ತುಮಕೂರು: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆಗೆ NSUI ಕಾರ್ಯಕರ್ತರ ಮುತ್ತಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಕುವೆಂಪು, ಬಸವಣ್ಣ ಅವರನ್ನ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರಿನ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಈ ಒಂದು ಪ್ರತಿಭಟನೆಯನ್ನ ಬೇರೊಂದು ರಾಜಕೀಯ ಆ್ಯಂಗಲ್ ಕೊಟ್ಟು 24 ವಿದ್ಯಾರ್ಥಿಗಳನ್ನ ಬಂಧಿಸಿದ್ದಾರೆ. ಮೊದಲ ಸಲ ಎಂಟು ಜನ, ನಂತರ 15 ಜನ ಸೇರಿ ಒಟ್ಟು 24 ಜನರನ್ನ ಬಂಧಿಸಿದ್ದಾರೆ. ಐದು ದಿನದ ನಂತರ ಇಂದು ಕೇಸ್ ದಾಖಲು ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಪದವೀಧರ ಕ್ಷೇತ್ರದ ಚುನಾವಣೆ :'ಎಲ್ಲಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ನನಗಿದೆ'
ಹಲ್ಲೆ ಮಾಡಿದವರು ಅವರು, ಅವರ ಮೇಲೂ ಇದೇ ತರಹ ಕೇಸ್ ಗಳನ್ನು ಹಾಕ್ತಾರಾ? ಈ ಒಂದೇ ವಾರದಲ್ಲಿ ನಮ್ಮ ಅಮಾಯಕ ಸ್ಟೂಡೆಂಟ್ಸ್‌ನ ರಿಲೀಸ್ ಮಾಡಬೇಕು. ಸೆಷನ್ಸ್ ಕೋರ್ಟ್‌ನಲ್ಲಿ ಆದ್ರೂ, ಜಡ್ಜ್‌ಮೆಂಟ್ ಆಗಿ ಅವರನ್ನು ರಿಲೀಸ್ ಮಾಡಬೇಕು. ಬಸವಣ್ಣ, ಕುವೆಂಪು ಅವರನ್ನು ಅವಮಾನ ಮಾಡಿದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆಲ್ಲ ಈ ಶಿಕ್ಷೆ ಬರಬಾರದಾಗಿತ್ತು. ನಮ್ಮ ಕೆಪಿಸಿಸಿ ಲೀಗಲ್ ಸೆಲ್ ಮತ್ತು ಎಂಎಲ್‌ಸಿ ರಾಜೇಂದ್ರಣ್ಣ ರವರು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
NSUI ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರ, ಮೊನ್ನೆಯಿಂದಲೇ ಎಲ್ಲಾ ವಿಡಿಯೋಗಳು ಸಿಕ್ಕಿವೆ. ನಾವು ಪ್ರಶ್ನೆ ಮಾಡಿದ್ದೇವೆ. ಎಲ್ಲಾ ಫಾಲ್ಸ್ ಆಗಿ ಪ್ರೂ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಕಡೆಗೂ ಅದು ಹೋಲ್ಡ್ ಆಗಲಿಲ್ಲ. ಅದನ್ನ ಎಬಿವಿಪಿ ಸ್ಟೂಡೆಂಟ್ಸ್ ಮೇಲೂ ಕೇಸ್ ಹಾಕಿದ್ದಾರೆ. ಆದ್ರೆ ಕೆಲವರ ಮೇಲೆ, ಅದರಲ್ಲೂ ಚೇರಲ್ಲಿ ಹೊಡೆದವರ ಮೇಲೂ ಕೇಸ್ ಆಗಲೇಬೇಕು ಎಂದು ಹೇಳಿದ್ದಾರೆ.
ನಮ್ಮ ಯೂತ್ ಕಾಂಗ್ರೆಸ್ ನಿಂದ NSUI ನಿಂದ ಪ್ರತಿಭಟನೆ ಆಗಿದೆ. ಬೆಂಗಳೂರಿನ ಚಿಂತನ ಮಂಥನ ಶಿಬಿರದಲ್ಲೂ ಇದೇ ಮಾತಾಗಿದೆ. ನಮ್ಮೆಲ್ಲ ನಾಯಕರು ಪೊಲೀಸ್ ರವರ ಜೊತೆ ರಿಕ್ವೆಸ್ಟ್ ಮಾಡಿದ್ದಾರೆ ಎಂದಿದ್ದಾರೆ. ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಹಚ್ಚಿದ ವಿಚಾರವಾಗಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಚಡ್ಡಿಗೂ ಇದಕ್ಕೂ ಏನ್ ಸಂಬಂಧ ಇದೆ ಇವಾಗ? ಅವರು ಚಡ್ಡಿಗೆ ಬೆಂಕಿ ಹಚ್ಚೋಕೆ ಟ್ರೈ ಮಾಡಿದ್ದು, ಇಲ್ಲಿ ಕೇಸ್ ಹಾಕಿರುವುದೆ ಬೇರೆ. ಮನೆ ಸುಟ್ಟಿರುವ ಹಾಗೆ ಕೇಸ್ ಹಾಕ್ತಾರಲ್ಲ. ಅದು ಆರ್‌ಎಸ್‌ಎಸ್‌ನ ಚಡ್ಡಿ ಅಲ್ವೇ ಅಲ್ವಲ್ಲ. ತುಮಕೂರಿನ ಜಿಲ್ಲಾ ಕಾರಾಗೃಹದ ಬಳಿ ರಕ್ಷಾ ರಾಮಯ್ಯ ಹೀಗೆ ಹೇಳಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಕಡ್ಡಾಯ: ಬೆಂಗಳೂರು ಸ್ವಚ್ಛತೆ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕಮಿಟಿಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.