ಈ ಬಾರಿ ಅಕ್ಷಯ ತೃತೀಯಕ್ಕಿದೆ ವಿಶೇಷ ಪ್ರಾಮುಖ್ಯತೆ! ಈ ಮುಹೂರ್ತದಲ್ಲಿಯೇ ಖರೀದಿಸಿ ಚಿನ್ನ

Akshaya Tritiya 2023 Shubh Muhurat: ಈ ದಿನ, ಅದೃಷ್ಟವನ್ನು ನೀಡುವ ದೇವಗುರು ಬೃಹಸ್ಪತಿ ಕೂಡ ಸಂಕ್ರಮಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಗುರು ಗ್ರಹವು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿರುವುದು. ಆದ್ದರಿಂದ, ಈ ಬಾರಿಯ ಅಕ್ಷಯ ತೃತೀಯ  ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. 

Written by - Ranjitha R K | Last Updated : Apr 7, 2023, 12:17 PM IST
  • ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯದಂದು ಅಕ್ಷಯ ತೃತೀಯ
  • ಈ ದಿನ ಚಿನ್ನವನ್ನು ಖರೀದಿಸುವುದು ತುಂಬಾ ಶುಭ
  • ಅಕ್ಷಯ ತೃತೀಯದ ಶುಭ ಮುಹೂರ್ತ ಯಾವುದು ?
ಈ  ಬಾರಿ ಅಕ್ಷಯ ತೃತೀಯಕ್ಕಿದೆ ವಿಶೇಷ ಪ್ರಾಮುಖ್ಯತೆ! ಈ ಮುಹೂರ್ತದಲ್ಲಿಯೇ ಖರೀದಿಸಿ ಚಿನ್ನ   title=

Akshaya Tritiya 2023 Shubh Muhurat : ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ಎಂಬ ಪದದ ಅರ್ಥ ಎಂದಿಗೂ ಕಡಿಮೆಯಾಗದಿರುವುದು ಎಂದು.  ಅಕ್ಷಯ ತೃತೀಯ ದಿನದಂದು ಮಾಡುವ ಶುಭ ಕಾರ್ಯ, ಪೂಜೆ,  ದಾನ ಧರ್ಮಕ್ಕೆ ಹೆಚ್ಚು ಫಲ ಸಿಗುತ್ತದೆ. ಈ ದಿನ ಚಿನ್ನವನ್ನು ಖರೀದಿಸುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಈ ದಿನ  ಖರೀದಿಸುವ ಚಿನ್ನದೊಂದಿಗೆ ಸಮೃದ್ಧಿ ಕೂಡಾ ಹೊತ್ತು ಬರಲಿದೆ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಅನೇಕ ಶುಭಯೋ ಗ ರೂಪುಗೊಳ್ಳುತ್ತದೆ. ಈ ದಿನದಂದು ಚಿನ್ನದ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. 

ಅಕ್ಷಯ ತೃತೀಯ ದಿನಾಂಕ  : 
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಕ್ಷಯ ತೃತೀಯ ಅಂದರೆ ವೈಶಾಖ ಶುಕ್ಲದ ತೃತೀಯ ತಿಥಿಯು ಏಪ್ರಿಲ್ 22 ರಂದು ಬೆಳಿಗ್ಗೆ 07.49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಿಗ್ಗೆ 07.47 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಅಕ್ಷಯ ತೃತೀಯವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಈ ದಿನ, ಅದೃಷ್ಟವನ್ನು ನೀಡುವ ದೇವಗುರು ಬೃಹಸ್ಪತಿ ಕೂಡ ಸಂಕ್ರಮಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಗುರು ಗ್ರಹವು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿರುವುದು. ಆದ್ದರಿಂದ, ಈ ಬಾರಿಯ ಅಕ್ಷಯ ತೃತೀಯ  ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. 

ಇದನ್ನೂ ಓದಿ : Vastu Remedies: ನಿಮ್ಮ ಮನೆಯಲ್ಲಿಯೂ ಕೂಡ ಇಂತಹ ಅಲಂಕಾರದ ವಸ್ತುಗಳಿದ್ದರೆ, ತಕ್ಷಣವೇ ಅವುಗಳನ್ನು ಹೊರಹಾಕಿ

ಅಕ್ಷಯ ತೃತೀಯದಂದು ಅಂದರೆ ಏಪ್ರಿಲ್ 22 ರಂದು ಬೆಳಿಗ್ಗೆ 7.49 ರಿಂದ ಮಧ್ಯಾಹ್ನ 12.20 ರವರೆಗೆ ಪೂಜೆಗೆ ಶುಭ ಸಮಯ  ಇರುತ್ತದೆ. ಮತ್ತೊಂದೆಡೆ, ಅಕ್ಷಯ ತೃತೀಯದ ದಿನ ಚಿನ್ನವನ್ನು ಖರೀದಿಸಲು ಏಪ್ರಿಲ್ 22, 2023 ರಂದು ಬೆಳಿಗ್ಗೆ 07.49 ರಿಂದ ಏಪ್ರಿಲ್ 23 ರ ಬೆಳಿಗ್ಗೆ 7.47 ರವರೆಗೆ  ಶುಭ ಸಮಯವಾಗಿರುತ್ತದೆ. 

ಅಕ್ಷಯ ತೃತೀಯದ ಶುಭ ಯೋಗ  :
ಪಂಚಾಂಗದ ಪ್ರಕಾರ, ಈ ವರ್ಷ ಅಕ್ಷಯ ತೃತೀಯದಂದು 6 ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವವು ಇನ್ನಷ್ಟು ಹೆಚ್ಚಾಗಿರುತ್ತದೆ. ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದರಿಂದ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಸಿಗುತ್ತದೆ. ಇದು ಮನೆಯಲ್ಲಿ ಬಹಳಷ್ಟು ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ. 

ಇದನ್ನೂ ಓದಿ : Vastu Tips: ಮನೆಯ ಈ ದಿಕ್ಕಿಗೆ ಮಣ್ಣಿನ ಮಡಕೆ ಇಟ್ಟರೆ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ!

ಆಯುಷ್ಮಾನ್ ಯೋಗ - ಏಪ್ರಿಲ್  21 ರಿಂದ ಏಪ್ರಿಲ್ 22 ರವರೆಗೆ ಬೆಳಿಗ್ಗೆ 9.26 ರಿಂದ.
ಸೌಭಾಗ್ಯ ಯೋಗ - ಏಪ್ರಿಲ್ 22 ರಂದು ಬೆಳಿಗ್ಗೆ 9.26 ರಿಂದ ಏಪ್ರಿಲ್ 23 ರವರೆಗೆ ಬೆಳಿಗ್ಗೆ 8.22 ರವರೆಗೆ 
ತ್ರಿಪುಷ್ಕರ ಯೋಗ - 22 ಏಪ್ರಿಲ್ 5.49 ರಿಂದ 7.49 ರವರೆಗೆ.
ಸರ್ವಾರ್ಥ ಸಿದ್ಧಿ ಯೋಗ - ಏಪ್ರಿಲ್ 22 ರ ಬೆಳಿಗ್ಗೆ 11:24 ರಿಂದ ಏಪ್ರಿಲ್ 23 ರ ಬೆಳಿಗ್ಗೆ 5:48 ರವರೆಗೆ.
ರವಿ ಯೋಗ - ಏಪ್ರಿಲ್ 22 ರ ಬೆಳಿಗ್ಗೆ 11:24 ರಿಂದ ಏಪ್ರಿಲ್ 23 ರ ಬೆಳಿಗ್ಗೆ 5:48 ರವರೆಗೆ.
ಅಮೃತ ಸಿದ್ಧಿ ಯೋಗ - ಏಪ್ರಿಲ್ 22 ಬೆಳಿಗ್ಗೆ 11:24 ರಿಂದ ಏಪ್ರಿಲ್ 23 ರ ಬೆಳಿಗ್ಗೆ 5:48 ರವರೆಗೆ.

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News