣಿಮೆಯೂ ಕೂಡ ಇರಲಿದೆ. ಇದಲ್ಲದೆ, ಭಗವಾನ್ ಗೌತಮ ಬುದ್ಧ ಕೂಡ ಈ ದಿನಾಂಕದಂದು ಜನಿಸಿದ್ದಾನೆ ಮತ್ತು ಈ ದಿನಾಂಕದಂದು ಅವನು ಬೋಧಿಸತ್ವನನ್ನು ಪಡೆದಿದ್ದಾನೆ. ಇದಲ್ಲದೆ ಇದೆ ದಿನದಂದು ಬುದ್ಧನಿಗೆ  ಮಹಾಪರಿನಿರ್ವಾಣ ಕೂಡ ಪ್ರಾಪ್ತಿಯಾಗಿತ್ತು. ಹೀಗಾಗಿ ಈ ಬಾರಿಯ ಈ ಚಂದ್ರಗ್ರಹಣ ತುಂಬಾ ವಿಶೇಷವಾಗಿದೆ.

ಇದನ್ನೂ ಓದಿ- Char Dham Yatra: ಕರೋನಾ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರದ ಮಹತ್ವದ ನಿರ್ಧಾರ

ಚಂದ್ರ ಗ್ರಹಣ 2021 ರ ದಿನಾಂಕ ಹಾಗೂ ಶುಭ ಸಮಯ
2021 ರ ಮೊದಲ ಚಂದ್ರಗ್ರಹಣವು ಮೇ 26 ರಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.17 ಕ್ಕೆ ನಡೆಯಲಿದೆ. ಮತ್ತು ಈ ಗ್ರಹಣವು ಸಂಜೆ 7 ರಿಂದ 19 ನಿಮಿಷಗಳವರೆಗೆ  ಇರಲಿದೆ. ಜ್ಯೋತಿಶಾಚಾರ್ಯರ ಪ್ರಕಾರ, ಈ ಚಂದ್ರ ಗ್ರಹಣವು ಖಂಡಗ್ರಾಸ ಚಂದ್ರ ಗ್ರಹಣವಾಗಿದೆ. ಜ್ಯೋತಿಷ್ಯ ನಿಯಮಗಳ ಪ್ರಕಾರ, ಭಾರತದಲ್ಲಿ ಈ ಗ್ರಹಣ (Moon Eclipse) ಗೋಚರಿಸದೆ ಇರುವ ಕಾರಣ ಹಾಗೂ ಖಂಡಗ್ರಾಸ ಚಂದ್ರಗ್ರಹಣ ಇರುವ ಕಾರಣ ಈ ಗ್ರಹಣಕ್ಕೆ ಸೂತಕ  (Sutak Kal)ಕಾಲ ಇರುವುದಿಲ್ಲ. ಸೂತಕ ಕಾಲದ ಸ್ಥಿತಿ ಪೂರ್ಣ ಚಂದ್ರ ಗ್ರಹಣದ ಸಮಯದಲ್ಲಿ ರೂಪುಗೊಳ್ಳುತ್ತದೆ. ಗ್ರಹಣ ಪ್ರಾರಂಭಕ್ಕೂ 9 ಗಂಟೆಗಳ ಮುನ್ನ ಸೂತಕ ಕಾಲ ಪ್ರಾರಂಭವಾಗುತ್ತದೆ.

ಇದನ್ನೂ ಓದಿ- Thursday Remedies: ನೀವು ಗುರುವಾರ ಉಪವಾಸ ಮಾಡುತ್ತಿದ್ದರೆ ಈ ನಿಯಮಗಳನ್ನು ಅನುಸರಿಸಿ

ವೃಶ್ಚಿಕ ರಾಶಿಯ ಜಾತಕದವರ ಮೇಲೆ ಹೆಚ್ಚು ಪ್ರಭಾವ (Chandra Grahan Effect)
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷದ ಮೊದಲ ಚಂದ್ರಗ್ರಹಣ ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಕಾರಣದಿಂದ ಈ ಗ್ರಹಣದ ಅಧಿಕ ಪ್ರಭಾವ ವೃಶ್ಚಿಕ ರಾಶಿಯವರ ಮೇಲಾಗುತ್ತಿದೆ. ಹೀಗಾಗಿ ಈ ಗ್ರಹಣದ ಅವಧಿಯಲ್ಲಿ ವೃಶ್ಚಿಕ ರಾಶಿಯ ಜನರು ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ- ಸಮಸ್ಯೆಗಳು ಬೆನ್ನುಬಿಡುತ್ತಿಲ್ಲವೇ? ಹಾಗಿದ್ದರೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News