ಬೆಂಗಳೂರು : ಬಸನಗೌಡ ಪಾಟೀಲ್ ಯತ್ನಾಳ್ ಯಾರು? ಅವರು ಪಕ್ಚದ ಅಧ್ಯಕ್ಷರಲ್ಲ, ಯತ್ನಾಳ್ ಒಬ್ಬ ಸಾಮಾನ್ಯ ಶಾಸಕ. ಬೀದಿಯಲ್ಲಿ ಮಾತಾಡೋದು ಯತ್ನಾಳ್ ರಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸ್ವಪಕ್ಷದ ಶಾಸಕನ ವಿರುದ್ಧವೇ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡ, ಪಕ್ಷದ ನಾಯಕತ್ವದ ಕುರಿತಾಗಿ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ನೀಡಿದ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೊಂದನ್ನು ಅವರವರೇ ಅರ್ಥ ಮಾಡ್ಕೋಬೇಕು. ಇಂಥ ವಿಷಯಗಳನ್ನೆಲ್ಲ ಮಾತನಾಡಲು ಬಸನಗೌಡ ಪಾಟೀಲ್ (BasavnaGowda Patil Yatnal) ಯಾರು? ಅವರಿಗೆ ಏನೇ ಮಾತನಾಡುವುದಿದ್ದರೂ ಪಕ್ಷದ ಚೌಕಟ್ಟಿನೊಳಗೆ ಮಾತಾಡಲಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಇಂಥಹ ಹೇಳಿಕೆಗಳನ್ನು ನೀಡುವುದನ್ನು ಯತ್ನಾಳ್ ನಿಲ್ಲಿಸಲಿ ಎಂದು ಬಿಜೆಪಿ ಮುಖಂಡ ಡಿ. ವಿ ಸದಾನಂದ ಗೌಡ (D V Sadananda Gowda) ಆಕ್ರೋಶ ವ್ಯಕ್ತಪಡಿಸಿ್ದ್ದಾರೆ.
ALSO READ : ಕೇರಳದ ಅತ್ಯಂತ ಕಿರಿಯ ಮೇಯರ್ ಆದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ..!
ಯತ್ನಾಳ್ ಅವರಿಗೆ ಏನೆ ಹೇಳುವುದಿದ್ದರೂ ಬಿಜೆಪಿಯ (BJP) ರಾಷ್ಟ್ರ ನಾಯಕರ ಎದುರು ಅಥವಾ ಪಕ್ಷದ ರಾಜ್ಯಾಧ್ಯಕ್ಷರ ಮುಂದೆ ಹೇಳಿಕೊಳ್ಳಲಿ. ಅದು ಬಿಟ್ಟು ಬೀದಿಯಲ್ಲಿ ನಿಂತು ಹೇಳಿಕೆಗಳನ್ನು ಕೊಡುವುದರಿಂದ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸದಾನಂದ ಗೌಡ (DVS) ಹೇಳಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಇಂಥ ಹೇಳಿಕೆಗಳನ್ನು ಯತ್ನಾಳ್ ಕೊಡದಿರಲಿ ಎಂದು ಡಿವಿಎಸ್ ಹೇಳಿದ್ದಾರೆ.
ಕೆಲವರನ್ನು ಅವರರವೇ ಅರ್ಥ ಮಾಡಿಕೊಳ್ಳಬೇಕು, ಕೆಲವರಿಗೆ ಕೆಲ ಸಂದರ್ಭ, ಸಮಯ ಬರುತ್ತದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳೋದಕ್ಕಾಗಿ ಕೆಲವರು ಮಾತಾಡ್ತಾರೆ. ಅವರ ಮಾತುಗಳೆಲ್ಲವೂ ಸರಿ ಇರುವುದಿಲ್ಲ ಎಂದು ಯತ್ನಾಳ್ ವಿರುದ್ಧ ಸದಾನಂದ ಗೌಡ ಖಾರವಾಗಿಯೇ ನುಡಿದಿದ್ದಾರೆ.
ALSO READ : ಎಂಜಿನಿಯರಿಂಗ್, ಡಿಪ್ಲೊಮೋ, ಪದವಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲು ಸರಕಾರ ಸಿದ್ಧ: ಅಶ್ವಥನಾರಾಯಣ
ಪಕ್ಷದ ನಾಯಕತ್ವದ ಕುರಿತು ಯತ್ನಾಳ್ ಹೇಳಿಕೆ ನೀಡಿದ್ದರು. ಸಂಕ್ರಮಣದ ಬಳಿಕ ಉತ್ತರಕ್ಕೆ ಉತ್ತರಾಯಣ ಎಂದು ಯತ್ನಾಳ್ (Yatnal) ಹೇಳಿದ್ದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.