Chanakya Niti: ಈ ರೀತಿಯ ಸ್ನೇಹಿತರ ಸಹವಾಸದಿಂದ ದೂರವಿರುವುದು ನಿಮಗೆ ಒಳ್ಳೆಯದು

ಆಚಾರ್ಯ ಚಾಣಕ್ಯರು ತಪ್ಪು ಮಾರ್ಗವನ್ನು ತೋರಿಸುವ ಸ್ನೇಹಿತನು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ.

Written by - Puttaraj K Alur | Last Updated : Oct 22, 2021, 03:08 PM IST
  • ಕೆಟ್ಟ ಮನಸ್ಥಿತಿ ಹೊಂದಿರುವ ಸ್ನೇಹಿತರ ಸಹವಾಸದಿಂದ ದೂರವಿರುವುದು ಉತ್ತಮ
  • ತಪ್ಪು ಮಾರ್ಗವನ್ನು ತೋರಿಸುವ ಸ್ನೇಹಿತನು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ
  • ಬೆನ್ನಿಗೆ ಚೂರಿ ಹಾಕುವ ಸ್ನೇಹಿತರಿಂದ ದೂರವಿರಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ
Chanakya Niti: ಈ ರೀತಿಯ ಸ್ನೇಹಿತರ ಸಹವಾಸದಿಂದ ದೂರವಿರುವುದು ನಿಮಗೆ ಒಳ್ಳೆಯದು title=
ಸ್ನೇಹಿತರ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತದೆ?

ನವದೆಹಲಿ: ಅರ್ಥಶಾಸ್ತ್ರ ಮತ್ತು ರಾಜತಾಂತ್ರಿಕತೆ ಬಗ್ಗೆ ಅಪಾರ ತಿಳುವಳಿಕೆಯುಳ್ಳ ಆಚಾರ್ಯ ಚಾಣಕ್ಯ(Chanakya Niti)ರು ಜೀವನದಲ್ಲಿ ಯಶಸ್ವಿಯಾಗುವ ಮತ್ತು ಸಂತೋಷದ ಜೀವನ ನಡೆಸುವ ತಂತ್ರಗಳನ್ನು ಹೇಳಿದ್ದಾರೆ. ಕೆಲ ಕೆಟ್ಟ ಸ್ವಭಾವದ ಜನರ ಬಗ್ಗೆ ಅವರು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಸ್ನೇಹಿತರ ಸಹವಾಸದಿಂದ ಆದಷ್ಟು ನೀವು ದೂರವಿರುವುದೇ ಉತ್ತಮ. ಏಕೆಂದರೆ ಇಂತಹವರು ಬದುಕಿರುವಾಗಲೇ ನಿಮ್ಮ ಜೀವನವನ್ನು ನರಕವಾಗಿಸುತ್ತಾರಂತೆ.

ಇದು ಕೆಟ್ಟ ಸ್ವಭಾವದ ಸ್ನೇಹಿತರ ಸಹವಾಸವನ್ನು ಒಳಗೊಂಡಿರುವ ವಿಷಯವಾಗಿದೆ. ಸ್ನೇಹದ ವಿಷಯದಲ್ಲಿ ಚಾಣಕ್ಯರು ಹೇಳಿರುವ ಅಮೂಲ್ಯ ಸಲಹೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉಜ್ವಲ ಭವಿಷ್ಯವನ್ನು ಕಾಣಬಹುದು. ನೀವು ಎಂದಿಗೂ ಇಂತಹ ಸ್ನೇಹಿತರಿಂದ ಮೋಸ(Big damage due to Friend)ಹೋಗುವುದಿಲ್ಲ ಅಥವಾ ನಿಮ್ಮ ಜೀವನದಲ್ಲಿ ಕೆಟ್ಟ ದಿನಗಳನ್ನು ನೋಡುವುದಿಲ್ಲ.

ಇದನ್ನೂ ಓದಿ: Kartik Month 2021 : ಧನ ಪ್ರಾಪ್ತಿ, ಸಮೃದ್ದಿಯಾಗಬೇಕಾದರೆ ಕಾರ್ತಿಕ ಮಾಸದಲ್ಲಿ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ಇಂತಹ ಸ್ನೇಹಿತರಿಂದ ದೂರವಿರಿ

ಆಚಾರ್ಯ ಚಾಣಕ್ಯರು(Acharya Chanakya) ತಪ್ಪು ಮಾರ್ಗವನ್ನು ತೋರಿಸುವ ಸ್ನೇಹಿತನು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಅಂತಹ ಸ್ನೇಹಿತರ ಮಾತುಗಳನ್ನು ನಂಬುವುದು ನಿಮಗೆ ದೊಡ್ಡ ನಷ್ಟವನ್ನುಂಟುಮಾಡುತ್ತದೆ. ನೀವು ತಪ್ಪು ಕೆಲಸ ಮಾಡುತ್ತಿರುವಾಗಲೂ ಯಾವ ಸ್ನೇಹಿತ ನಿಮ್ಮನ್ನು ತಡೆಯುವುದಿಲ್ಲವೋ ಅಂತವನು ನಿಮ್ಮ ನಿಜವಾದ ಸ್ನೇಹಿತನಲ್ಲ. ಏಕೆಂದರೆ ನಿಜವಾದ ಸ್ನೇಹಿತನ ಕೆಲಸವು ತನ್ನ ಸ್ನೇಹಿತ ತಪ್ಪು ದಾರಿಯಲ್ಲಿ ಹೋಗದಂತೆ ತಡೆಯುವುದು ಆಗಿರುತ್ತದೆ. ಹೀಗಾಗಿ ನೀವು ಮತ್ತೊಬ್ಬರ ಸ್ನೇಹ ಮಾಡಬೇಕಾದರೆ ತುಂಬಾ ಎಚ್ಚರಿಕೆ ವಹಿಸುವುದು ಮುಖ್ಯ. ಇಲ್ಲದಿದ್ದರೆ ನಿಮ್ಮ ಜೀವನದಲ್ಲಿ ನರಕ ಪರಿಸ್ಥಿತಿ ಎದುರಾಗಬಹುದು.

ಬೆನ್ನಿಗೆ ಚೂರಿ ಹಾಕುವವರಿಂದ ದೂರವಿರಬೇಕು

ಸ್ನೇಹದ ಬಗ್ಗೆ ಉಲ್ಲೇಖಿಸುತ್ತಾ ಆಚಾರ್ಯ ಚಾಣಕ್ಯರು ಬೆನ್ನಿಗೆ ಚೂರಿ ಹಾಕುವ ಮನಸ್ಥಿತಿಯುಳ್ಳ ಸ್ನೇಹಿತ(Avoid Lier Friends)ರಿಂದ ದೂರವಿರಬೇಕೆಂದು ಸಲಹೆ ನೀಡಿದ್ದಾರೆ. ಇಂತಹ ಸ್ನೇಹಿತರು ನಿಮಗೆ ದೊಡ್ಡ ಹಾನಿಯನ್ನುಂಟುಮಾಡುತ್ತಾರೆ. ಅವರು ನಿಮ್ಮ ಬೆನ್ನಿಗೆ ಯಾವಾಗ ಚೂರಿ ಹಾಕುತ್ತಾರೆಂದು ಹೇಳುವುದು ಬಲುಕಷ್ಟ. ಇಂತವರು ನಿಮ್ಮ ನಂಬಿಕೆಗೆ ದ್ರೋಹ ಬಗೆಯಬಹುದು. ನಿಮ್ಮ ರಹಸ್ಯಗಳನ್ನು ಇತರರಿಗೆ ಹೇಳಬಹುದು ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದು ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Benefits Of Rice: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನ

ಕೆಲವು ಸ್ನೇಹಿತರ ಸಹವಾಸದಿಂದ ನಿಮಗೆ ಹಣಕಾಸಿನ ನಷ್ಟ ಸಹ ಉಂಟಾಗಬಹುದು. ಆದ್ದರಿಂದ ನಿಜವಾದ ಸ್ನೇಹಿತ ಎಂದು ಕುರುಡಾಗಿ ನಂಬುವ ಮೊದಲು ನಿಮ್ಮ ಸ್ನೇಹಿತರ ಬಗ್ಗೆ ಕುಲಂಕುಶವಾಗಿ ಪರೀಕ್ಷಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಉಪಯುಕ್ತ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News