Financial Problem Solution : ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ? ಹಾಗಿದ್ರೆ ಇಲ್ಲಿದೆ ಪರಿಹಾರ..!

ಹಾಗಾದ್ರೆ ಆ ಪರಿಹಾರವೇನು? ಅದನ್ನು ಹೇಗೆ ಪಾಲಿಸಬೇಕು? ಯಾವ ದಿವಸದಂದು ಪಾಲಿಸಬೇಕು? ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ

Last Updated : May 18, 2021, 10:54 AM IST
  • ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ
  • ಖರ್ಚು ಕಡಿಮೆಯಾಗಬೇಕು ಅಂದ್ರೆ
  • ಈ ಪರಿಹಾರವನ್ನು ತಪ್ಪದೆ ಪಾಲಿಸಿ
Financial Problem Solution : ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ? ಹಾಗಿದ್ರೆ ಇಲ್ಲಿದೆ ಪರಿಹಾರ..! title=

ನಿಮ್ಮ ಮನೆಯಲ್ಲಿ ಆರ್ಥಿಕ  ಸಮಸ್ಯೆ ಮತ್ತು ಖರ್ಚು ಕಡಿಮೆಯಾಗಬೇಕು ಅಂದ್ರೆ  ನಿಮ್ಮ ಆದಾಯ ಹೆಚ್ಚಾಗಬೇಕು. ಇದಕ್ಕೆ ಈ ಪರಿಹಾರವನ್ನು ತಪ್ಪದೆ ಪಾಲಿಸಿ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ಕೂಡ ಹೆಚ್ಚಾಗುತ್ತದೆ.

ಹಾಗಾದ್ರೆ ಆ ಪರಿಹಾರವೇನು? ಅದನ್ನು ಹೇಗೆ ಪಾಲಿಸಬೇಕು? ಯಾವ ದಿವಸದಂದು ಪಾಲಿಸಬೇಕು? ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ. ಇಲ್ಲಿ ನಾವು ತಿಳಿಸಿದ ಕ್ರಮಗಳನ್ನು ನೀವು ತಪ್ಪದೆ ಪಾಲಿಸಿ ನಿಮ್ಮ ಮನೆ(Home)ಯ ಖರ್ಚು-ವೆಚ್ಚ  ಕಡಿಮೆ ಮಾಡಿ ಆದಾಯವನ್ನ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ : Vastu Shastra: ಮನೆಯಲ್ಲಿರುವ ಈ ವಸ್ತುಗಳಿಂದ ಸಮೃದ್ಧಿಯ ಬದಲು ಹಾನಿಯಾಗಬಹುದು

ನೀವು ಈ ಪರಿಹಾರವನ್ನು ಮೊದಲನೆಯ ದಿವಸದಂದು ಪಾಲಿಸುವಾಗ ಮಂಗಳವಾರ(Tuesday)ದ ದಿವಸದಂದು ಪಾಲಿಸಬೇಕಾಗುತ್ತದೆ ಮೊದಲು ಶುದ್ಧವಾದ ಹಳದಿ ಬಟ್ಟೆಯನ್ನು ತೆಗೆದುಕೊಳ್ಳಿ ಅದರಲ್ಲಿ ಒಂದು ಪ್ಯಾಕೆಟ್ ಕಲ್ಲು ಉಪ್ಪನ್ನು ತೆಗೆದುಕೊಂಡು, ಆ ಕಲ್ಲು ಉಪ್ಪನ್ನು ಪೂರ್ತಿಯಾಗಿ ಹಳದಿ ಬಟ್ಟೆಯ ಮೇಲೆ ಹಾಕಿ ಅದರ ಮೇಲೆ ತಾಮ್ರದ ನಾಣ್ಯವನ್ನು ಇರಿಸಬೇಕು ನಂತರ ಅದನ್ನು ಗಂಟು ಕಟ್ಟಿ ನಿಮ್ಮ ಮನೆಯ ಸಿಂಹ ದ್ವಾರದ ಎದುರು ಇದನ್ನು ನೇತು ಹಾಕಬೇಕು.

ಇದನ್ನೂ ಓದಿ : Daily Horoscope: ದಿನಭವಿಷ್ಯ 18-05-2021 Today astrology

ನಂತರ ಈ ಗಂಟನ್ನು ನೀವು ಮುಂದೆ ಬರುವ ಅಮವಾಸ್ಯೆಯ ದಿವಸದಂದು ಬಿಚ್ಚಿ ಯಾರೂ ಓಡಾಡದೆ ಇರುವ ಜಾಗದಲ್ಲಿ ಬಿಸಾಕಬೇಕು. ನಂತರ ಮತ್ತೆ ಆ ಬಟ್ಟೆಗೆ ಕಲ್ಲುಪ್ಪ(Stone Salt)ನ್ನು ಹಾಕಿ ಗಂಟು ಕಟ್ಟಿ ಮತ್ತೆ ಹಾಗೆ ಮನೆಯ ಮುಂದೆ ನೇತು ಹಾಕಬೇಕು ಈ ರೀತಿ ಪ್ರತಿ ಅಮವಾಸ್ಯೆಯ ದಿವಸದಂದು ಉಪ್ಪನ್ನು ಬದಲಾಯಿಸಿ ಮತ್ತೆ ಹೀಗೆ ಬಟ್ಟೆಯಲ್ಲಿ ಕಲ್ಲುಪ್ಪನ್ನು ಹಾಕಿ ತಾಮ್ರದ ನಾಣ್ಯವನ್ನು ಇರಿಸಿ ಮನೆ ಮುಂದೆ ನೇತು ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ದುಷ್ಟ ಶಕ್ತಿಯ ಪ್ರಭಾವಾಗಲಿ ಅಥವಾ ಪ್ರವೇಶ ಅಗಲಿ ಆಗುವುದಿಲ್ಲ ಮತ್ತು ನಿಮ್ಮ ಖರ್ಚುಗಳು ಕಡಿಮೆಯಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ : Astrology Prediction: ನಿಜ ಸಾಬೀತಾದ ಜೋತಿಷಿಗಳ ಭವಿಷ್ಯವಾಣಿ

ಇನ್ನು ನಿಮ್ಮ ಮನೆಯಲ್ಲಿ ಖರ್ಚು ಕಡಿಮೆ(Financial Problem) ಆಗಬೇಕು ಅಂದರೆ ಈ ರೀತಿ ಮಾಡಿ ಮನೆಯಲ್ಲಿ ವಿಪರೀತ ಖರ್ಚು ಎಷ್ಟು ಮಾಡಿದರೂ ಈ ರೀತಿ ಹಣ ಖರ್ಚಾಗುತ್ತಲೇ ಇದೆ ಅನ್ನುವವರು, ಲಿಂಗ ಉದ್ಭವ ಆಗುತ್ತಿರುವಂತಹ ಪಟವನ್ನು ಮನೆಯಲ್ಲಿ ಇರಿಸಿ. ಇದರಿಂದ ಶಿವನ ಅನುಗ್ರಹ ಆಗುತ್ತದೆ ಮತ್ತು ಖರ್ಚುಗಳು ಕೂಡ ಅಂದರೆ ವಿನಾಕಾರಣ ಖರ್ಚುಗಳು ಕೂಡ ಕಡಿಮೆಯಾಗುತ್ತದೆ. ಹಣದ ಪ್ರತೀಕ ಅಥವಾ ಸಿರಿ ಸಂಪತ್ತಿನ ಪ್ರತೀಕ ಕುಬೇರ ಆಗಿರುತ್ತಾರೆ, ನೀವು ಕುಬೇರನ ಅನುಗ್ರಹ ಪಡೆಯುವುದಕ್ಕಾಗಿ ಬಿಲ್ವಪತ್ರೆಯ ಗಿಡವನ್ನು ದೇವಸ್ಥಾನದ ಸುತ್ತಮುತ್ತ ಜಾಗದಲ್ಲಿ ನೆಡಬೇಕು.

ಇದನ್ನೂ ಓದಿ : ದೇವಸ್ಥಾನ ಮಾತ್ರವಲ್ಲ ,ಈ ಸ್ಥಳಗಳಿಗೂ ಚಪ್ಪಲಿ ಧರಿಸಿಕೊಂಡು ಹೋಗಬಾರದು

ಇನ್ನೂ ನಿಮ್ಮ ಮನೆಯ ಸುತ್ತಮುತ್ತ ಅಂದರೆ ನಿಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಬಾಳೆ ಗಿಡ(Banana Tree)ವನ್ನು ಬೆಳೆಸುವುದರಿಂದ ಕೂಡ ಮತ್ತು ಆ ಗಿಡದಿಂದ ಬೆಳೆದ ಬಾಳೆ ಹಣ್ಣನ್ನು ಪ್ರತ್ಯೇಕವಾಗಿ ವಿಧಿ ತಿಥಿಯ ದಿವಸದಂದು ವೃದ್ಧರಿಗೆ ಅಥವಾ ಬ್ರಾಹ್ಮಣರಿಗೆ ಅಥವ ನಿರ್ಗತಿಕರಿಗೆ ಬಾಳೆಹಣ್ಣನ್ನು ದಾನ ಮಾಡುವುದರಿಂದ ನಿಮಗೆ ಕುಬೇರನ ಅನುಗ್ರಹ ಆಗುತ್ತದೆ.

ಇದನ್ನೂ ಓದಿ : Monday Remedies: ಸೋಮವಾರದಂದು ಅಪ್ಪಿ-ತಪ್ಪಿಯೂ ಮಾಡದಿರಿ ಈ ಕೆಲಸ, ಇಲ್ಲವೇ ಪಶ್ಚಾತ್ತಾಪ ಪಡಬೇಕಾಗಬಹುದು

ಕುಬೇರ ದೇವನಿಗೆ ಬಾಳೆಹಣ್ಣು(Banana ) ಅಥವಾ ಬಾಳೆ ಗಿಡ ಎಂದರೆ ಪ್ರಿಯವಾದದ್ದು ಆದ್ದರಿಂದ ಕುಬೇರನ ಅನುಗ್ರಹಕ್ಕಾಗಿ ನೀವು ತಪ್ಪದೆ ಈ ಪರಿಹಾರವನ್ನು ಪಾಲಿಸಿ. ಕುಬೇರ ದೇವನಿಗೆ ಬಾಳೆಹಣ್ಣು ಮತ್ತು ಬಾಳೆ ಗಿಡ ಎಂದರೆ ಪ್ರಿಯವಾದದ್ದು. ಆದ್ದರಿಂದ ಕುಬೇರ ದೇವರ ಅನುಗ್ರಹಕ್ಕಾಗಿ ಈ ಕೆಲವೊಂದು ಪರಿಹಾರಗಳನ್ನು ನೀವೂ ತಪ್ಪದೆ ಪಾಲಿಸಿ ಹಾಗೂ ನಿಮ್ಮ ಮನೆಯಲ್ಲಿ ಉಂಟಾಗುತ್ತಿರುವ ಅನವಶ್ಯಕ ಖರ್ಚನ್ನು ಕಡಿಮೆ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ಇದನ್ನೂ ಓದಿ : Kedarnath Dham: ಭಕ್ತಾಧಿಗಳಿಲ್ಲದೆ ತೆರೆದ ಕೇದಾರನಾಥ ಧಾಮ್, ಭಕ್ತರಿಗೆ ಆನ್‌ಲೈನ್‌ನಲ್ಲಿ 'ದರ್ಶನ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News