Hair Care: ಬಾಳೆಹಣ್ಣಿನಿಂದ ಪಡೆಯಿರಿ ಹೊಳೆಯುವ ರೇಷ್ಮೆಯಂಥ ಕೂದಲು, ಇಲ್ಲಿದೆ ಬಳಸುವ ವಿಧಾನ!

Hair Care Tips: ಇಂದು ನಾವು ನಿಮಗೆ ಬಾಳೆಹಣ್ಣಿನ ಹೇರ್ ಪ್ಯಾಕ್ ಬಗ್ಗೆ ಹೇಳಲಿದ್ದೇವೆ. ಬಾಳೆಹಣ್ಣಿನ ಹೇರ್ ಪ್ಯಾಕ್ ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರೊಂದಿಗೆ ಸೀಳುತುದಿಯ ಸಮಸ್ಯೆಯೂ ದೂರವಾಗುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.  

Written by - Chetana Devarmani | Last Updated : Jun 14, 2023, 11:26 AM IST
  • ಮನೆಯಲ್ಲೇ ಪಡೆಯಿರಿ ಹೊಳೆಯುವ ರೇಷ್ಮೆಯಂಥ ಕೂದಲು
  • ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಬಾಳೆಹಣ್ಣು
  • ಬಾಳೆಹಣ್ಣಿನ ಹೇರ್ ಪ್ಯಾಕ್ ಮಾಡುವ ವಿಧಾನ ಇಲ್ಲಿದೆ
Hair Care: ಬಾಳೆಹಣ್ಣಿನಿಂದ ಪಡೆಯಿರಿ ಹೊಳೆಯುವ ರೇಷ್ಮೆಯಂಥ ಕೂದಲು, ಇಲ್ಲಿದೆ ಬಳಸುವ ವಿಧಾನ!   title=
Hair Care Tips

Banana Hair Pack: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಎ ಮತ್ತು ಸಿ ನಂತಹ ಗುಣಗಳಿವೆ. ಇದು ನಿಮ್ಮ ದೇಹಕ್ಕೆ ಮಾತ್ರವಲ್ಲದೆ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಕೂದಲಿಗೆ ಬಾಳೆಹಣ್ಣನ್ನು ಹಚ್ಚಿದರೆ, ತಲೆಹೊಟ್ಟು ನಿವಾರಣೆಯಾಗುತ್ತದೆ. ಬಾಳೆಹಣ್ಣಿನ ಹೇರ್ ಪ್ಯಾಕ್ ನಿಮ್ಮ ಕೂದಲನ್ನು ಸಿಲ್ಕಿ ಮತ್ತು ಶೈನಿಯಾಗಿಸುತ್ತದೆ. ಇದರೊಂದಿಗೆ ಸೀಳುತುದಿಯ ಸಮಸ್ಯೆಯೂ ದೂರವಾಗುತ್ತದೆ. ಅಷ್ಟೇ ಅಲ್ಲ ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬಾಳೆಹಣ್ಣಿನ ಹೇರ್‌ ಮಾಸ್ಕ್‌ ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: ಮಧುಮೆಹಿಗಳು ಮರೆತೂ ಕೂಡ ಈ ಹಣ್ಣುಗಳನ್ನು ಸೇವಿಸಬಾರದು!

ಬೇಕಾಗುವ ಸಾಮಾಗ್ರಿಗಳು 

ಬಾಳೆಹಣ್ಣು
ತಾಜಾ ಅಲೋವೆರಾ ಜೆಲ್
ಜೇನು 2 ಟೀಸ್ಪೂನ್
ತೆಂಗಿನ ಎಣ್ಣೆ 2 ರಿಂದ 3 ಟೀಸ್ಪೂನ್

ಬಾಳೆಹಣ್ಣಿನ ಹೇರ್ ಪ್ಯಾಕ್ ಮಾಡುವುದು ಹೇಗೆ? 

- ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
- ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ.
- ಇದರ ನಂತರ, ತಾಜಾ ಅಲೋವೆರಾ ಜೆಲ್ ಅನ್ನು ಹಾಕಿ.
- ಸುಮಾರು 2 ರಿಂದ 3 ಚಮಚ ತೆಂಗಿನ ಎಣ್ಣೆ ಮತ್ತು 2 ಚಮಚ ಜೇನುತುಪ್ಪವನ್ನು ಸೇರಿಸಿ.
- ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ.
- ಈಗ ನಿಮ್ಮ ಬಾಳೆಹಣ್ಣಿನ ಹೇರ್ ಪ್ಯಾಕ್ ಸಿದ್ಧವಾಗಿದೆ.

ಇದನ್ನೂ ಓದಿ:  ಬೆಚ್ಚಗಿನ ನೀರಿನಲ್ಲಿ ಇದನ್ನು ಸೇರಿಸಿ ಕುಡಿಯಿರಿ.. 15 ದಿನಗಳಲ್ಲಿ 2 ಕೆಜಿ ತೂಕ ಇಳಿಸಿ!

ಕೂದಲಿಗೆ ಹಚ್ಚುವುದು ಹೇಗೆ?  

- ಬಾಳೆಹಣ್ಣಿನ ಹೇರ್ ಪ್ಯಾಕ್ ಅನ್ನು ನೆತ್ತಿ ಮತ್ತು ಕೂದಲಿನ ಉದ್ದಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ.
- ಸುಮಾರು 20 ರಿಂದ 40 ನಿಮಿಷಗಳ ಕಾಲ ಬಿಡಿ.
- ಶಾಂಪೂ ಮತ್ತು ಕಂಡಿಷನರ್ ಬಳಸಿ ಕೂದಲನ್ನು ತೊಳೆಯಿರಿ.
- ಈ ಪಾಕವಿಧಾನವನ್ನು ವಾರಕ್ಕೆ 2 ಬಾರಿ ಕೂದಲಿಗೆ ಹಚ್ಚಿಕೊಳ್ಳಿ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News