Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!

ಆಚಾರ್ಯ ಚಾಣಕ್ಯ ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು. ಅವರ ಮಾತುಗಳು ಇಂದಿಗೂ ಪಾಲನೆಯಲ್ಲಿವೆ, ಅದಕ್ಕಾಗಿಯೇ ಇಂದಿಗೂ ಹೆಚ್ಚಿನ ಸಂಖ್ಯೆಯ ಜನರು ಚಾಣಕ್ಯ ನೀತಿಯನ್ನು ಅಧ್ಯಯನ ಮಾಡುತ್ತಾರೆ. 

Written by - Channabasava A Kashinakunti | Last Updated : Nov 18, 2022, 03:37 PM IST
  • ಚಾಣಕ್ಯನು ಮನುಷ್ಯನನ್ನು ಯಶಸ್ವಿಯಾಗಲು ನೀತಿ
  • ಆಚಾರ್ಯ ಚಾಣಕ್ಯ ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು
  • ಚಾಣಕ್ಯ ನೀತಿಯ ಶ್ಲೋಕವೂ ಬಹಳ ಉಪಯುಕ್ತ
Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ! title=

Chanakya Niti : ಚಾಣಕ್ಯನು ಮನುಷ್ಯನನ್ನು ಯಶಸ್ವಿಯಾಗಲು ನೀತಿಗಳನ್ನು ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯ ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು. ಅವರ ಮಾತುಗಳು ಇಂದಿಗೂ ಪಾಲನೆಯಲ್ಲಿವೆ, ಅದಕ್ಕಾಗಿಯೇ ಇಂದಿಗೂ ಹೆಚ್ಚಿನ ಸಂಖ್ಯೆಯ ಜನರು ಚಾಣಕ್ಯ ನೀತಿಯನ್ನು ಅಧ್ಯಯನ ಮಾಡುತ್ತಾರೆ. 

ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ದೀನ ವ್ಯಕ್ತಿಯು ಅತ್ಯುತ್ತಮವಾದ ಜ್ಞಾನವನ್ನು ಹೊಂದಿದ್ದರೂ ಸಹ, ಅವನಿಂದ ಜ್ಞಾನವನ್ನು ಪಡೆಯಲು ಹಿಂಜರಿಯಬೇಡಿ, ಏಕೆಂದರೆ ಆ ಜ್ಞಾನವು ನಿಮ್ಮನ್ನು ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಯಶಸ್ವಿಯಾಗಿಸುತ್ತದೆ. ನೀತಿಶಾಸ್ತ್ರಜ್ಞ ಚಾಣಕ್ಯನ ನೀತಿಗಳ ಪ್ರಕಾರ, ಬೆಲೆ ಬಾಳುವ ವಸ್ತುಗಳು ಮಣ್ಣಿನಲ್ಲಿ ಬಿದ್ದಿದ್ದರೂ ಅದರ ಬೆಲೆ ಕಡಿಮೆಯಾಗುವುದಿಲ್ಲ. ಹಾಗಾದರೆ ಚಾಣಕ್ಯ ನೀತಿಯ ಪ್ರಕಾರ ಆ ವಸ್ತುಗಳು ಯಾವುವು ಎಂದು ಇಲ್ಲಿ ತಿಳಿಯಿರಿ, ಅವುಗಳು ಮಣ್ಣಿನಲ್ಲಿ ಬಿದ್ದಿದ್ದರೂ, ಅವುಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.

ಇದನ್ನೂ ಓದಿ : ವರ್ಷದ ಕೊನೆಯ ತಿಂಗಳು 3 ರಾಶಿಯವರಿಗೆ ಹೊತ್ತು ತರುವುದು ಅದೃಷ್ಟ

ವಿಷಾದಪ್ಯಾಮೃತಂ ಗ್ರಾಹ್ಯಮೇಧ್ಯಾದ್ಪಿ ಕಾಂಚನಮ್ ।
ರಾಣಿಚಾದ್ಪ್ಯುತ್ತಮ ವಿದ್ಯಾನಸ್ತ್ರೀರತ್ನಂ ದುಷ್ಕುಲದ್ಪಿ ।

ಚಾಣಕ್ಯ ನೀತಿಯ ಈ ಶ್ಲೋಕದ ಮೂಲಕ, ಆಚಾರ್ಯ ಚಾಣಕ್ಯರು ವಿಷದಿಂದಲೂ ಅಮೃತವನ್ನು ಹೊರತೆಗೆಯಬೇಕು ಎಂದು ಹೇಳುತ್ತಾರೆ. ಸಾಧ್ಯವಾದರೆ ವಿಷದಿಂದ ಅಮೃತವನ್ನು ಹೊರತೆಗೆಯಿರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅಂದರೆ, ಕೆಟ್ಟ ವಿಷಯಗಳಲ್ಲಿಯೂ ಒಳ್ಳೆಯದನ್ನು ಹುಡುಕಲು ಮತ್ತು ಸ್ವೀಕರಿಸಲು ಪ್ರಯತ್ನಿಸಿ. ಈ ಮನೋಭಾವವು ನಿಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸತ್ಕುಲೇ ಯೋಜಯೇತ್ಕನ್ಯಾಂ ಪುತ್ರ ವಿದ್ಯಾಸು ಯೋಜತೇತ್ ।
ವ್ಯಸನ ಯೋಜಯಛತ್ರುಂ ಮಿತ್ರ ಧರ್ಮೇ ನಿಯೋಜಯೇತ್ ।

ಚಾಣಕ್ಯ ನೀತಿಯ ಶ್ಲೋಕವೂ ಬಹಳ ಉಪಯುಕ್ತವಾಗಿದೆ. ಒಳ್ಳೆಯ ಸಂಸಾರದಲ್ಲಿ ಹೆಣ್ಣು ಮದುವೆಯಾಗಬೇಕು ಎಂಬುದನ್ನು ಆಚಾರ್ಯ ಚಾಣಕ್ಯರು ಈ ಶ್ಲೋಕದ ಮೂಲಕ ಹೇಳಬಯಸಿದ್ದಾರೆ. ಹಾಗೆಯೇ ಸದಾ ಸದ್ಗುಣಿಯಾದ ಹುಡುಗಿಯನ್ನು ಗೌರವಿಸಿ. ದುಷ್ಟ ಕುಟುಂಬದಲ್ಲಿ ಸದ್ಗುಣಿಯಾದ ಹುಡುಗಿ ಇದ್ದರೆ ಅವಳನ್ನು ನಿಮ್ಮ ಮನೆಯ ಸೊಸೆಯನ್ನಾಗಿ ಮಾಡಲು ಎರಡು ಬಾರಿ ಯೋಚಿಸಬೇಡಿ. ಹುಡುಗಿಯ ಗುಣಗಳನ್ನು ನೋಡಿ, ಅವಳು ನಿಮ್ಮ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾಳೆ. ಏಕೆಂದರೆ ಈ ಇಡೀ ಪ್ರಪಂಚದಲ್ಲಿ ನಿರ್ಮಲರು ಯಾರೂ ಇಲ್ಲ, ಆದ್ದರಿಂದ ಕೆಡುಕುಗಳ ಬದಲಿಗೆ ಒಳ್ಳೆಯದನ್ನು ನೋಡಿ.

ಇದನ್ನೂ ಓದಿ : ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಇಮ್ಮಡಿ ಯಾಗುವುದು ಸಂತೋಷ

ಚಿನ್ನವು ಬಹಳ ಅಮೂಲ್ಯವಾದ ಲೋಹವಾಗಿದೆ, ಆದ್ದರಿಂದ ಚಿನ್ನವು ಕೆಸರಿನಲ್ಲಿ ಬಿದ್ದಿದ್ದರೂ ಅದನ್ನು ಎತ್ತಿಕೊಳ್ಳಬೇಕು. ಏಕೆಂದರೆ ಮಣ್ಣಿನಲ್ಲಿ ಬಿದ್ದರೂ ಚಿನ್ನದ ಬೆಲೆ ಕಡಿಮೆಯಾಗುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಸಾಧ್ಯವಾದರೆ, ವಿಷ ಮಿಶ್ರಿತ ಅಮೃತವನ್ನು ಹೊರತೆಗೆಯಲು ಸಲಹೆ ನೀಡಲಾಗುತ್ತದೆ. ಅಂದರೆ, ಕೆಡುಕಿನಿಂದ ಒಳಿತನ್ನು ಕಂಡುಕೊಳ್ಳುವ ಮತ್ತು ಅದನ್ನು ಸ್ವೀಕರಿಸುವ ಗುಣವು ವ್ಯಕ್ತಿಯನ್ನು ಜೀವನದಲ್ಲಿ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News