Adhika Maas 2023: ಹಲವು ವರ್ಷಗಳ ಬಳಿಕ ಈ ಬಾರಿ ಶ್ರಾವಣ ಮಾಸದಲ್ಲಿರಲಿವೆ 8 ಸೋಮವಾರಗಳು

Malmas 2023: ಹಿಂದೂ ಪಂಚಾಂಗದ ಪ್ರಕಾರ, 2023 ವರ್ಷವು ಅತ್ಯಂತ ಪ್ರಮುಖ ಮತ್ತು ಅಪರೂಪದ ವರ್ಷವಾಗಿರಲಿದೆ. ಹಿಂದೂ ಪಂಚಾಗದ ಪ್ರಕಾರ, ಈ ವರ್ಷವು 12 ರ ಬದಲಿಗೆ 13 ತಿಂಗಳುಗಳದ್ದಾಗಿರುತ್ತದೆ. ಈ ಸ್ಥಿತಿಯನ್ನು ಅಧಿಕ ಮಾಸ್  ಎಂದು ಕರೆಯಲಾಗುತ್ತದೆ.  

Written by - Nitin Tabib | Last Updated : Jan 11, 2023, 10:58 PM IST
  • ಇದರಿಂದಾಗಿ ಚಾತುರ್ಮಾಸವು 5 ತಿಂಗಳುಗಳಾಗಿರುತ್ತದೆ.
  • ಇದೆ ವೇಳೆ, ಈ ಬಾರಿ ವರ್ಷದ ಶ್ರಾವಣ ಮಾಸ ಒಟ್ಟು ಎರಡು ತಿಂಗಳುಗಳ
  • ಅವಧಿಯದ್ದಾಗಿರುತ್ತದೆ ಮತ್ತು 8 ಸೋಮವಾರ ಇರಲಿವೆ.
Adhika Maas 2023: ಹಲವು ವರ್ಷಗಳ ಬಳಿಕ ಈ ಬಾರಿ ಶ್ರಾವಣ ಮಾಸದಲ್ಲಿರಲಿವೆ 8 ಸೋಮವಾರಗಳು title=
Adhik Maas 2023

Hindu Panchang 2023: ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ವಿಕ್ರಮ್ ಸಂವತ್ಸ 2080 ರಲ್ಲಿ ಇರಲಿದೆ. ಹಿಂದೂ ಪಂಚಾಂಗ ಅಥವಾ ಕ್ಯಾಲೆಂಡರ್ ಪ್ರಕಾರ ಈ ವರ್ಷವು ಬಹಳ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಈ ವರ್ಷ ಒಟ್ಟು 13 ತಿಂಗಳುಗಳು ಇರಲಿವೆ. ಈ ಸ್ಥಿತಿಯನ್ನು ಅಧಿಕ ಮಾಸ್, ಮಲ್ ಮಾಸ್ ಅಥವಾ ಪುರುಷೋತ್ತಮ ಮಾಸ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಚಾತುರ್ಮಾಸವು 5 ತಿಂಗಳುಗಳಾಗಿರುತ್ತದೆ. ಇದೆ ವೇಳೆ, ಈ ಬಾರಿ ವರ್ಷದ ಶ್ರಾವಣ ಮಾಸ ಒಟ್ಟು ಎರಡು ತಿಂಗಳುಗಳ ಅವಧಿಯದ್ದಾಗಿರುತ್ತದೆ ಮತ್ತು 8 ಸೋಮವಾರ ಇರಲಿವೆ. ಈ ಹಿಂದೆ 2004ರಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ 19 ವರ್ಷಗಳ ನಂತರ ಈ ಅಪರೂಪದ ಸನ್ನಿವೇಶ ಮತ್ತೆ ಎದುರಾಗಿದೆ.

ಉಪವಾಸ-ಹಬ್ಬಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಅಧಿಕ ಮಾಸದಂದು ಉಪವಾಸ ಮತ್ತು ಹಬ್ಬ ಹರಿದಿನಗಳಲ್ಲಿ ಬದಲಾವಣೆಯಾಗಲಿದೆ. ಹಿಂದೂ ಪಂಚಾಂಗದ ಬಗ್ಗೆ ಹೇಳುವುದಾದರೆ, ಪ್ರತಿ ಮೂರನೇ ವರ್ಷದಲ್ಲಿ ಹೆಚ್ಚುವರಿ ತಿಂಗಳು ಇರುತ್ತದೆ, ಇದನ್ನು ಮಲ್ಮಾಸ್ ಎಂದು ಕರೆಯಲಾಗುತ್ತದೆ. ಸೌರ ವರ್ಷವು 365 ದಿನಗಳು ಮತ್ತು 6 ಗಂಟೆಗಳು ಮತ್ತು ಚಂದ್ರ ವರ್ಷವನ್ನು 354 ದಿನಗಳು ಎಂದು ಪರಿಗಣಿಸಲಾಗುತ್ತದೆ.

ಶ್ರಾವಣ ಮಾಸ
ಸಾಮಾನ್ಯವಾಗಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ 4 ಅಥವಾ 5 ಸೋಮವಾರಗಳಿರುತ್ತವೆ, ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಸೋಮವಾರದಂದು 8 ಉಪವಾಸಗಳು ಇರಲಿವೆ. ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಶ್ರಾವಣ ಕೃಷ್ಣ ಪಕ್ಷವು ಜುಲೈ 4 ರಿಂದ 17 ರವರೆಗೆ ಮತ್ತು ಅದರ ನಂತರ ಜುಲೈ 18 ರಿಂದ ಆರಂಭವಾಗಲಿದೆ. ಇದೇ ವೇಳೆ. ಆಗಸ್ಟ್ 16 ರಂದು, ಮಲ್ಮಾಸ್ನ ಅಮಾವಾಸ್ಯೆ ಇರಲಿದೆ. ಈ ದಿನ ಅಧಿಕ ಮಾಸ ಮುಗಿಯಲಿದೆ. ಇದರ ನಂತರ, ಶ್ರಾವಣ ಶುಕ್ಲ ಪಕ್ಷವು ಆರಂಭವಾಗಲಿದೆ, ಇದು ಆಗಸ್ಟ್ 30 ರಂದು ಶ್ರಾವಣ ಹುಣ್ಣಿಮೆಯ ವರೆಗೆ ಇರಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಶ್ರಾವಣದಲ್ಲಿ  8 ಸೋಮವಾರಗಳು ಬೀಳಲಿವೆ.

ಮಲ್ಮಾಸ್
ಹಿಂದೂ ಪಂಚಾಂಗದಲ್ಲಿ, ಸೌರ ವರ್ಷ ಮತ್ತು ಚಂದ್ರನ ವರ್ಷದ ನಡುವಿನ ದಿನಗಳ ವ್ಯತ್ಯಾಸವನ್ನು ಸಮೀಕರಿಸಲು ಪ್ರತಿ ಮೂರನೇ ವರ್ಷಕ್ಕೆ ಚಂದ್ರನ ತಿಂಗಳು ಸೇರಿಸಲಾಗುತ್ತದೆ. ಇದನ್ನು ಮಲ್ಮಾಸ್ ಎಂದು ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ ಯಾವುದೇ ರೀತಿಯ ಧಾರ್ಮಿಕ ಮತ್ತು ಮಂಗಳಕರ ಕಾರ್ಯಗಳನ್ನು ಮಲ್ಮಾಗಳಲ್ಲಿ ನಿಷೇಧಿಸಲಾಗಿದೆ ಎಂಬುದು ನಿಮಗೆಲ್ಲ ತಿಳಿದ ವಿಷಯವಾಗಿದೆ. ಈ ವರ್ಷ ಮಲ್ಮಾಸ್ 18 ಜುಲೈ 2023 ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ-Rahu Gochar 2023: ಮಂಗಳನ ರಾಶಿಯಲ್ಲಿ ರಾಹು ಗೋಚರ, ಈ ರಾಶಿಗಳ ಜನರ ಜೀವನದಲ್ಲಿ ಹಣದ ಸುರಿಮಳೆ

ಚಾತುರ್ಮಾಸ್
ಅಧಿಕ ಮಾಸ ಬಂದಿರುವ ಕಾರಣ 4 ತಿಂಗಳ ಚಾತುರ್ಮಾಸ್ ಈ ವರ್ಷ 5 ತಿಂಗಳುಗಳಾಗಿರುತ್ತದೆ. ಈ ಬಾರಿ ವಿಷ್ಣುವು 4 ತಿಂಗಳ ಬದಲು 5 ತಿಂಗಳು ಯೋಗ ನಿದ್ರೆಗೆ ಜಾರಲಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Lucky Zodiac Signs: ಇತರರ ಪಾಲಿಗೆ ತುಂಬಾ ಲಕ್ಕಿ ಇಂತಹ ಜನ, ವಿವಾಹದ ಬಳಿಕ ಸಂಗಾತಿಯ ಅದೃಷ್ಟವನ್ನೇ ಬದಲಿಸುತ್ತಾರೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News