Chanakya Niti: ಕೆಸರಲ್ಲಿ ಬಿದ್ದ ಈ ವಸ್ತುಗಳನ್ನು ಮೇಲೆತ್ತಲು ಹಿಂಜರಿಯಬೇಡಿ, ಕಾರಣ ಇಲ್ಲಿದೆ

Chanakya Niti In Kannada: ಜೀವನದಲ್ಲಿ ಅಪಾರ ಯಶಸ್ಸು ಸಂಪಾದಿಸಲು ಸರಿಯಾದ ವೇಳೆಗೆ ಸರಿಯಾದ ನಿರ್ಣಯ ಕೈಗೊಳ್ಳುವುದು ತುಂಬಾ ಮುಖ್ಯ. ಕೆಲ ಸಂದರ್ಭಗಳಲ್ಲಿ ಕೆಸರಲ್ಲಿ ಬಿದ್ದಿರುವ ಕೆಲ ವಸ್ತುಗಳನ್ನು ಕೂಡ ಕೈಗೆತ್ತಿಕೊಳ್ಳಲು ಹಿಂಜರಿಯಬಾರದು.   

Written by - Nitin Tabib | Last Updated : Nov 28, 2022, 01:26 PM IST
  • ಆಚಾರ್ಯ ಚಾಣಕ್ಯರು ಸುಗಮ ಮತ್ತು ಯಶಸ್ವಿ ಜೀವನಕ್ಕೆ ಕೆಲವು ಪ್ರಮುಖ ನೀತಿಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
  • ಆಚಾರ್ಯ ಚಾಣಕ್ಯರು ಹೇಳಿರುವ ಈ ನೀತಿಗಳನ್ನು ಅನುಸರಿಸಿದರೆ, ಓರ್ವ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತದೆ ಮತ್ತು ಸಂತೋಷದಿಂದ ಕೂಡಿರುತ್ತದೆ.
Chanakya Niti: ಕೆಸರಲ್ಲಿ ಬಿದ್ದ ಈ ವಸ್ತುಗಳನ್ನು ಮೇಲೆತ್ತಲು ಹಿಂಜರಿಯಬೇಡಿ, ಕಾರಣ ಇಲ್ಲಿದೆ title=
Chanakya Niti In Kannada

Chanakya Niti for Life: ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ, ಮಾರ್ಗದರ್ಶಕ ಹಾಗೂ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಸುಗಮ ಮತ್ತು ಯಶಸ್ವಿ ಜೀವನಕ್ಕೆ ಕೆಲವು ಪ್ರಮುಖ ನೀತಿಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವ ಈ ನೀತಿಗಳನ್ನು ಅನುಸರಿಸಿದರೆ, ಓರ್ವ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತದೆ ಮತ್ತು ಸಂತೋಷದಿಂದ ಕೂಡಿರುತ್ತದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ವ್ಯಕ್ತಿಯನ್ನು ತೊಂದರೆಗಳು ಮತ್ತು ವೈಫಲ್ಯಗಳಿಂದ ರಕ್ಷಿಸುತ್ತವೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಕೆಲ  ವಸ್ತುಗಳು ಕೆಸರಿನಲ್ಲಿ ಬಿದ್ದಿದ್ದರೂ ಕೂಡ ಅವುಗಳನ್ನು ಕೈಗೆತ್ತಿಕೊಳ್ಳಲು ಎಂದಿಗೂ ಹಿಂಜರಿಯಬಾರದು ಎನ್ನಲಾಗಿದೆ. ಈ ವಸ್ತುಗಳನ್ನು ಕೆಸರಿನಿಂದ ಮೇಲಕ್ಕೆತ್ತುವುದು ಸಹ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ.

ಕೆಟ್ಟ ಸಂಗತಿಯಲ್ಲಿಯೂ ಕೂಡ ಒಳ್ಳೆಯದನ್ನು ಕಂಡುಕೊಳ್ಳಲು ಪ್ರಯತ್ನಿಸಿ
ಕೆಟ್ಟದ್ದರಲ್ಲಿಯೂ ಕೂಡ  ಒಳ್ಳೆಯದನ್ನು ಕಂಡುಕೊಳ್ಳುವ ಕಲೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಇದೇ ವೇಳೆ ಆ ಒಳ್ಳೆಯ ವಿಷಯಗಳನ್ನು ನಿಮ್ಮ ಜೀವನದಲ್ಲಿ ತರಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು. ಈ ಚಿಂತನೆಯು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

>> ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಯಾವುದೇ ಬೆಲೆಬಾಳುವ ವಸ್ತುವು ಕೆಸರಿನಲ್ಲಿ ಅಥವಾ ಕೊಳೆಯಲ್ಲಿ ಬಿದ್ದಿದ್ದರೂ ಕೂಡ ಅದನ್ನು ಕೈಗೆತ್ತಿಕೊಳ್ಳಬೇಕು ಎನ್ನಲಾಗಿದೆ.  ಉದಾಹರಣೆಗೆ, ಚಿನ್ನ ಅಥವಾ ವಜ್ರವು ಮಣ್ಣಿನಲ್ಲಿ ಬಿದ್ದಿದ್ದರೆ, ಅದನ್ನು ಎತ್ತಿಕೊಳ್ಳಿ ಏಕೆಂದರೆ ಮಣ್ಣಿನಲ್ಲಿ ಬಿದ್ದ ನಂತರವೂ ಅದರ ಮೌಲ್ಯವು ಕಡಿಮೆಯಾಗುವುದಿಲ್ಲ.

>> ಒಂದು ವೇಳೆ ಜೀವನದಲ್ಲಿ ದುಷ್ಟರು ಮತ್ತು ಹಾವಿನ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಎದುರಾದರೆ, ಹಾವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಹಾವು ಅದಕ್ಕೆ ಕಿರುಕುಳ ನೀಡಿದಾಗ ಅಥವಾ ಅದರ ಜೀವಕ್ಕೆ ಯಾವುದೇ ಅಪಾಯ ಉಂಟಾದಾಗ ಮಾತ್ರ ನಿಮಗೆ ಹಾನಿ ಮಾಡುತ್ತದೆ. ಮತ್ತೊಂದೆಡೆ, ದುಷ್ಟ ವ್ಯಕ್ತಿಯು ತನ್ನ ದುಷ್ಟ ಸ್ವಭಾವದಿಂದ ಕಾರಣವಿಲ್ಲದಿದ್ದರೂ ಕೂಡ ನಿಮಗೆ ಹಾನಿ ಮಾಡಬಹುದು.

ಇದನ್ನೂ ಓದಿ-Vastu Tips: ಭವಿಷ್ಯದಲ್ಲಿ ಧನ ಸಂಪತ್ತು ಸಿಗುತ್ತಾ ಅಥವಾ ಅಹಿತಕರ ಸುದ್ದಿ? ಹಲ್ಲಿ ನೀಡುತ್ತದೆ ಸಂಕೇತ

>> ಕೆಟ್ಟ ಸಂಸಾರದಲ್ಲಿ ಸದ್ಗುಣಿಯಾದ ಹುಡುಗಿಯಿದ್ದರೂ ಅವಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿಂಜರಿಯಬೇಡಿ ಎನ್ನುತ್ತದೆ ಚಾಣಕ್ಯ ನೀತಿ. ಹುಡುಗಿಯ ಕುಟುಂಬದ ಬದಲು, ಅವಳ ಗುಣಗಳನ್ನು ನೋಡಿ ಏಕೆಂದರೆ ಸದ್ಗುಣಶೀಲ ಹುಡುಗಿ ತನ್ನ ಉತ್ತಮ ನಡವಳಿಕೆಯಿಂದ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾಳೆ.

ಇದನ್ನೂ ಓದಿ-Tilak Tips: ಈ ರಾಶಿಗಳ ಜನರು ಮರೆತೂ ಕೂಡ ಕೆಂಪು ತಿಲಕವನ್ನಿಟ್ಟುಕೊಳ್ಳಬಾರದು, ಜೀವನದಲ್ಲಿ ಸಂಕಷ್ಟ ಹೆಚ್ಚಾಗುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News