ನಮಗೆ ಮಹಿಷಾಸುರನಂತಹ ಮುಖ್ಯಮಂತ್ರಿ ಬೇಡ: ನಟಿ ತಾರಾ

ಬಿ.ಎಸ್.ಯಡಿಯೂರಪ್ಪ ನಿಜವಾದ ದೇವರು. ಅಂಥ ದೇವರನ್ನು ಬಿಟ್ಟು ಸಿಎಂ ಸ್ಥಾನದಲ್ಲಿ ಬೇರೆ ಯಾರನ್ನೂ ನೋಡಲು ನಮ್ಮಿಂದ ಸಾಧ್ಯವಿಲ್ಲ ಎಂದು ನಟಿ ತಾರಾ ಹೇಳಿದ್ದಾರೆ. 

Last Updated : Oct 28, 2018, 07:12 PM IST
ನಮಗೆ ಮಹಿಷಾಸುರನಂತಹ ಮುಖ್ಯಮಂತ್ರಿ ಬೇಡ: ನಟಿ ತಾರಾ title=

ಬಾಗಲಕೋಟೆ: 'ನಮಗೆ ಬೇಕಿರುವುದು ಮಹಿಷಾಸುರನಂತಹ ಮುಖ್ಯಮಂತ್ರಿ ಅಲ್ಲ, ದೇವರಂತಹ ಮುಖ್ಯಮಂತ್ರಿ' ಎಂದು ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದ್ದಾರೆ. 

ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯುರಪ್ಪ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ನಮಗೆ ಅವರಂತೆ ದೇವರಂಥ ಮುಖ್ಯಮಂತ್ರಿ ಬೇಕು. ಮಹಿಷಾಸುರನಂತಹ ಮುಖ್ಯಮಂತ್ರಿ ಅಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಅವರನ್ನು ಮಹಿಷಾಸುರನಿಗೆ ಹೋಲಿಸಿದರು. 

ಬಿ.ಎಸ್.ಯಡಿಯೂರಪ್ಪ ಅವರು ಜಾತಿ-ಧರ್ಮ, ಬಡವ-ಬಲ್ಲಿದ ಎನ್ನದೇ ಎಲ್ಲರಿಗೂ ಸಮಪಾಲು ಸಮಬಾಳು ಎನ್ನುವ ರೀತಿಯಲ್ಲಿ ಆಡಳಿತ ನಡೆಸಿದರು. ಈ ವಿಚಾರದಲ್ಲಿ ಯಡಿಯೂರಪ್ಪ ನಿಜವಾದ ದೇವರು. ಅಂಥ ದೇವರನ್ನು ಬಿಟ್ಟು ಸಿಎಂ ಸ್ಥಾನದಲ್ಲಿ ಬೇರೆ ಯಾರನ್ನೂ ನೋಡಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ದೇವರೇ ಬೇಕೆ ಹೊರತು ಮಹಿಷಾಸುರನಂಥವರಲ್ಲ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

Trending News