Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ

Chanakya Niti in Kannada: ಚಾಣಕ್ಯ ನೀತಿಯಲ್ಲಿ ಎಲ್ಲಾ ವಯಸ್ಸಿನ ಜನರ ಜವಾಬ್ದಾರಿಗಳನ್ನು ಮತ್ತು ಯಶಸ್ವಿಯಾಗುವ ಮಾರ್ಗಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಪ್ರೌಢಾವಸ್ಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ, ಇದರಿಂದ ವ್ಯಕ್ತಿಯು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಳ್ಳಬಹುದು.  

Written by - Nitin Tabib | Last Updated : Apr 30, 2022, 01:29 PM IST
  • ಯೌವ್ವನಾವಸ್ಥೆ ಜೀವನದ ಪ್ರಮುಖ ಹಂತಗಳಲ್ಲಿ ಒಂದು
  • ಈ ಹಂತದಲ್ಲಿ ಯುವಕರು ಮೂರು ಪ್ರಮುಖ ಸಂಗತಿಗಳಿಂದ ದೂರ ಉಳಿಯಬೇಕು
  • ಈ ಕುರಿತು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದೇನು? ತಿಳಿಯೋಣ ಬನ್ನಿ
Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ title=
Chanakya Niti For Happy Life

Chanakya Niti for Youth: ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಯುವಕರಿಗಾಗಿಯೇ ಕೆಲ ಮಹತ್ವದ ಸಂಗತಿಗಳ ಕುರಿತು ಚರ್ಚಿಸಿದ್ದಾರೆ. ಇವುಗಳಲ್ಲಿ ಯುವಕರಿಗೆ ಕೆಲ ಸಂಗತಿಗಳಿಂದ ದೂರ ಉಳಿಯಲು ಅವರು ಸಲಹೆಯ ಜೊತೆಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿರುವ ಈ ಸಂಗತಿಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವರು ತಮ್ಮ ನಿರ್ಧಿಷ್ಟ ಗುರಿಗಳನ್ನು ಬೇಗ ತಲುಪಬಹುದು, ಅಷ್ಟೇ ಅಲ್ಲ ಅವರು ಜೀವನದ ಪ್ರತಿಯೊಂದು ಹಂತಗಳಲ್ಲಿ ಯಶಸ್ವಿಯಾಗಲಿದ್ದಾರೆ.

ಈ 3 ಸಂಗತಿಗಳಿಂದ ಅಂತರ ಕಾಯ್ದುಕೊಳ್ಳಿ
ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಯೌವನಾವಸ್ಥೆ ಯಾವುದೇ ಓರ್ವ ವ್ಯಕ್ತಿಯ ಜೀವನದ ಪ್ರಮುಖ ಹಂತವಾಗಿದೆ. ಈ ಅವಧಿಯಲ್ಲಿ ಯುವಕರು ತಮ್ಮ ಪ್ರತಿಭೆಯನ್ನು ಅರ್ಥಮಾಡಿಕೊಂಡರೆ ಮತ್ತು ತಮ್ಮ ಎಲ್ಲಾ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ವಿನಿಯೋಗಿಸಿದರೆ, ಅವರು ತಮ್ಮ ಭವಿಷ್ಯದಲ್ಲಿ  ಏನನ್ನಾದರೂ ಕೂಡ ಸಾಧಿಸಬಹುದು. ಅಷ್ಟೇ ಅಲ್ಲ, ಈ ಸಮಯದಲ್ಲಿ ಅವರು ನಿರ್ಧರಿಸುವ ಯಾವುದೇ ಗುರಿಯನ್ನು ಸಾಧಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಏಕೆಂದರೆ ಆ ಗುರಿಯನ್ನು ತಲುಪಲು ಅವರಿಗೆ ಸಾಕಷ್ಟು ಸಮಯ, ಶಕ್ತಿ, ಆರೋಗ್ಯ ಇತ್ಯಾದಿಗಳು ಸಾಥ್ ಸಿಗುತ್ತದೆ. ಒಂದು ವೇಳೆ ಯುವಕರು ತಮ್ಮ ಸಮಯವನ್ನು ಅನಗತ್ಯ ಕೆಲಸಗಳಲ್ಲಿ ವಿನಿಯೋಗಿಸಿದರೆ, ನಂತರ ಅವರಿಗೆ ಜೀವನದಲ್ಲಿ ಪಶ್ಚಾತಾಪ ಬಿಟ್ಟರೆ ಬೇರೆ ದಾರಿಯೇ ಉಳಿಯುವುದಿಲ್ಲ. ಹೀಗಾಗಿ ಯುವಕರು ಯಾವಾಗಲು ಈ ಸಂಗತಿಗಳಿಂದ ಅಂತರ ಕಾಯ್ದುಕೊಳ್ಳಬೇಕು. 

ಚಟ: ಸಾಮಾನ್ಯವಾಗಿ ಚಟ ಎಲ್ಲವನ್ನು ಹಾಳುಮಾಡುತ್ತದೆ. ಆದರೆ, ಒಂದು ವೇಳೆ ಯುವಕರು ತಮ್ಮ ಯೌವನಾವಸ್ಥೆಯಲ್ಲಿ ಚಟಕ್ಕೆ ಒಳಗಾದರೆ ಇದರಿಂದ ಅವರ ವೃತ್ತಿಜೀವನ, ಆರೋಗ್ಯ, ಕೌಟುಂಬಿಕ ಜೀವನ, ಆರ್ಥಿಕ ಸ್ಥಿತಿ ಎಲ್ಲವೂ ಹಾಳಾಗುತ್ತದೆ. ವ್ಯಕ್ತಿ ನಿರಾಶೆ ಮತ್ತು ಖಿನ್ನತೆಗೆ ಒಳಗಾಗುತ್ತಾನೆ. ಜೀವನದಲ್ಲಿಯೇ ತುಂಬಲಾರದ ನಷ್ಟವನ್ನು ಆತ ಅನುಭವಿಸುತ್ತಾನೆ.

ಸೋಮಾರಿತನ: ಸೋಮಾರಿತನ ಯಾವುದೇ ಓರ್ವ  ವ್ಯಕ್ತಿಯ ಜೀವನದ ಅತಿ ದೊಡ್ಡ ಶತ್ರುವಾಗಿದೆ. ಸೋಮಾರಿಯಾದವನು ತನ್ನ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯೌವ್ವನಾವಸ್ಥೆಯಲ್ಲಿ ಒಂದು ವೇಳೆ ಯಾವುದೇ ಓರ್ವ ವ್ಯಕ್ತಿ ಸೋಮಾರಿತನದಿಂದ ಸುತ್ತುವರೆದರೆ, ಅಂತಹ ವ್ಯಕ್ತಿ ತನ್ನ ಜೀವನದ ಅತ್ಯಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಾನೆ. ಇದರ ಬದಲಿಗೆ, ವ್ಯಕ್ತಿ ತನ್ನ ಜೀವನದ ಈ ಅತ್ಯಮೂಲ್ಯ ಸಮಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು.

ಇದನ್ನೂ ಓದಿ-ಉಡುಗೊರೆ ನೀಡುವಾಗ ಹೆಚ್ಚುವರಿ 1 ರೂ. ನಾಣ್ಯವನ್ನು ಏಕೆ ನೀಡುತ್ತೇವೆ?

ಕೆಟ್ಟ ಜನರ ಸಹವಾಸ: ಎಷ್ಟೇ ಸಂಸ್ಕಾರವಂತ, ಸದ್ಗುಣಶೀಲ, ಶ್ರಮಜೀವಿ, ಬುದ್ದಿವಂತ ವ್ಯಕ್ತಿಯಾಗಿದ್ದರೂ ಕೆಟ್ಟ ಸಹವಾಸದಲ್ಲಿ ಬಿದ್ದರೆ ಹಾಳಾಗುವುದು ಖಚಿತ. ಜೀವನದ ಯಾವುದೋ ಒಂದು ಹಂತದಲ್ಲಿ ಆತ ದೊಡ್ಡ ಸಮಸ್ಯೆಗೆ ಸಿಲುಕಿ ತನ್ನ ಉತ್ತಮ ಭವಿಷ್ಯವನ್ನೇ ಕಳೆದುಕೊಳ್ಳುತ್ತಾನೆ.

ಇದನ್ನೂ ಓದಿ-ವಿನಾಯಕ ಚತುರ್ಥಿ 2022: ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನ

(Desclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News