ಬೆಂಗಳೂರು : ಬೇಸಿಗೆ (Summer) ಪ್ರಾರಂಭವಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಬಿಸಿಲ ಧಗೆ. ಕೆಲವೇ ನಿಮಿಷಗಳಲ್ಲಿ ಚರ್ಮ ಟ್ಯಾನ್ (Skin tanning) ಆಗಿ ಬಿಡುತ್ತದೆ. ಸ್ಕಿನ್ ಟ್ಯಾನ್ ಆಗುತ್ತದೆ ಎಂಬ ಕಾರಣಕ್ಕೆ ಮನೆಯಿಂದ ಹೊರ ಬರದೆ ಇರಲು ಸಾಧ್ಯವಿಲ್ಲ. ಸುರ್ಯನ ಬಿಸಿಲಿನಿಂದ ತಪ್ಪಿಸಿಕೊಳ್ಳಲು, ಕೆಲವರು ಸಾಕ್ಸ್ ಮತ್ತು ಸ್ಟಾಲ್‌ಗಳನ್ನು ಬಳಸುತ್ತಾರೆ. ಆದರೆ ಇವೆಲ್ಲ ಪ್ರಯೋಜನಕ್ಕೆ ಬರುವುದು ಬಹಳ ವಿರಳ. ಆದರೆ ಟ್ಯಾನಿಂಗ್ ಸಮಸ್ಯೆಗೆ ನಿಮಿಷಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ಅದು ಕೂಡಾ ನಿಮ್ಮ ಮನೆಯುಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು.
ಟೊಮ್ಯಾಟೊ (Tomato) ಮತ್ತು ನಿಂಬೆಹಣ್ಣು (Lemon) ಎಲ್ಲಾ ಮನೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಇವುಗಳ ಬಳಕೆಯಿಂದ ಟ್ಯಾನಿಂಗ್ ನಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಈ ಲಿಕ್ಷಿಡ್ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಬಳಸಬಹುದು. ಮುಖಕ್ಕೆ ಹಚ್ಚಿ 15 ನಿಮಿಸಗಳ ನಂತರ ಮುಖವನ್ನು ತೊಳೆದರೆ ಟ್ಯಾನಿಂಗ್ ಕಡಿಮೆಯಾಗುತ್ತದೆ.
ಇದನ್ನೂ ಓದಿ : Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ
ಟೊಮೆಟೊ-ನಿಂಬೆ ಮಿಶ್ರಣವನ್ನು ಈ ರೀತಿ ಮಾಡಿ.
ಟೊಮೆಟೊ ಕತ್ತರಿಸಿ ಅದರಿಂದ ಒಂದು ಚಮಚದಷ್ಟು ರಸವನ್ನು ತೆಗೆದುಕೊಳ್ಳಿ. ಈ ಟೊಮೆಟೊ ರಸಕ್ಕೆ 4 ಹನಿ ನಿಂಬೆ ರಸವನ್ನು (Lemon Juice)ಮಿಶ್ರಣ ಮಾಡಿದರೆ ನಿಮ್ಮ ಫೇಸ್ ಮಾಸ್ಕ್ ತಯಾರಾಗುತ್ತದೆ. ಪೇಸ್ ಪ್ಯಾಕ್ (Face pack)ಹಚ್ಚುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಪ್ಯಾಕ್ ಅನ್ನು ಹಚ್ಚಿ. 15 ನಿಮಿಷ ಬಿಟ್ಟು ಮುಖ ತೊಳೆದರೆ ಮುಖ ಸ್ವಚ್ಛವಾಗುತ್ತದೆ.
ಹಿಟ್ಟು ಮತ್ತು ರೋಸ್ ವಾಟರ್ : ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ನೀವು ಗೋಧಿ ಹಿಟ್ಟು ಮತ್ತು ರೋಸ್ ವಾಟರ್ (Rose water) ಅನ್ನು ಬಳಸಬಹುದು. ಗೋಧಿ ಹಿಟ್ಟು, ಅರಿಶಿನ (Termeric) ಮತ್ತು ರೋಸ್ ವಾಟರ್ ಈ ಮೂರು ವಸ್ತುಗಳನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ನಂತರ ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಿ.
ಇದನ್ನೂ ಓದಿ : Ramadan 2021 ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದರೆ ರೋಜಾ ಮುರಿಯುವುದಿಲ್ಲ: ಫತ್ವಾ
ನೆನಪಿರಲಿ ನಿಮಗೆ ಚರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ, ಈ ಉಪಾಯಗಳನ್ನು ಬಳಸುವುದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.