Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ

Mangal Transit In Taurus: ಮಂಗಳ ಸಂಚಾರ ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ರಾಶಿಯಿಂದ ಮಂಗಳವು ಎರಡನೇ ಮನೆಯಲ್ಲಿ ಸಾಗುತ್ತಿದೆ. ಹೀಗಾಗಿ ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರ ವಿಸ್ತರಿಸುತ್ತದೆ. ನಿಮ್ಮ ಕುಟುಂಬ ಜೀವನ ಅದ್ಭುತವಾಗಿರುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ. ಆದ್ದರಿಂದ ಈ ರಾಶಿಯವರಿಗೆ ಮಂಗಳನ ಸಂಕ್ರಮಣ ಒಳ್ಳೆಯದು.

Written by - Bhavishya Shetty | Last Updated : Nov 24, 2022, 09:23 AM IST
    • ಇದೇ ತಿಂಗಳ 13ರಂದು ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶಿಸಿದೆ
    • ಮಾರ್ಚ್ 13, 2023 ರವರೆಗೆ ಇದೇ ರಾಶಿಯಲ್ಲಿ ಸಂಚಾರ ನಡೆಸಲಿದೆ
    • ವೃಷಭ ರಾಶಿಯಲ್ಲಿನ ಮಂಗಳ ಸಂಚಾರವು ಕೆಲ ರಾಶಿಗೆ ಹಣ ಲಾಭವನ್ನು ನೀಡುತ್ತದೆ
Mangal Transit In Taurus: 120 ದಿನ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ 3 ರಾಶಿಯವರು ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಖಚಿತ title=
mars planet

Mangal Transit In Taurusಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದನ್ನು ರೆಡ್ ಪ್ಲಾನೆಟ್, ಕ್ರೂರ ಗ್ರಹ ಎಂದೂ ಕರೆಯುತ್ತಾರೆ. ಇದೇ ತಿಂಗಳ 13ರಂದು ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶಿಸಿದ್ದು, ಮಾರ್ಚ್ 13, 2023 ರವರೆಗೆ ಇದೇ ರಾಶಿಯಲ್ಲಿ ಸಂಚಾರ ನಡೆಸಲಿದೆ. ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಹೀಗಿರುವಾಗ ವೃಷಭ ರಾಶಿಯಲ್ಲಿನ ಮಂಗಳ ಸಂಚಾರವು ಕೆಲವೊಂದು ರಾಶಿಗೆ ಹಠಾತ್ ಹಣದ ಲಾಭವನ್ನು ನೀಡುತ್ತದೆ. ವಿಶೇಷವಾಗಿ ಮೂರು ರಾಶಿಗಳಿಗೆ ವೃತ್ತಿಜೀವನದ ಪ್ರಗತಿಯನ್ನು ನೀಡುತ್ತದೆ.

ಇದನ್ನೂ ಓದಿ: 2023ರಲ್ಲಿ ಈ ಮೂರು ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ

ಮೇಷ: ಮಂಗಳ ಸಂಚಾರ ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ರಾಶಿಯಿಂದ ಮಂಗಳವು ಎರಡನೇ ಮನೆಯಲ್ಲಿ ಸಾಗುತ್ತಿದೆ. ಹೀಗಾಗಿ ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರ ವಿಸ್ತರಿಸುತ್ತದೆ. ನಿಮ್ಮ ಕುಟುಂಬ ಜೀವನ ಅದ್ಭುತವಾಗಿರುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ. ಆದ್ದರಿಂದ ಈ ರಾಶಿಯವರಿಗೆ ಮಂಗಳನ ಸಂಕ್ರಮಣ ಒಳ್ಳೆಯದು.

ವೃಷಭ: ಮಂಗಳ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಮಾಡಿದ ಕೆಲಸಗಳಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಈ ಸಮಯದಲ್ಲಿ ನಿಮ್ಮ ಸ್ಥೈರ್ಯವು ಆತ್ಮವಿಶ್ವಾಸದ ಜೊತೆಗೆ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಜೀವನ ಸಂಗಾತಿಯ ಬೆಂಬಲ ಲಭ್ಯವಿದೆ. ಆರೋಗ್ಯ ಚೆನ್ನಾಗಿರುತ್ತದೆ.

ಇದನ್ನೂ ಓದಿ: ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ

ಮಕರ: ಮಕರ ರಾಶಿಯವರಿಗೆ ಮಂಗಳ ಸಂಕ್ರಮಣ ಒಳ್ಳೆಯದು. ನಿಮ್ಮ ಜಾತಕದಲ್ಲಿ ಮಂಗಳವು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದಾನೆ. ಮಂಗಳವು ಐದನೇ ಮನೆಯಲ್ಲಿ ಹಿಮ್ಮುಖ ಸ್ಥಾನದಲ್ಲಿ ಮಾತ್ರ ಸಾಗುತ್ತದೆ. ಹೀಗಿರುವಾಗ ಮಕ್ಕಳಿಲ್ಲದ ದಂಪತಿಗೆ ಸಂತಾನ ಪ್ರಾಪ್ತಿಯ ಸಂತಸದ ಸುದ್ದಿಯನ್ನು ನೀಡಬಹುದು. ವಿದೇಶಕ್ಕೆ ಹೋಗಲು ಬಯಸುವವರ ಕನಸು ನನಸಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಉದ್ಯೋಗಿಗಳಿಗೂ ಈ ಸಮಯ ಉತ್ತಮವಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News