Homemade Skin Care Tips : ಮುಖದ ಅಂದ ಹೆಚ್ಚಿಸುವ ಈ ಕ್ರೀಂ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ!ಅದು ಕೂಡಾ ಅಗ್ಗದ ದರದಲ್ಲಿ

Hame made face cream : ತ್ವಚೆಯ ಕಾಂತಿಯನ್ನು ದ್ವಿಗುಣಗೊಳಿಸಲು ಮನೆಯಲ್ಲಿಯೇ ಕ್ರೀಂ ತಯಾರಿಸಿ ಬಳಸಬಹುದು. ಇದನ್ನು ತಯಾರಿಸುವುದು ಕೂಡಾ ಸುಲಭ, ಮಾತ್ರವಲ್ಲ ಇದನ್ನೂ ಬಳಸುವುದರಿಂದ ತ್ವಚೆಯ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.

Written by - Ranjitha R K | Last Updated : Jan 8, 2024, 05:44 PM IST
  • ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಹಿಳೆಯರು ನಾನಾ ಕಸರತ್ತುಗಳನ್ನು ಮಾಡುತ್ತಾರೆ.
  • ಇದಕ್ಕಾಗಿ ಫೆಶಲ್, ಕ್ಲೀನಿಂಗ್ ಎಂದು ಪಾರ್ಲರ್ ಗೆ ಅಲೆಯುತ್ತಾರೆ.
  • ಕೇಸರಿಯಲ್ಲಿ ಈ ಪದಾರ್ಥಗಳನ್ನು ಮಿಶ್ರಣ ಮಾಡಿ
Homemade Skin Care Tips : ಮುಖದ ಅಂದ ಹೆಚ್ಚಿಸುವ ಈ ಕ್ರೀಂ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ!ಅದು ಕೂಡಾ ಅಗ್ಗದ ದರದಲ್ಲಿ   title=

ಬೆಂಗಳೂರು : ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಹಿಳೆಯರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕಾಗಿ ಫೆಶಲ್, ಕ್ಲೀನಿಂಗ್ ಎಂದು ಪಾರ್ಲರ್ ಗೆ ಅಲೆಯುತ್ತಾರೆ. ಇನ್ನು ಕೆಲವರು ದುಬಾರಿ ಕ್ರೀಂ, ಲೋಶನ್ ಮೊರೆ ಹೋಗುತ್ತಾರೆ.ಈ ಕ್ರೀಂ, ಲೋಶನ್ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಆದರೆ ಇದು ಅಡ್ಡ ಪರಿಣಾಮಗಳಿಂದಲೂ ಮುಕ್ತವಾಗಿರುವುದಿಲ್ಲ. ಇದರ ಬದಲಿಗೆ ತ್ವಚೆಯ ಕಾಂತಿಯನ್ನು ದ್ವಿಗುಣಗೊಳಿಸಲು ಮನೆಯಲ್ಲಿಯೇ ಕ್ರೀಂ ತಯಾರಿಸಿ ಬಳಸಬಹುದು. ಇದನ್ನು ತಯಾರಿಸುವುದು ಕೂಡಾ ಸುಲಭ, ಮಾತ್ರವಲ್ಲ ಇದನ್ನು ಬಳಸುವುದರಿಂದ ತ್ವಚೆಯ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. 

ಕೇಸರಿಯಲ್ಲಿ ಈ ಪದಾರ್ಥಗಳನ್ನು ಮಿಶ್ರಣ ಮಾಡಿ :
ಕೇಸರಿಯನ್ನು ಮುಖಕ್ಕೆ ಹಚ್ಚುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಇದು ನಮ್ಮ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು  ಕಾಂತಿಯುತ ಹೊಳಪನ್ನು ನೀಡುತ್ತದೆ.ಕೇಸರಿಯೊಂದಿಗೆ ಈ ವಸ್ತುಗಳನ್ನು ಬೆರೆಸಿ ಹಚ್ಚುವುದರಿಂದ ಸುಂದರವಾದ ಹೊಳಪನ್ನು ಪಡೆಯಬಹುದು.

ಇದನ್ನೂ ಓದಿ : ಟೇಸ್ಟಿ ಮತ್ತು ಆರೋಗ್ಯಕರ ಆಹಾರಕ್ಕೆ ಇಲ್ಲಿದೆ ಟಿಪ್ಸ್...

ಈ ಕ್ರೀಂ ತಯಾರಿಸಲು ಬೇಕಾಗುವ ಸಾಮಗ್ರಿಗಳು : 
ಅಲೋವೆರಾ - 2 ಟೀಸ್ಪೂನ್
ಬಾದಮಿ ಎಣ್ಣೆ - 5 ಹನಿಗಳು
ವಿಟಮಿನ್ ಇ ಕ್ಯಾಪ್ಸುಲ್ - 1
ಕೇಸರಿ - 6-7 ದಳಗಳು
ರೋಸ್ ವಾಟರ್ - 2 ಟೀಸ್ಪೂನ್

ಕ್ರೀಂ ತಯಾರಿಸುವ ವಿಧಾನ : 
ಮೊದಲಿಗೆ, ಅಲೋವೆರಾ ಜೆಲ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
ಈಗ ಅದಕ್ಕೆ 5 ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ.
ನಂತರ, ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಒಡೆದು ಅದರೊಳಗೆ ಹಾಕಿ. 
ಈಗ 6-7 ಕೇಸರಿ ದಳಗಳು ಮತ್ತು ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ನೀವು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಬಹುದು. 
ಈ ಕ್ರೀಮ್ ಅನ್ನು 15 ರಿಂದ 20 ದಿನಗಳವರೆಗೆ ಸಂಗ್ರಹಿಸಬಹುದು.

ಇದನ್ನೂ ಓದಿ : ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ...

ಈ ಕ್ರೀಂನ ಪ್ರಯೋಜನಗಳು :
-ಈ ಕ್ರೀಮ್ ಆಂಟಿ-ಏಜಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ನಿಮ್ಮ ತ್ವಚೆಯ   ಯುವಾವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. 
-ಚಳಿಗಾಲದಲ್ಲಿ ನಮ್ಮ ತ್ವಚೆ ಒಣಗುತ್ತದೆ. ಈ ಪರಿಸ್ಥಿತಿಯಲ್ಲಿ ಈ ಕ್ರೀಮ್ ನಿಮ್ಮ ತ್ವಚೆಯನ್ನು ಹೈಡ್ರೇಟ್ ಆಗಿ ಇಡುತ್ತದೆ. ಮುಖದ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ.
-ಮಾರುಕಟ್ಟೆಯ ಬ್ಯೂಟಿ ಕ್ರೀಮ್‌ಗಳನ್ನು ಬಳಸುವುದರಿಂದ ತ್ವಚೆಯ ಮೇಲೆ ಮೂಡುವ ಹೊಳಪು ನೈಸರ್ಗಿಕವಲ್ಲ, ಬದಲಿಗೆ ಅದು ನಮ್ಮ ಮುಖವನ್ನು ಬೆಳ್ಳಗಾಗಿಸುತ್ತದೆ ಅಷ್ಟೇ.  ಆದರೆ ಈ ಮನೆಮದ್ದನ್ನು ಪ್ರಯತ್ನಿಸಿದರೆ ನಿಮ್ಮ ಮುಖದ ಹೊಳಪು ನೈಸರ್ಗಿಕವಾಗಿ ಹೆಚ್ಚಿಸುತ್ತದೆ. 
ಮನೆಯಲ್ಲಿ ತಯಾರಿಸಿದ ಈ ಕ್ರೀಮ್ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News