ಸಮಸ್ಯೆಗಳು ಬೆನ್ನುಬಿಡುತ್ತಿಲ್ಲವೇ? ಹಾಗಿದ್ದರೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ

ಕೆಲವು ವಿಚಾರಗಳು ನಂಬಿಕೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು, ಹಾಗೆಯೇ ಧಾರ್ಮಿಕ ಆಚಾರ ವಿಚಾರಗಳಲ್ಲಿ ನಂಬಿಕೆ ಇರಿಸಿ ಈ ಕ್ರಮಗಳನ್ನು ಅನುಸರಿಸಿದರೆ, ಫಲ ಖಂಡಿತಾ ಸಿಗಲಿದೆ.

Written by - Ranjitha R K | Last Updated : Apr 27, 2021, 07:18 PM IST
  • ಸಮಸ್ಯೆಗಳ ಪರಿಹಾರಕ್ಕೆ ಶಾಸ್ತ್ರದಲ್ಲಿ ಕೆಲ ಪರಿಹಾರಗಳಿವೆ
  • ಶೃದ್ದಾ ಭಕ್ತಿಯಿಂದ ನಿಯಮ ಅನುಸರಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆಯಂತೆ
  • ಹಸುವಿನ ಸೇವೆ ಮಾಡಿದರೆ ದೇವತೆಗಳ ಆಶೀರ್ವಾದ ಲಭಿಸುತ್ತದೆ
ಸಮಸ್ಯೆಗಳು ಬೆನ್ನುಬಿಡುತ್ತಿಲ್ಲವೇ? ಹಾಗಿದ್ದರೆ ಈ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ title=
ಸಮಸ್ಯೆಗಳ ಪರಿಹಾರಕ್ಕೆ ಶಾಸ್ತ್ರದಲ್ಲಿ ಕೆಲ ಪರಿಹಾರಗಳಿವೆ (file photo)

ನವದೆಹಲಿ : ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಕೆಲವೊಮ್ಮೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಎಷ್ಟೇ ಪ್ರಯತ್ನ ಪಟ್ಟರೂ, ಏನೇ ಮಾಡಿದರೂ ಸಮಸ್ಯೆಗಳು ಬೆನ್ನು ಬಿಡದಂತೆ ಕಾಡುತ್ತಿರುತ್ತದೆ. ಶಾಸ್ತ್ರ, ಧಾರ್ಮಿಕ ಆಚರಣೆಗಳನ್ನು ನಂಬುವುದಾದರೆ, ನಮ್ಮನ್ನು ಬೆನ್ನು ಬಿಡದಂತೆ ಕಾಡುವ ಸಮಸ್ಯೆಗಳಿಗೂ ಪರಿಹಾರವಿದೆ. ಶೃದ್ಧಾ ಭಕ್ತಿಯಿಂದ ಕೆಲ ನಿಯಮಗಳನ್ನು ಪಾಲಿಸಿದರೆ ಎಂಥಾ ಬಿಕ್ಕಟ್ಟನ್ನು ಕೂಡಾ ತೊಡೆದುಹಾಕಬಹುದು. 

ಕೆಲವು ವಿಚಾರಗಳು ನಂಬಿಕೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು, ಹಾಗೆಯೇ ಧಾರ್ಮಿಕ ಆಚಾರ ವಿಚಾರಗಳಲ್ಲಿ ನಂಬಿಕೆ ಇರಿಸಿ ಈ ಕ್ರಮಗಳನ್ನು ಅನುಸರಿಸಿದರೆ, ಫಲ ಖಂಡಿತಾ ಸಿಗಲಿದೆ. ಈ ನಿಯಮಗಳನ್ನು ಶೃದ್ಧಾ ಭಕ್ತಿಯಿಂದ ಅನುಸರಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎನ್ನುವುದು ಆಸ್ತಿಕರ ಮಾತು.  

ಇದನ್ನೂ ಓದಿ : Hanuman Jayanti 2021: ನಾಳೆ ಚೈತ್ರ ಹುಣ್ಣಿಮೆ ಹಾಗೂ ಹನುಮ ಜಯಂತಿ, ಇಲ್ಲಿದೆ ಮುಹೂರ್ತ, ಪೂಜಾ ವಿಧಿ ಸಂಪೂರ್ಣ ವಿವರ

 ಕೆಲವೊಮ್ಮೆ ನಾವು ಏನೇ ಕೆಲಸ ಮಾಡಲು ಹೋದರೂ ಅಡಚಣೆ ಉಂಟಾಗುತ್ತದೆ. ಎಲ್ಲಾ ಕೆಲಸಗಳು ಅಪೂರ್ಣವಾಗಿಯೇ ತೋರುತ್ತದೆ. ಇಂಥ ಸಮಯದಲ್ಲಿ ಪಂಚಾಂಗವನ್ನು (Panchang) ನೋಡಿ. ರವಿ ಪುಷ್ಯ ನಕ್ಷತ್ರ ಅಥವಾ ಪುಶ್ಯ ನಕ್ಷತ್ರ ಇರುವ ಸಮಯದಲ್ಲಿ ಈ ಪರಿಹಾರಗಳನ್ನು ಮಾಡಿ. ಈ ನಕ್ಷತ್ರದಲ್ಲಿ ಆಲದ ಮರದ ಎಲೆಯನ್ನು ತನ್ನಿ. ಎಲೆಯ ಮೇಲೆ ಅರಿಶಿನದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ಈ ಎಲೆಯನ್ನು ಮನೆಯಲ್ಲಿ ಪೂಜೆ (Pooja) ಮಾಡುವ ಸ್ಥಳದಲ್ಲಿರಿಸಿ. ಕೆಲವೇ ದಿನಗಳಲ್ಲಿ, ಅಪೂರ್ಣವಾಗಿರುವ ಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ. 

ಇದನ್ನೂ ಓದಿ : ಸದಾ ಅನಾರೋಗ್ಯ ಕಾಡುತ್ತಿದ್ದರೆ ಮನೆಯ ವಾಸ್ತು ಮೇಲೊಮ್ಮೆ ಗಮನ ಹರಿಸಿ

- ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದರೆ, ತುಳಸಿ ಎಲೆಗಳನ್ನು (Tulsi Leaves) ತೆಗೆದುಕೊಳ್ಳಿ. ತುಳಸಿ ಎಲೆಯ ಮೇಲೆ ಕುಂಕುಮ ಹಾಕಿ. ನಂತರ ಅದಕ್ಕೆ ಪೂಜೆ ಮಾಡಿ. 
- ಮನೆಯಲ್ಲಿ ಅಡುಗೆ ಮಾಡುವಾಗ ಮೊದಲು ಮಾಡುವ ಆಹಾರ ಅಂದರೆ ಚಪಾತಿ, ದೋಸೆ ಹೀಗೆ ಮೊದಲ ಆಹಾರವನ್ನು ಪ್ರತಿ ದಿನ ಹಸುವಿಗಾಗಿ (Cow)ತೆಗೆದಿಡಿ. ಹಾಗೆಯೇ ಕೊನೆಯಲ್ಲಿ ಮಾಡುವ ಆಹಾರವನ್ನು ನಾಯಿಗೆ ಹಾಕಿ. 
- ಹಸುವಿನ ಸೇವೆಯನ್ನು ಮಾಡಿ. ಹಸುವಿನ ಸೇವೆ ಮಾಡುವುದರಿಂದ ಎಲ್ಲಾ ದೇವತೆಗಳ ಆಶೀರ್ವಾದ ಲಭಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News