ಈ ಎರಡು ಮಹತ್ವದ ಗ್ರಹಗಳ ಸಂಯೋಜನೆಯಿಂದ ನಾಳೆ ನಿರ್ಮಾಣಗೊಳ್ಳಲಿದೆ ಮಹಾಲಕ್ಷ್ಮಿ ಯೋಗ, ಈ ರಾಶಿಗಳಿಗೆ ಲಾಭ

Budh-Shukra Yuti inTaurus: ಗ್ರಹಗಳ ಗೋಚರದಂತೆಯೇ ಗ್ರಹಗಳ ಸಂಯೋಜನೆ ಕೂಡ ವಿವಿಧ ರಾಶಿಗಳ ಜಾತಕದವರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜೂನ್ 18, 2022 ರಿಂದ ಶುಕ್ರ ಗ್ರಹ ತನ್ನದೇ ಆದ ವೃಷಭ ರಾಶಿಗೆ ಪ್ರವೇಶಿಸಲಿದ್ದು, ವ್ರುಶಭಾರಾಶಿಯಲ್ಲಿ ಈಗಾಗಲೇ ಬುಧ ಗ್ರಹ ಇರುವ ಕಾರಣ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳಲಿದೆ. ಈ ಸಂಯೋಜನೆ ಮೂರು ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭಫಲಪ್ರದಾಯಿ ಸಾಬೀತಾಗಲಿದೆ. 

Written by - Nitin Tabib | Last Updated : Jun 17, 2022, 02:34 PM IST
  • ಮಹಾಲಕ್ಷ್ಮಿ ಯೋಗವನ್ನು ಜೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಯೋಗ ಎಂದು ಭಾವಿಸಲಾಗಿದೆ.
  • ಈ ಯೋಗ ಎಲ್ಲಾ 12 ರಾಶಿಗಳ ಮೇಲೆ ಭಾರಿ ಪ್ರಭಾವ ಬೀರಲಿದೆ.
  • ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ.
ಈ ಎರಡು ಮಹತ್ವದ ಗ್ರಹಗಳ ಸಂಯೋಜನೆಯಿಂದ ನಾಳೆ ನಿರ್ಮಾಣಗೊಳ್ಳಲಿದೆ ಮಹಾಲಕ್ಷ್ಮಿ ಯೋಗ, ಈ ರಾಶಿಗಳಿಗೆ ಲಾಭ title=
Mahalakshmi Yoga

Maha Lakshmi yoga In Taurus: ಜೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 18, 2022 ರಂದು ಶುಕ್ರ ಗ್ರಹ ತನ್ನದೇ ಆದ ವೃಷಭ ರಾಶಿಯಲ್ಲಿ ಗೋಚರಿಸಲಿದೆ. ಆದರೆ, ಈಗಾಗಲೇ ವೃಷಭ ರಾಶಿಗೆ ಬುಧನ ಪ್ರವೇಶ ನೆರವೇರಿದೆ. ಹೀಗಾಗಿ ಜೂನ್ 18ರಂದು ವೃಷಭ ರಾಶಿಯಲ್ಲಿ ಬುಧ ಹಾಗೂ ಶುಕ್ರರ ಸಂಯೋಜನೆ ಏರ್ಪಡಲಿದೆ. ವೈಭವ ಹಾಗೂ ವಿಳಾಸಗಳ ಕಾರಕ ಗ್ರಹ ಎಂದು ಕರೆಯಲಾಗುವ ಶುಕ್ರ ಮತ್ತು ಬುದ್ಧಿ-ಧನ-ವ್ಯಾಪಾರದ ಕಾರಕ ಎಂದು ಕರೆಯಲಾಗುವ ಬುಧನ ಈ ಮಿಲನ ಹಲವು ಜನರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಗ್ರಹಗಳ ಯುತಿಯಿಂದ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳುತ್ತಿದೆ. ಮಹಾಲಕ್ಷ್ಮಿ ಯೋಗವನ್ನು ಜೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಯೋಗ ಎಂದು ಭಾವಿಸಲಾಗಿದೆ. ಈ ಯೋಗ ಎಲ್ಲಾ 12 ರಾಶಿಗಳ ಮೇಲೆ ಭಾರಿ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಹಾಗಾದರೆ ಬನ್ನಿ ಈ ಮಹಾಲಕ್ಷ್ಮಿ ಯೋಗ ಯಾವ ರಾಶಿಗಳ ಪಾಲಿಗೆ ಜಬರ್ದಸ್ತ್ ಧನಲಾಭ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ ಮಹಾಲಕ್ಷ್ಮಿ ಯೋಗ ವರದಾನ ಸಾಬೀತಾಗಲಿದೆ. ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿದೆ. ಅಪಾಯಕಾರಿ ಹೂಡಿಕೆಗಳು ಕೂಡ ನಿಮಗೆ ಈ ಅವಧಿಯಲ್ಲಿ ಜಬರ್ದಸ್ತ್ ಲಾಭ ನೀಡಲಿವೆ. ನೌಕರ ವರ್ಗಕ್ಕೆ ಸೇರಿದವರ ಆದಾಯದಲ್ಲಿ ಭಾರಿ ಏರಿಕೆಯಾಗಲಿದೆ. ವ್ಯಾಪಾರಿಗಳಿಗೂ ಕೂಡ ಈ ಯೋಗ ಸಾಕಷ್ಟು ಲಾಭ ನೀಡಲಿದೆ. ನಿಮಗೆ ಬರಬೇಕಾಗಿರುವ ಹಣ ನಿಮ್ಮ ಕೈಸೇರಲಿದೆ. ಒಟ್ಟಾರೆಯಾಗಿ ಈ ಸಮಯ ಆಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆ ತರಲಿದೆ. 

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರ ಪಾಲಿಗೆ ಮಹಾಲಕ್ಷ್ಮಿ ಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಕೆಲ ಜನರ ಕೆಲಸದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಆದಾಯ ಹೆಚ್ಚಾಗುವ ಪ್ರಬಲ ಅವಕಾಶಗಳಿವೆ. ವ್ಯಾಪಾರಿಗಳಿಗೆ ಲಾಭ. ಮಹತ್ವದ ಡೀಲ್ ಫೈನಲ್ ಆಗಲಿದೆ ಅಥವಾ ದೊಡ್ಡ ಆರ್ಡರ್ ವೊಂದು ನಿಮಗೆ ಸಿಗುವ ಎಲ್ಲಾ ಸಂಕೇತಗಳಿವೆ. ತಾಯಿ ಲಕ್ಷ್ಮಿಯ ಕೃಪೆ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನ ನೀಡಲಿದೆ ಮತ್ತು ಭವಿಷ್ಯದಲ್ಲಿ ಅದು ನಿಮ್ಮ ಕೆಲಸಕ್ಕೆ ಬರಲಿದೆ.

ಇದನ್ನೂ ಓದಿ-ಭಾಗ್ಯ ಬೆಳಗುತ್ತಲೇ ಹುಟ್ಟುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು.. !ಪ್ರತಿ ಹಂತದಲ್ಲೂ ಸಿಗುತ್ತದೆ ಯಶಸ್ಸು

ಸಿಂಹ ರಾಶಿ: ಬುಧ-ಶುಕ್ರರ ಈ ಯುತಿಯಿಂದ ನಿರ್ಮಾಣಗೊಳ್ಳುತ್ತಿರುವ ಮಹಾಲಕ್ಷ್ಮಿ ಯೋಗ ಸಿಂಹ ರಾಶಿಯವರ ಪಾಲಿಗೆ ಅಪಾರ ಲಾಭ ನೀಡಲಿದೆ. ಕಾರ್ಯಕ್ಷೇತ್ರದಲ್ಲಿ ಲಾಭ ಸಿಗಲಿದೆ, ಬಡ್ತಿ-ವೇತನ ವೃದ್ಧಿಯ ಎಲ್ಲಾ ಲಕ್ಷಣಗಳು ಗೋಚರರಿಸುತ್ತಿವೆ. ಒಳ್ಳೆಯ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಿಗಳ ಲಾಭ ಹೆಚ್ಚಾಗಲಿದೆ, ದೊಡ್ಡ ಆರ್ಡರ್ ಗಳು ಕೈಸೇರಲಿವೆ ಮತ್ತು ಈ ಧನಲಾಭದ ಸ್ಥಿತಿಯಿಂದ ಉತ್ಸಾಹ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ. ಈ ಸಮಯ ನಿಮ್ಮ ಪಾಲಿಗೆ ಉತ್ತಮ ಸಾಬೀತಾಗಲಿದೆ.

ಇದನ್ನೂ ಓದಿ-ಜುಲೈ 12 ರಿಂದ ಈ ರಾಶಿಯವರು ಜಾಗರೂಕರಾಗಿರಬೇಕು, ಶನಿ ದೇವ ನೀಡಲಿದ್ದಾನೆ ಸಂಕಷ್ಟ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News