ವರ್ಷಾಂತ್ಯವನ್ನ ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು ಅಂದ್ರೆ ನಿಮಗೆ ರೂಮ್ ಸಿಗಲ್ಲ..! 

 ಅಂತು ಇಂತು 2023ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು, 2024ನ್ನ ಅದ್ಧೂರಿಯಾಗಿ ಸ್ವಾಗತಿಸ್ಬೇಕು ಅಂತ ಎಲ್ರೂ ಕಾತರದಿಂದಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳೋ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿದೆ. 

Written by - Zee Kannada News Desk | Last Updated : Dec 29, 2023, 11:56 PM IST
  • ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ
  • ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್‍ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ
  • ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ
 ವರ್ಷಾಂತ್ಯವನ್ನ ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು ಅಂದ್ರೆ ನಿಮಗೆ ರೂಮ್ ಸಿಗಲ್ಲ..!  title=

ಚಿಕ್ಕಮಗಳೂರು: ಅಂತು ಇಂತು 2023ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡ್ಬೇಕು, 2024ನ್ನ ಅದ್ಧೂರಿಯಾಗಿ ಸ್ವಾಗತಿಸ್ಬೇಕು ಅಂತ ಎಲ್ರೂ ಕಾತರದಿಂದಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳೋ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿದೆ. ಟೂರಿಸ್ಟ್‍ಗಳು ಡಿಸೆಂಬರ್ 30 ಬರೋದನ್ನೇ ಕಾಯ್ತಿದ್ದಾರೆ. ಕಾಫಿನಾಡಲ್ಲಿ ರೂಂ ಬುಕ್ ಮಾಡಿದ್ರೆ ಮಾತ್ರ ಬನ್ನಿ. ಹೋಗಿ ನೋಡೋಣ. ಹುಡುಕೋಣ. ಸಿಗುತ್ತೆ ಅಂತ ಬಂದು ರೂಂ ಹುಡೋಕಾದ್ರೆ ಬರ್ಲೇಬೇಡಿ... ಮಲ್ಗೋಕಲ್ಲ.... ಕೂರೋದಕ್ಕೂ ಜಾಗ ಸಿಗೋದು ಡೌಟ್..... 

ಇದನ್ನೂ ಓದಿ- Baba Vanga: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು?

ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್‍ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಾಫಿನಾಡು ಚಿಕ್ಕಮಗಳೂರಂತೂ ಫುಲ್ ಹೌಸ್ಫುಲ್. ಎಲ್ಲಿ ನೋಡಿದ್ರು ಪ್ರವಾಸಿಗರ ದಂಡು. ಇಯರ್ ಎಂಡ್ ಆಗಿರೋದ್ರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಯಲ್ಲಿ ಪ್ರತಿ ದಿನ ಜನಸಾಗರವೇ ಸೇರ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ಫುಲ್ ಬುಕ್ ಆಗಿವೆ. ಬಹುತೇಕರು ಇಯರ್ ಎಂಡ್, ನ್ಯೂ ಇಯರ್ಗೆ ಬುಕ್ ಮಾಡಿಸಿದ್ದಾರೆ. ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. 10-15 ದಿನ ಕೆಲವರು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದ್ದಾರೆ. ಕಾಫಿನಾಡಲ್ಲಿರೋ ಸುಮಾರು 1400ಕ್ಕೂ ಅಧಿಕ ಹೋಂಸ್ಟೇ ಹಾಗೂ 200ಕ್ಕೂ ಹೆಚ್ಚು ರೆಸಾರ್ಟ್‍ಗಳು ಆಲ್ ಮೋಸ್ಟ್ ಬುಕ್ ಆಗಿವೆ. ಫುಲ್ ಆಗಿವೆ. ಡಿಸೆಂಬರ್ ತಿಂಗಳಲ್ಲಿ ಕಾಫಿನಾಡಿಗೆ 11 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದ್ರೆ, ಡಿಸೆಂಬರ್ 30-31 ಹಾಗೂ ಜನವರಿ 1ರ ಮೂರೇ ದಿನಕ್ಕೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಫಿನಾಡಲ್ಲಿ ಜಮಾಯಿಸಲಿದ್ದಾರೆ. 

ಇದನ್ನೂ ಓದಿ- Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ!

ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡೋದು ಗ್ಯಾರಂಟಿ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗೋ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗ್ರು ಮೈಮರೆಯುತ್ತಿದ್ದಾರೆ. ಆದ್ರೆ, ಪ್ರವಾಸಿಗರ ದಂಡನ್ನ ಕಂಡ ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳ್ತಿರೋದು ಉಂಟು. ಆದ್ರೆ, ಆಯ್ತು ಕೊಡ್ತೀವಿ. ಮೊದ್ಲು ರೂಂ ಕೊಡಿ ಎಂದೇಳ್ತಿರೋ ಪ್ರವಾಸಿಗ್ರು ಇದ್ದಾರೆ. ಜಿಲ್ಲೆಯ ಬಹುತೇಕ ಹೋಂಸ್ಟೆ, ರೆಸಾರ್ಟ್, ಲಾಡ್ಜ್‍ಗಳು ಭರ್ತಿಯಾಗಿದ್ದು, ಬುಕ್ಕಿಂಗ್ ಕ್ಯಾನ್ಸಲ್ ಆದ್ರಷ್ಟೆ ರೂಂ ಸಿಗೋದು ಎಂಬಂತಾಗಿದೆ. ಇನ್ನು ಹೋಂಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ದಾರೆ. 

ಒಟ್ಟಾರೆ, ಕಳೆದ ವರ್ಷ ಕೊರೋನಾ ಆತಂಕವಿಲ್ಲದೆ ನಿರಾತಂಕವಾಗಿ ಹೊಸ ವರ್ಷ ಆಚರಣೆ ಮಾಡಿದ್ದ ಜನ ಈ ವರ್ಷ ಮತ್ತೆ ಕರೋನಾ ಭಯದ ನೆರಳಲ್ಲೇ ಹೊಸ ವರ್ಷಕ್ಕೆ ವೆಲ್ ಕಂ ಹೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಪ್ರವಾಸಿಗರು ಮಾತ್ರ ಯಾವ ಕೊರೋನಾಗು ತಲೆ ಕೇಡಿಸಿಕೊಳ್ತಿಲ್ಲ. ಬರೋದೆಲ್ಲಾ ಬರ್ಲಿ ಅಂತ ಕೊರೋನಾ ಭಯದ ಮಧ್ಯೆಯೂ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆನೋ ಸರ್ಕಾರ ಕೂಡ ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹಾಗಾಗಿ, ಖುಷಿಯಾಗಿರೋ ಪ್ರವಾಸಿಗರು ಕಾಫಿನಾಡಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆ ಮಾಡ್ಕೊಂಡು ಭಾನುವಾರ ರಾತ್ರಿಯಾಗೋದ್ನೆ ಕಾಯ್ತಿದ್ದಾರೆ.

-ಮಧುಸೂಧನ್ ಝೀ ಕನ್ನಡ ನ್ಯೂಸ್ ಚಿಕ್ಕಮಗಳೂರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News