'ಒಂಟಿ ಸಲಗ ನಾನು ಯಾರಿಗೂ ಹೆದರುವುದಿಲ್ಲ'– ಯತ್ನಾಳ್

ಬಿಜೆಪಿ   ಹೈಕಮಾಂಡ್ ನೊಟೀಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ನೊಟೀಸ್ ಇನ್ನೂ ನನ್ನ ಕೈಸೇರಿಲ್ಲ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್  ಹೇಳಿದ್ದಾರೆ

Written by - Ranjitha R K | Last Updated : Feb 12, 2021, 08:32 PM IST
  • ನೊಟೀಸ್ ನನ್ನ ಕೈಸೇರಿಲ್ಲ - ಯತ್ನಾಳ್
  • ನೊಟೀಸ್ ಸಿಕ್ಕಿದ ನಂತರವೇ ಪ್ರತಿಕ್ರಿಯೆ - ಬಸನಗೌಡ ಪಾಟೀಲ್ ಯತ್ನಾಳ್
  • 'ಒಂಟಿ ಸಲಗ ನಾನು ಯಾರಿಗೂ ಹೆದರುವುದಿಲ್ಲ' – ಯತ್ನಾಳ್
'ಒಂಟಿ ಸಲಗ ನಾನು  ಯಾರಿಗೂ ಹೆದರುವುದಿಲ್ಲ'– ಯತ್ನಾಳ್ title=
ನೊಟೀಸ್ ನನ್ನ ಕೈಸೇರಿಲ್ಲ - ಯತ್ನಾಳ್ (file photo)

ಬೆಂಗಳೂರು : ಬಿಜೆಪಿ  (BJP) ಹೈಕಮಾಂಡ್ ನೊಟೀಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ನೊಟೀಸ್ (Notice) ಇನ್ನೂ ನನ್ನ ಕೈಸೇರಿಲ್ಲ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ (Basanagowda Patil Yatnal)  ಹೇಳಿದ್ದಾರೆ. ನೊಟೀಸ್ ಕೈಸೇರದ ಹೊರತು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ನಾನು ಒಂಟಿ ಸಲಗ ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ (BJP) ರಾಜ್ಯ ನಾಯಕತ್ವದ ವಿರುದ್ಧ ಒಂದಿಲ್ಲ ಒಂದು ಹೇಳಿಕೆ ನೀಡುತ್ತಿದ್ದ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಗೆ (Basanagowda Patil Yatnal) ಬಿಜೆಪಿ ಶೋಕಾಸ್ ನೊಟೀಸ್ ಜಾರಿಗೊಳಿಸಿದೆ. ಈ ಬಗ್ಗೆ ಮಾತನಾಡಿದ ಯತ್ನಾಳ್ (Yatnal) ಊಹಾ ಪೋಹದ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ನೊಟೀಸ್ ಇನ್ನೂ ನನ್ನ ಕೈ ಸೇರಿಲ್ಲ. ನೊಟೀಸ್ (Notice) ಸಿಕ್ಕಿದ ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿಯೂ ಹೇಳಿದ್ದಾರೆ. ಅಲ್ಲದೆ ನಾನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ, ರಾಷ್ಟ್ರ ನಾಯಕರ ವಿರುದ್ಧವೂ ಯಾವ ಹೇಳಿಕೆಗಳನ್ನು ನೀಡಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ : BJP: ಯತ್ನಾಳ್ ಗೆ 'ಬಿಗ್ ಶಾಕ್' ನೀಡಿದ ಕೇಂದ್ರ ಬಿಜೆಪಿ ಶಿಸ್ತು ಸಮಿತಿ..!

ನರೇಂದ್ರ ಮೋದಿಯವರ (Narendra Modi) ಆಶಯಕ್ಕೆ ತಕ್ಕ ಹಾಗೆ ಸರ್ಕಾರ ಕೆಲಸ ಮಾಡದೇ ಹೋದರೆ ಹೇಳಿಕೆಗಳನ್ನು ನೀಡುತ್ತೇನೆ, ನೀಡುವ ಹೇಳಿಕೆಗಳನ್ನು ಯಾಕೆ ನೀಡಿದ್ದೇನೆ ಎಂದು ಕೂಡಾ ವಿವರಿಸುತ್ತೇನೆ ಎಂದವರು ಹೇಳಿದ್ದಾರೆ. ನಾನೂ ಯಾವತ್ತೂ ಸಚಿವ ಸ್ಥಾನಕ್ಕಾಗಿ (Ministry) ಆಸೆಪಟ್ಟವನಲ್ಲ, ಜನಪರ ಕೆಲಸ ಮಾಡುವುದೇ ನನ್ನ ಉದ್ದೇಶ, ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಯಾರ ಮುಲಾಜೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Laxmi Hebbalkar: 'ಪಕ್ಷ ಬಯಸಿದ್ರೆ ಗೋಕಾಕ್ ನಲ್ಲಿ ನಾನೇ ಅಭ್ಯರ್ಥಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News