ಈ 5 ಸ್ಥಳಗಳಲ್ಲಿ ಮರೆತೂ ಸಹ ತುಳಸಿ ಗಿಡವನ್ನು ನೆಡಬೇಡಿ

Tulsi Plant Rules: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ. ಆದರೆ, ಈ ತುಳಸಿ ಗಿಡ ನೆಡುವಾಗ ಕೆಲವು ನಿಯಮಗಳನ್ನು ನೆನಪಿನಲ್ಲಿಡಬೇಕು. ಇಲ್ಲವಾದರೆ, ಭಾರೀ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

Written by - Yashaswini V | Last Updated : Aug 6, 2022, 07:34 AM IST
  • ವಾಸ್ತು ಶಾಸ್ತ್ರದ ಪ್ರಕಾರ 5 ಸ್ಥಳಗಳಲ್ಲಿ ತುಳಸಿ ಗಿಡ ನೆಡುವುದನ್ನು ನಿಷೇಧಿಸಲಾಗಿದೆ.
  • ಆ ನಿಷೇಧಿತ ಸ್ಥಳಗಳಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
  • ಇದರಿಂದಾಗಿ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಈ 5 ಸ್ಥಳಗಳಲ್ಲಿ ಮರೆತೂ ಸಹ ತುಳಸಿ ಗಿಡವನ್ನು ನೆಡಬೇಡಿ title=
Tulsi plant rules

ತುಳಸಿ ಸಸ್ಯ ನೆಡುವ ನಿಯಮಗಳು: ಹಿಂದೂ ಸಂಸ್ಕ್ರತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ವಿವಿಧ ರೋಗಗಳಿಂದ ರಕ್ಷಿಸುವಂತಹ ಆಯುರ್ವೇದ ಶಕ್ತಿಯನ್ನು ಹೊಂದಿರುವ ತುಳಸಿ ಸಸ್ಯವು ದೈವಿಕ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಸನಾತನ ಧರ್ಮದ ಪ್ರಕಾರ ತುಳಸಿ ಸಸ್ಯ ಇಲ್ಲದೆ ಯಾವುದೇ ಮನೆ ಇಲ್ಲ. ಆದರೆ ತುಳಸಿ ಗಿಡ ನೆಡಲು ಕೆಲವು ವಿಶೇಷ ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ 5 ಸ್ಥಳಗಳಲ್ಲಿ ತುಳಸಿ ಗಿಡ ನೆಡುವುದನ್ನು ನಿಷೇಧಿಸಲಾಗಿದೆ. ಆ ನಿಷೇಧಿತ ಸ್ಥಳಗಳಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದಾಗಿ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯ ಯಾವ ಸ್ಥಳಗಳಲ್ಲಿ ತುಳಸಿ ಸಸ್ಯವನ್ನು ನೆಡಬಾರದು ಎಂದು ತಿಳಿಯೋಣ...

ಈ ಪವಿತ್ರ ಸಸ್ಯವನ್ನು ಎಂದಿಗೂ ನೆಲದಲ್ಲಿ ನೆಡಬಾರದು:
ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಸಸ್ಯ ಎಂದು ನಂಬಲಾಗಿದೆ. ಈ ಸಸ್ಯವನ್ನು ಎಂದಿಗೂ ನೆಲದಲ್ಲಿ ನೆಡಬಾರದು. ಬದಲಾಗಿ, ನೀವು ತುಳಸಿಯನ್ನು ಮಡಕೆ, ಬಕೆಟ್ ಅಥವಾ ಸ್ಟ್ಯಾಂಡ್‌ನಲ್ಲಿ ನೆಡಬಹುದು. 

ಶಿವನ ಮೂರ್ತಿಯೊಂದಿಗೆ ತುಳಸಿಯನ್ನು ನೆಡಬೇಡಿ:
ತುಳಸಿ ವಿಷ್ಣು ಪ್ರಿಯೆ. ವಾಸ್ತು ಶಾಸ್ತ್ರದ ಪ್ರಕಾರ, ಅಪ್ಪಿತಪ್ಪಿಯೂ ತುಳಸಿ ಗಿಡವನ್ನು  ಶಿವ ಮತ್ತು ಗಣೇಶನ ವಿಗ್ರಹ ಅಥವಾ ಚಿತ್ರದೊಂದಿಗೆ ನೆಡಬಾರದು. ಹೀಗೆ ಮಾಡುವುದರಿಂದ ಶಿವನು ಅಸಮಾಧಾನಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- ಮಂಗಳ ಗೋಚರ: ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ- 4 ರಾಶಿಯವರಿಗೆ ಗೋಲ್ಡನ್ ಡೇಸ್ ಆರಂಭ

ಕತ್ತಲೆಯ ಭಾಗದಲ್ಲಿ ತುಳಸಿಯನ್ನು ಎಂದಿಗೂ ನೆಡಬೇಡಿ:
ತುಳಸಿ ಗಿಡವನ್ನು ಯಾವಾಗಲೂ ತೆರೆದ ಮತ್ತು ಸ್ವಚ್ಛವಾದ ಸ್ಥಳದಲ್ಲಿ ನೆಡಬೇಕು. ಭಾರತೀಯ ಗ್ರಂಥಗಳ ಪ್ರಕಾರ ಈ ಸಸ್ಯವನ್ನು ಕತ್ತಲಲ್ಲಿ ನೆಡಬಾರದು. ಹೀಗೆ ಮಾಡುವುದರಿಂದ ಕತ್ತಲೆಯಲ್ಲಿ ನೆಟ್ಟ ಗಿಡವು ನಿಮ್ಮ ಕುಟುಂಬದಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡಲು ಪ್ರಾರಂಭಿಸುತ್ತದೆ ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ಮುಳ್ಳಿನ ಗಿಡಗಳ ಬಳಿ ತುಳಸಿ ನೆಡಬೇಡಿ:
ತುಳಸಿ ಗಿಡವನ್ನು ಮಮತಾಮಯಿ ತಾಯಿ ಮಹಾಲಕ್ಷ್ಮಿಯ ಪ್ರತಿ ರೂಪ ಎಂದು ಪರಿಗಣಿಸಲಾಗುತ್ತದೆ. ಆದರೆ, ತುಳಸಿ ಗಿಡವನ್ನು ಮುಳ್ಳಿನ ಗಿಡಗಳೊಂದಿಗೆ ನೆಡುವುದರಿಂದ ಸಸ್ಯವು ಧನಾತ್ಮಕ ಶಕ್ತಿಯ ಬದಲಿಗೆ ನಕಾರಾತ್ಮಕ ಶಕ್ತಿಯ ವಾಹಕವಾಗುತ್ತದೆ. ಇದರ ಬದಲು ತುಳಸಿ ಗಿಡದ ಬಳಿ ಬೇಕಿದ್ದರೆ ಬಾಳೆ ಗಿಡ ನೆಡಬಹುದು. ಈ ಮರವು ವಿಷ್ಣುವಿಗೆ ಸಮರ್ಪಿತವಾಗಿದೆ. ಹಾಗಾಗಿ ತುಳಸಿ ಸಸ್ಯದೊಂದಿಗೆ ಬಾಳೆಗಿಡ ನೆಡುವುದರಿಂದ ತಾಯಿ ಲಕ್ಷ್ಮಿ ಆಶೀರ್ವಾದ ಪಡೆಯಬಹುದು ಎನ್ನಲಾಗುತ್ತದೆ. 

ಇದನ್ನೂ ಓದಿ- ಈ 3 ರಾಶಿಯ ಜನರಿಗೆ ಮುಂದಿನ ವಾರದಿಂದ ತೆರೆಯಲಿದೆ ಅದೃಷ್ಟದ ಬಾಗಿಲು

ಛಾವಣಿಯ ಮೇಲೆ ತುಳಸಿಯನ್ನು ನೆಡಬಾರದು:
ನಮ್ಮಲ್ಲಿ ಹಲವರು ಮನೆಯ ಛಾವಣಿಯ ಮೇಲೆ ತುಳಸಿ ಸಸ್ಯವನ್ನು ನೆಡುತ್ತಾರೆ. ಆದರೆ, ವಾಸ್ತು ಪ್ರಕಾರ, ತುಳಸಿ ಗಿಡವನ್ನು ಮನೆಯ ಮೇಲ್ಛಾವಣಿಯ ಮೇಲೆ ಎಂದಿಗೂ ನೆಡಬಾರದು. ಮೇಲ್ಚಾವಣಿಯ ಮೇಲೆ ತುಳಸಿ ಗಿಡವನ್ನು ನೆಡುವುದರಿಂದ ಆ ಸಸ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇದರಿಂದಾಗಿ ಅದರ ಧನಾತ್ಮಕ ಶಕ್ತಿಯು ಸಹ ಕೊನೆಗೊಳ್ಳುತ್ತದೆ. ಮನೆಯ ಮೇಲ್ಛಾವಣಿಯಲ್ಲಿ ತುಳಸಿ ನೆಟ್ಟರೆ, ಬಿರುಗಾಳಿ, ಮಳೆ, ಬಲವಾದ ಬಿಸಿಲು ಮತ್ತು ಚಳಿಯಿಂದ ಆ ಸಸ್ಯವು ಅಕಾಲಿಕವಾಗಿ ಒಣಗುತ್ತದೆ, ಇದರಿಂದ ಇಡೀ ಕುಟುಂಬವು ತೊಂದರೆಗೊಳಗಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ತುಳಸಿ ಸಸ್ಯವನ್ನು ನೆಡುವಾಗ ಇಂತಹ ತಪ್ಪುಗಳಾಗದಂತೆ ನಿಗಾವಹಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News